ಕುಕ್ಕೆ ಸುಬ್ರಹ್ಮಣ್ಯ(ಜೂ ,06): ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಈಶ್ವರ್ ಮಲ್ಪೆ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಈಶ್ವರ ಮಲ್ಪೆ ಅವರ ಟ್ರಸ್ಟ್ ಗೆ ಗ್ರಾಮ ಪಂಚಾಯತ್ ಸದಸ್ಯರ ಗೌರವಧನದಿಂದ ಸುಮಾರು ಹತ್ತು ಸಾವಿರ ರೂಪಾಯಿಯನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಎನ್ ಎಸ್,ಸದಸ್ಯರಾದ ವೆಂಕಟೇಶ್ ಎಚ್ ಎಲ್, ಗಿರೀಶ್ ಆಚಾರ್ಯ, ದಿಲೀಪ್ ಕಲ್ಲಾಜೆ, ಸವಿತಾ ಭಟ್, ಭಾರತಿ ದಿನೇಶ್, ಪಿಡಿಒ ಮಹೇಶ್ ,ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.