ಕೋಡಿ(ಡಿ.24): ಇಲ್ಲಿನ ಬ್ಯಾರೀಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ, ಜ್ಞಾಪಕಶಕ್ತಿ ಮತ್ತು ಅಧ್ಯಯನ ಕೌಶಲ್ಯಗಳ ಕುರಿತು ಕಾರ್ಯಾಗಾರ ಡಿಸೆಂಬರ್ 23 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಸಿಗ್ಮಾ, ಬೆಂಗಳೂರು ಇದರ ಸಿ.ಇ.ಒ ಮತ್ತು ಸಂಸ್ಥಾಪಕರಾದ ಶ್ರೀ. ಅಮೀನ್ .ಇ ಮುದಸ್ಸರ್, ಆಗಮಿಸಿದ್ದರು. ದ್ವಿತೀಯ ಪಿಯುಸಿ ತರಗತಿಗಳಿಗೆ ಬಹುವಿಧದ ಜ್ಞಾಪಕಶಕ್ತಿಯ ತಂತ್ರಗಳನ್ನು ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳು […]
Tag: Bearys college
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ: ನ್ಯಾಕ್ ಮಾನ್ಯತೆ ಮತ್ತು ಒಳನೋಟಗಳು ಕಾರ್ಯಾಗಾರ
ಕುಂದಾಪುರ:(ಡಿ,19) : ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರದಲ್ಲಿ “ಎಚ್ಇಐಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸುವುದು, ನ್ಯಾಕ್ ಮಾನ್ಯತೆ ಮತ್ತು ಒಳನೋಟಗಳು” ಎಂಬ ವಿಷಯದ ಮೇಲೆ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ (ಎಫ್ಡಿಪಿ) ಡಿಸೆಂಬರ್ ,19 ರಂದು ನಡೆಯಿತು. ಸಹಾಯಕ ಪ್ರಾಧ್ಯಾಪಕ ಮತ್ತು ಮಾಜಿ ಐಕ್ಯೂಎಸಿ ಸಂಚಾಲಕರಾದ ಶ್ರೀ. ಹಾರ್ದಿಕ್ ಪಿ. ಚೌಹಾಣ್, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ನ್ಯಾಕ್ ಅಕ್ರೆಡಿಟೇಶನ್ ಪ್ರಕ್ರಿಯೆ ಮತ್ತು ಎಚ್ಇಐಗಳಲ್ಲಿ ಗುಣಮಟ್ಟವನ್ನು ಕಾಪಾಡುವ ಉತ್ತಮ ಮಾರ್ಗಗಳ ಬಗ್ಗೆ […]
ಕೋಡಿ ಬ್ಯಾರೀಸ್: 37 ನೇ ‘ಸ್ವಚ್ಛ ಕಡಲತೀರ – ಹಸಿರುಕೋಡಿ’ ಅಭಿಯಾನ
ಕೋಡಿ ( ಡಿ .02): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ, ಇದರ 37 ನೇ ‘ಸ್ವಚ್ಛ ಕಡಲತೀರ – ಹಸಿರು ಕೋಡಿ’ ಅಭಿಯಾನ ಡಿ.01 ರಂದು ಯಶಸ್ವಿಯಾಗಿ ನಡೆಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿ ಇವರು ಅಭಿಯಾನವನ್ನುದ್ದೇಶಿಸಿ “ಭಗವಂತನಿಗೆ ಪ್ರೀತಿಪೂರ್ವಕವಾದ ಈ ಕಾಯಕವು ನಿರಂತರವಾಗಿ ಸಾಗಬೇಕಾದದ್ದು ಮಾತ್ರವಲ್ಲದೆ, ಮಾಡುವ ಕೆಲಸದಲ್ಲೂ ಪರಿವರ್ತನೆಯಾಗಬೇಕು: ಪ್ರಸಾದ ನೀಡುವ ಅರ್ಚಕನಿಗಿಂತ, ಪ್ರಸಾದ ಸ್ವೀಕರಿಸುವ ಭಕ್ತನಿಗೆ ಹೇಗೆ ಪ್ರಸಾಧದ […]
ಬ್ಯಾರಿಸ್ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಕುಂದಾಪುರ (ನ. 27): ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸಂವಿಧಾನ ದಿನವನ್ನು ನವೆಂಬರ್,26ರಂದು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಬೀನಾ. ಎಚ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದೇಶ ಸುವ್ಯವಸಿತವಾಗಿ ಅಭಿವೃದ್ಧಿಯತ್ತ ಸಾಗುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ, ಭಾರತೀಯ ಸಂವಿಧಾನ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದ್ದು ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ […]
ಬ್ಯಾರೀಸ್ ಪದವಿ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ
ಕೋಡಿ( ನ,16): ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಇಲ್ಲಿ 2024-25 ನೇ ಸಾಲಿನ ರಕ್ಷಕ-ಶಿಕ್ಷಕ ಸಭೆ ನವೆಂಬರ್ ,16 ರಂದು ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇದರ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್ಚಂದ್ರ ಶೆಟ್ಟಿ ಇವರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿ ಪೋಷಕರನ್ನುದ್ದೇಶಿಸಿ “ಮಾನವ ಜನ್ಮ ಶ್ರೇಷ್ಠತಮವಾದುದು ವಿಜ್ಞಾನವನ್ನು ವರವಾಗಿ ಬಳಸಿ ದೇಶದ ಆಸ್ತಿಯಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ […]
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ : ವಾರ್ಷಿಕ ಕ್ರೀಡಾಕೂಟ
ಕೋಡಿ (ನ.14): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನೆರವೇರಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಗೋಲ್ಡ್ ಮೆಡಲಿಸ್ಟ್ ವೇಟ್ ಲಿಫ್ಟರ್ ಶ್ರೀ. ಗುರುರಾಜ್ ಪೂಜಾರಿ ಚಿತ್ತೂರು ಇವರು ಕ್ರೀಡಾಕೂಟವನ್ನುದ್ದೇಶಿಸಿ “ಮಗುವಿಗೆ ಕೇವಲ ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ದೊರೆತರೆ ಸಾಲದು, ವ್ಯಕ್ತಿಯು ಬೌದ್ಧಿಕ, ಮಾನಸಿಕ ದೈಹಿಕವಾಗಿ, ಸದೃಢವಾಗಲು ಕ್ರೀಡೆ ಅತೀ ಅವಶ್ಯ. ಆ ನೆಲೆಯಲ್ಲಿ ಬ್ಯಾರೀಸ್ ಸಮೂಹ […]
ಕೋಡಿ ಬ್ಯಾರೀಸ್ ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಕುಂದಾಪುರ ( ನ .05): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಇದರ ಆಶ್ರಯದಲ್ಲಿ”ದೀಪಾವಳಿ ಆಚರಣೆ” ವಿಶೇಷವಾಗಿ ಜರುಗಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯರಾದ ಸಿದ್ದೀಕ್ ಬ್ಯಾರಿ ಇವರು ಕಾರ್ಯಕ್ರಮವನ್ನುದ್ದೇಶಿಸಿ “ಹಬ್ಬಗಳು ಸೌಹಾರ್ದತೆಯ ಮೂಲ ಸಂಕೇತಗಳು, ನಮ್ಮ ಮನದಲ್ಲಿಯ ಅಜ್ಞಾನ ಹಾಗೂ ಅಂಧಕಾರಗಳು ದೂರವಾಗಿ ವಿಶ್ವಕುಟುಂಬಿಯಾಗಬೇಕು. ಇದರ ಮೂಲಕ ನಾವು ವಿಶ್ವಶಾಂತಿಯನ್ನು ಕಾಣುವಂತಾಗಬೇಕು ಎಂದು ನುಡಿದರು”. ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ […]
ಬ್ಯಾರೀಸ್ ಪದವಿ ಕಾಲೇಜಿನಲ್ಲಿ “ರಾಷ್ಟ್ರೀಯ ಏಕತಾ ದಿನಾಚರಣೆ”
ಕೋಡಿ ( ನ.01): ಬ್ಯಾರಿಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ರಾಷ್ಟ್ರೀಯ ಏಕತಾ ದಿನಾಚರಣೆ” ಆಚರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಬೀನಾ.ಹೆಚ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ. ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನುದ್ದೇಶಿಸಿ “ವಲ್ಲಭಭಾಯಿ ಪಟೇಲರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ಗಾಂಧೀಜಿಯ ಆದರ್ಶಗಳಿಂದ ಪ್ರಭಾವಿತರಾದದ್ದು ಮಾತ್ರವಲ್ಲದೆ ಏಕತೆಯ ಸಂಘಟನೆ […]
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು : ಡೆಂಗ್ಯೂ ಜಾಗೃತಿ ಕಾರ್ಯಕ್ರಮ
ಕುಂದಾಪುರ ( ಆ .09): ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಸಹಯೋಗದೊಂದಿಗೆ ಡೆಂಗ್ಯೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಪ್ರೇಮಾನಂದರವರು “ಡೆಂಗ್ಯೂ ಎಂಬುದು ಸೊಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಾಗಿದೆ. ಡೆಂಗ್ಯೂ ಜ್ವರದ ರೋಗದ ಲಕ್ಷಣಗಳನ್ನು ತಿಳಿಸುತ್ತಾ, ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮವನ್ನು ಸಮಗ್ರವಾಗಿ ವಿವರಿಸಿದರು. […]
ಕೋಡಿಬ್ಯಾರೀಸ್ ಪದವಿ ಕಾಲೇಜಿನಲ್ಲಿ “ಯುವಶಕ್ತಿಹಾಗೂನಾಯಕತ್ವ” ವಿಶೇಷ ಉಪನ್ಯಾಸ
ಕುಂದಾಪುರ ( ಆ,08): ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ “ಯುವಶಕ್ತಿ ಮತ್ತು ನಾಯಕತ್ವ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಂಡಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕರೂ, ತಾಳಮದ್ದಲೆ ಅರ್ಥದಾರಿಗಳಾದ ಶ್ರೀ. ಮುಸ್ತಾಕ್ ಹೆನ್ನಾಬೈಲು ಇವರು “ಈ ಜಗತ್ತಿನಲ್ಲಿ ಸರ್ವರೂ ಪ್ರತಿಭಾನ್ವಿತರೇ ಆಗಿ ಜನ್ಮ ತಳೆದರೂ ತಮ್ಮೊಳಗಿನ ಅಂತಸ್ತವಾಗಿರುವ ಪ್ರತಿಭೆಯನ್ನು ಹುಡುಕುಲ್ಲಿ ಅಸಮರ್ಥರಾಗುತ್ತೇವೆ, ಶಿಕ್ಷಣ ಪಡೆಯುವುದರಿಂದ ನಾಯಕರ ಸೃಷ್ಟಿಯಾಗದು. […]