Views: 360
ಗೋಪಾಡಿ (ಜೂ, 08): ಗೋಪಾಡಿ ಗ್ರಾಮದ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಇವರ ಮನೆಯಲ್ಲಿ ಒಂದೇ ಬಾರಿಗೆ 80 ಬ್ರಹ್ಮಕಮಲ ಹೂವುಗಳು ಅರಳಿದೆ. ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂವುಗಳು ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಹಾಗೆಯೇ ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಇದರ ವಿಶೇಷ .