ಕುಂದಾಪುರ( ಫೆ ,18) : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಗ್ರಹ ಚೇತನ ಮತ್ತು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯ್ದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಫೆಬ್ರವರಿ 18 ರಂದು ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ ಫಲಾನುಭವಿಗಳಿಗೆ ಚಕ್ ವಿತರಿಸಿ ಕುಂದಾಪುರ ತಾಲೂಕು ಯುವ ಬಂಟರ ಸಂಘ ದಶಮ ಸಂಭ್ರಮದ ಸಂದರ್ಭದಲ್ಲಿ ಹಾಕಿಕೊಂಡ ಯೋಜನೆಗಳು ಶ್ಲಾಘನೀಯವಾದದ್ದು. ಮತ್ತು ಇತರ ಸಂಘಗಳಿಗೂ ಮಾದರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತೋಷದ ವಿಚಾರ. ಮತ್ತು ನನಗೂ ಸಂಘದ ಗೌರವಾಧ್ಯಕ್ಷರ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.
ಗ್ರಹಚೇತನ ಯೋಜನೆಯ ಫಲಾನುಭವಿಗಳಾದ ಶ್ರೀಮತಿ ಲಕ್ಷ್ಮಿ ಶೆಟ್ಟಿ ನೇರಳಕಟ್ಟೆ ಅವರಿಗೆ ಮೂರನೇ ಕಂತು 50,000, ಹಳ್ನಾಡು ಗ್ರಾಮದ ಶ್ರೀಮತಿ ಚಂದ್ರಾವತಿ ಶೆಟ್ಟಿಯವರಿಗೆ 50,000 ಹಾಗೂ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಶ್ರೀರಕ್ಷಾ ನಾಡ ಗುಡ್ಡೆಅಂಗಡಿ 10000, ಶ್ರೀ ಗೋಪಾಲ್ ಶೆಟ್ಟಿ ಮಚ್ಚಟ್ಟು 10000, ಶ್ರೀಮತಿ ಶಾರದಾ ಶೆಟ್ಟಿ ಕಾಲ್ತೊಡು 10,000, ಶ್ರೀಮತಿ ಪ್ರತಿಮಾ ಶೆಟ್ಟಿ ಶಾನಾಡಿ 10,000, ಶ್ರೀ ಶಾಶ್ವತ್ ಶೆಟ್ಟಿ ಬೆಳ್ವೆ 25000, ಶ್ರೀ ಮಂಜು ಶೆಟ್ಟಿ ಆಲೂರು 10000, ಶ್ರೀಮತಿ ಸುಪ್ರೀತಾ ದೇವಾಡಿಗ 15000, ಶ್ರೀ ನಾರಾಯಣ ದೇವಾಡಿಗ 10000, ಶ್ರೀ ಸಂಜೀವ ಶೆಟ್ಟಿ ಮರವಂತೆ 15000, ಪ್ರಭಾಕರ್ ಆಚಾರ್ಯ ಮೋರ್ಟ್ 10,000 , ಕಾಲೇಜು ವಿದ್ಯಾರ್ಥಿನಿ ಕುಮಾರಿ ಸಹನ್ಯಾ ಶೆಟ್ಟಿಯವರಿಗೆ 5000 ರೂಪಾಯಿ ಆರ್ಥಿಕ ನೆರವು ವಿತರಿಸಲಾಯಿತು.
ಸಂಘದ ಮಹಾಪೋಷಕರಾದ ಶ್ರೀ ಬಿ. ವಿನಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಶೆಟ್ಟಿ ಬಸ್ರೂರು ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಶ್ರೀ ಮನೋರಾಜ್ ಶೆಟ್ಟಿ ಜಾಂಬೂರು, ಶ್ರೀ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು ಉಪಸ್ಥಿತರಿದ್ದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.