ಕುಂದಾಪುರ (ಫೆ,05): ಬೆಂಗಳೂರಿನ ಯಲಹಂಕಾದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಕುಂದಾಪುರದ ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಸೆಂಟರ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟು 5 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದುಕೊಂಡು ಕರಾಟೆನಲ್ಲಿ ತಮ್ಮ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ. ಪದಕ ವಿಜೇತರ ವಿವರ:ಸೌರವ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, 48 ಕೆಜಿ ಕುಮೀಟೆ – 21 ವಯೋಮಿತಿ ಒಳಗಿನ ವಿಭಾಗ) […]
Author: KundaVahini Editor
ಶ್ರೀ ಶಿವಾನಂದ್ ಕೋಟೇಶ್ವರ ರವರಿಗೆ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ
ಕುಂದಾಪುರ(ಫೆ. 08): ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಮತ್ತು ನೆಲಮಂಗಲ ತಾಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಶ್ರೀ ಶಿವಾನಂದ್ ಕೋಟೇಶ್ವರ ಭಾಜನರಾಗಿದ್ದಾರೆ. ಇವರು ಇಡೂರು ಮತ್ತು ಮುದೂರಿನ ಬೆಳ್ಕಲ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿಧ್ಯಾರ್ಥಿಗಳ ಮತ್ತು ಊರಿನವರ ನೆಚ್ಚಿನ ಅಧ್ಯಾಪಕರಾಗಿದ್ದರು. ಹಲವು […]
ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ವೈಭವದ ರಥೋತ್ಸವ ಸಂಪನ್ನ
ಪುತ್ತೂರು(ಫೆ. 07): ತಾಲೂಕಿನ ಮಾತ್ರವಲ್ಲದೆ ಹತ್ತೂರಲ್ಲೂ ಜನಮೆಚ್ಚುಗೆ ಪಡೆದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ರಥೋತ್ಸವ ಫೆ. 4ರಂದು ವೈಭವದಿಂದ ನಡೆಯಿತು. ಪೂರ್ವಾಹ್ನ ರಥ ಪೂಜೆಯ ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಬಲಿ ಹೊರಟು ರಥ ಪ್ರದಕ್ಷಿಣೆಯ ಬಳಿಕ ರಥಾರೋಹಣ ನಡೆದು ಭಕ್ತಗಣ ಸಂಭ್ರಮದಿ ನೋಡುತ್ತಿದ್ದಂತೆ ಬಾನೆತ್ತರದ ಆಗಸದಲ್ಲಿ ಗರುಡಗಳೆರಡು ಪ್ರತ್ಯಕ್ಷವಾಗಿ ರಥ ಮತ್ತು ದೇವಳದ ಸುತ್ತ ಪ್ರದಕ್ಷಿಣೆ ಗೈದವು.ಬಳಿಕ ರಥದಲ್ಲಿ […]
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಹಿನ್ನೆಲೆ ಕುಂದಾಪುರ ಬಿಜೆಪಿ ನೇತೃತ್ವದಲ್ಲಿ ಸಂಭ್ರಮಾಚರಣೆ.
ಕುಂದಾಪುರ: ಫೆ:08 ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ನಿಕಟ ಪೂರ್ವ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್. ಕೆ.ಎಸ್. ಇವರ ಉಪಸ್ಥಿತಿಯಲ್ಲಿ […]
ಶ್ರೀ ನಾಗ ದೇವಸ್ಥಾನ, ಬೆಣ್ಗೆರೆ, ಗುಜ್ಜಾಡಿ: ನಾಗಮಂಡಲೋತ್ಸವ ಸುವರ್ಣ ಮಹೋತ್ಸವ:ಚಪ್ಪರ ಮುಹೂರ್ತ-ಆಮಂತ್ರಣ ಬಿಡುಗಡೆ
ಗುಜ್ಜಾಡಿ(ಫೆ,7): ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆಯಲಿರುವ ಶ್ರೀ ನಾಗ ದೇವರ ಜೀರ್ಣಾಷ್ಟಬಂಧ ಪುನಃ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 07 ರಂದು ದೇವಸ್ಥಾನದಲ್ಲಿ ನಡೆಯಿತು. ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ. ಮೇಸ್ತ, ಗೌರವಾಧ್ಯಕ್ಷ […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆ: ರಾಜ್ಯಮಟ್ಟದ ಚಿತ್ರಕಲೆಯಲ್ಲಿ ಸಾಧನೆಗೈದ ಅವನಿ ಶೆಟ್ಟಿಗಾರ್
ಕುಂದಾಪುರ(ಫೆ.4): ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ. ಶೆಟ್ಟಿಗಾರ್ ಇವಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತವನ ಟ್ರಸ್ಟ್(ರಿ.) ಹಾಗೂ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಕಾರದೊಂದಿಗೆ ಧರ್ಮಸ್ಥಳದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಈ […]
ಬಿ. ಬಿ. ಹೆಗ್ಡೆ ಕಾಲೇಜು: ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮ
ಕುಂದಾಪುರ, (ಫೆ.3): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಕೌಶಲ್ಯ (Soft Skills) ತರಬೇತಿ ಕಾರ್ಯಕ್ರಮವನ್ನು ನಾಂದಿ ಫೌಂಡೇಶನ್ ಮತ್ತು GTT ಫೌಂಡೇಶನ್ ಸಹಯೋಗದಲ್ಲಿ ಉದ್ಘಾಟಿಸಲಾಯಿತು. 8 ದಿನಗಳ ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಕೌಶಲ್ಯಗಳನ್ನು ಉತ್ತೇಜಿಸುವ ಹಾಗೂ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ತಯಾರಿಸಲು ಉದ್ದೇಶಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ […]
ವಡ್ಡರ್ಸೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ
ಕುಂದಾಪುರ, (ಫೆ 05): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ದಿನಾಂಕ ಫೆಬ್ರವರಿ 06 ರಿಂದ 12 ರ ತನಕಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಶಿಬಿರದಲ್ಲಿ ದೇವಸ್ಥಾನದ ಆವರಣ ಸ್ವಚ್ಛತೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆವರಣಗಳ ಸ್ವಚ್ಛತೆ, ವಡ್ಡರ್ಸೆ ಗ್ರಾಮ ಸ್ವಚ್ಛತಾ ಅಭಿಯಾನ, ವ್ಯಕ್ತಿತ್ವ […]
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ :ಕರ್ನಾಟಕವನ್ನು ಪ್ರತಿನಿಧಿಸಲಿರುವ ಮೊಹಮ್ಮದ್ ಸಫಾನ್
ಕುಂದಾಪುರ(ಫೆ. 04): ಇಲ್ಲಿನ ಕಂಡ್ಲೂರು ಜಿಯಾ ಪಬ್ಲಿಕ್ ಇಂಗ್ಲಿಷ್ ಮಧ್ಯಮ ಶಾಲೆಯ ಯುವ ಕರಾಟೆ ಪಟು ಮೊಹಮ್ಮದ್ ಸಫಾನ್ ಕರಾಟೆಯಲ್ಲಿ ಗಮನಾರ್ಹ ಸಾಧನೆಗೈದು ಜುಲೈನಲ್ಲಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಕರಾಟೆ ಗುರುಗಳಾದ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿಕೆ, ಮತ್ತು ಸಿಹಾನ್ ಶೇಖ್ ಬಸ್ರೂರ್ ರವರ ಮಾರ್ಗದರ್ಶನದಲ್ಲಿ ಈತ ತರಬೇತಿ ಪಡೆದಿದ್ದಾನೆ.ಈತ ಶೇಕ್ ಸಯ್ಯದ್ ಮಕ್ಬೂಲ್ ಮತ್ತು ಬಿಸ್ಮಿಲ್ಲಾ ಯಾಸ್ಮಿನ್ ರವರ […]
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ: ಅಧ್ಯಕ್ಷರಾಗಿ ರಾಜೀವ ಎನ್.ಶ್ರೀಯಾನ್ ಆಯ್ಕೆ
ಹೆಮ್ಮಾಡಿ(ಫೆ. 05): ಇಲ್ಲಿನ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ರಾಜೀವ ಎನ್.ಶ್ರೀಯಾನ್ ಗುಜ್ಜಾಡಿ ಹಾಗೂ ಉಪಾಧ್ಯಕ್ಷರಾಗಿ ಸುಮತಿ ಬಿ.ಮೊಗವೀರ ಆಯ್ಕೆಯಾಗಿದ್ದಾರೆ. ಫೆ.5ರಂದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಲೋಹಿತಾಶ್ವ ಆರ್. ಕುಂದರ್ ಬಾಳಿಕೆರೆ, ರವೀಂದ್ರ ಜಿ. ಮೆಂಡನ್ ಗುಡ್ಡಮ್ಮಾಡಿ, ಶ್ಯಾಮಲ ಜಿ.ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ವನಿತಾ ಎಸ್. ಮೊಗವೀರ […]