ಹೆಮ್ಮಾಡಿ( ಸೆ .24): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ತಾಲ್ಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ -ಜನತಾ ಕಾಲೇಜಿನ ಮಡಿಲಿಗೆ ಅವಳಿ ಪ್ರಶಸ್ತಿಗಳು
ಹೆಮ್ಮಾಡಿ(ಸೆ .11): ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಂದಾಪುರದ ಆರ್. ಎನ್ ಶೆಟ್ಟಿ ಪಿಯು ಕಾಲೇಜು ಆಯೋಜಿಸಿದ ತಾಲ್ಲೂಕು ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಜನತಾ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಸಾನ್ವಿ, ರಿತಿಷಾ, ಅನಘ, ಗ್ರೀಷ್ಮ, ಧೃತಿ , ಐಶು, ಭೂಮಿಕಾ, ದೀಕ್ಷಾ, ಅನಘ, ಸಿಂಚನ, ನಿಶ್ಮಿತಾ ಇವರುಗಳು ಕ್ರೀಡಾ ಸ್ಫೂರ್ತಿ ಮೆರೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಹಾಗೆ […]
ಯೋಗಾಸನಾ ಸ್ಪರ್ಧೆ: ಸಂದೀಪ್ ಪೂಜಾರಿ ತ್ರಾಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ( ಆ,24): ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ನೊಂ.)ಬೆಂಗಳೂರು ಮತ್ತು ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಯೋಗಾಸನಾ ಸ್ಪರ್ಧೆ ಶ್ರೀ ಅನುಭವ ಮಂಟಪ ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗ್ರಾಮ ಪಂಚಾಯತ್ ತ್ರಾಸಿ ಸಿಬ್ಬಂದಿ ಸಂದೀಪ್ ಪೂಜಾರಿಯವರು ವಿವಿಧ ಹಂತದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆ […]
ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿ: ಗಾನ ಸಂಭ್ರಮ
ಗಂಗೊಳ್ಳಿ (ಜ,20): ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರ್ಯಾಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025 ರ ಫೈನಲ್ ಸ್ಪರ್ಧೆ ಇತ್ತೀಚೆಗೆ ಸುವರ್ಣ ಸಂಗಮ ವೇದಿಕೆಯಲ್ಲಿ ನಡೆಯಿತು. ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ, ಮತ್ತು ಪ್ರಥ್ವಿ ಭಟ್ ಹಾಗು ಸ್ಟಾರ್ ಸಿಂಗರ್ ಖ್ಯಾತಿಯ ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸರಿಗಮಪ ಖ್ಯಾತಿಯ ಗಾಯಕರಾದ […]
ಸೋಮಶೇಖರ್ ಖಾರ್ವಿಯವರಿಗೆ ಬೆಸ್ಟ್ ಪೋಸರ್ ಪ್ರಶಸ್ತಿ
ಕುಂದಾಪುರ (ಅ. 15): ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸೋಮಶೇಖರ್ ಖಾರ್ವಿ ಕಂಚುಗೋಡುರವರು ಬೆಸ್ಟ್ ಪೊಸರ್ ಪ್ರಶಸ್ತಿ ಪಡೆದಿದ್ದಾರೆ. ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸೋಮಶೇಖರ ಖಾರ್ವಿ ಯವರು ಮಿಸ್ಟರ್ ಇಂಡಿಯಾ ಆಗುವ ಕನಸನ್ನು ಹೊಂದಿದ್ದಾರೆ.
ಜೆ.ಇ.ಇ ಮೈನ್ ಫಲಿತಾಂಶ ಪ್ರಕಟ – ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರಿಯೇಟಿವ್ ಕಾಲೇಜಿಗೆ ಉತ್ತಮ ಫಲಿತಾಂಶ
ಕಾರ್ಕಳ (ಏ,26): ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಮ್ 99.1312779, ನೇಹಾ ಕೆ ಉದಪುಡಿ 98.9485981, ಪ್ರಣವ್ ಟಿ ಎಮ್ 98.6313992, ಆದಿತ್ಯ ಅಲಗೌಡ ಪಾಟೀಲ್ 98.5573008, ಯುವರಾಜ್ ಬಿ ಕೆ 98.287914, ಅಕುಲ್ ಕೃಷ್ಣ ಎಮ್ ಎಸ್ 98.0229479, […]
ಡಾ.ಗಣೇಶ್ ಗಂಗೊಳ್ಳಿಯವರಿಗೆ ಡಾ. ಏ. ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿ
ಕುಂದಾಪುರ (ಜು,13) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಿದ್ಮಾ ಫೌಂಡೇಷನ್ ರಾಜ್ಯ ಸಮಿತಿಯ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜು .09 ರಂದು ನಡೆದ ರಾಜ್ಯ ಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕ್ರತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಡಿನ ಪ್ರಸಿದ್ಧ ಗಾಯಕ ಹಾಗೂ ಸಂಘಟಕ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇದರ ಜಿಲ್ಲಾ ಕಾರ್ಯಾಧ್ಯಕ್ಷ ರಾದ […]
ಮೈಸೂರು ದಸರಾ ಪ್ರಯುಕ್ತ ಬಾಡಿ ಬಿಲ್ಡಿಂಗ್ : ಸೋಮಶೇಖರ್ ಖಾರ್ವಿ ದ್ವೀತಿಯ
ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
ಯಾದಗಿರಿ ಜಿಲ್ಲೆಯ ರೈತನ ಮನವಿಗೆ ಸ್ಪಂದಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಅರುಣ ಕುಮಾರ್ ಕಲ್ಗದೆ
ಬೆಂಗಳೂರು (ಸೆ,28):ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಯವರಿಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು. ಆತ ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು […]
ಕಾಮನವೆಲ್ತ್ ಕ್ರೀಡಾಕೂಟ : ಕುಂದಾಪುರದ ಗುರುರಾಜ್ ಪೂಜಾರಿಗೆ ಕಂಚಿನ ಪದಕ
ಕುಂದಾಪುರ (ಜು, 30) : ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದ 61 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಮೂಲದ ಗುರುರಾಜ್ ಪೂಜಾರಿ ಜೆಡ್ಡು ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.ಒಟ್ಟು 269 ಕೆಜಿ ಎತ್ತಿರುವ ಗುರುರಾಜ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ.










