ಕುಂದಾಪುರ(ಫೆ.4): ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ. ಶೆಟ್ಟಿಗಾರ್ ಇವಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತವನ ಟ್ರಸ್ಟ್(ರಿ.) ಹಾಗೂ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಕಾರದೊಂದಿಗೆ ಧರ್ಮಸ್ಥಳದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಈ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಬಿ. ಬಿ. ಹೆಗ್ಡೆ ಕಾಲೇಜು: ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮ
ಕುಂದಾಪುರ, (ಫೆ.3): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಕೌಶಲ್ಯ (Soft Skills) ತರಬೇತಿ ಕಾರ್ಯಕ್ರಮವನ್ನು ನಾಂದಿ ಫೌಂಡೇಶನ್ ಮತ್ತು GTT ಫೌಂಡೇಶನ್ ಸಹಯೋಗದಲ್ಲಿ ಉದ್ಘಾಟಿಸಲಾಯಿತು. 8 ದಿನಗಳ ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಕೌಶಲ್ಯಗಳನ್ನು ಉತ್ತೇಜಿಸುವ ಹಾಗೂ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ತಯಾರಿಸಲು ಉದ್ದೇಶಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ […]
ವಡ್ಡರ್ಸೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ
ಕುಂದಾಪುರ, (ಫೆ 05): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ದಿನಾಂಕ ಫೆಬ್ರವರಿ 06 ರಿಂದ 12 ರ ತನಕಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಶಿಬಿರದಲ್ಲಿ ದೇವಸ್ಥಾನದ ಆವರಣ ಸ್ವಚ್ಛತೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆವರಣಗಳ ಸ್ವಚ್ಛತೆ, ವಡ್ಡರ್ಸೆ ಗ್ರಾಮ ಸ್ವಚ್ಛತಾ ಅಭಿಯಾನ, ವ್ಯಕ್ತಿತ್ವ […]
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ :ಕರ್ನಾಟಕವನ್ನು ಪ್ರತಿನಿಧಿಸಲಿರುವ ಮೊಹಮ್ಮದ್ ಸಫಾನ್
ಕುಂದಾಪುರ(ಫೆ. 04): ಇಲ್ಲಿನ ಕಂಡ್ಲೂರು ಜಿಯಾ ಪಬ್ಲಿಕ್ ಇಂಗ್ಲಿಷ್ ಮಧ್ಯಮ ಶಾಲೆಯ ಯುವ ಕರಾಟೆ ಪಟು ಮೊಹಮ್ಮದ್ ಸಫಾನ್ ಕರಾಟೆಯಲ್ಲಿ ಗಮನಾರ್ಹ ಸಾಧನೆಗೈದು ಜುಲೈನಲ್ಲಿ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಕರಾಟೆ ಗುರುಗಳಾದ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿಕೆ, ಮತ್ತು ಸಿಹಾನ್ ಶೇಖ್ ಬಸ್ರೂರ್ ರವರ ಮಾರ್ಗದರ್ಶನದಲ್ಲಿ ಈತ ತರಬೇತಿ ಪಡೆದಿದ್ದಾನೆ.ಈತ ಶೇಕ್ ಸಯ್ಯದ್ ಮಕ್ಬೂಲ್ ಮತ್ತು ಬಿಸ್ಮಿಲ್ಲಾ ಯಾಸ್ಮಿನ್ ರವರ […]
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ: ಅಧ್ಯಕ್ಷರಾಗಿ ರಾಜೀವ ಎನ್.ಶ್ರೀಯಾನ್ ಆಯ್ಕೆ
ಹೆಮ್ಮಾಡಿ(ಫೆ. 05): ಇಲ್ಲಿನ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ರಾಜೀವ ಎನ್.ಶ್ರೀಯಾನ್ ಗುಜ್ಜಾಡಿ ಹಾಗೂ ಉಪಾಧ್ಯಕ್ಷರಾಗಿ ಸುಮತಿ ಬಿ.ಮೊಗವೀರ ಆಯ್ಕೆಯಾಗಿದ್ದಾರೆ. ಫೆ.5ರಂದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಲೋಹಿತಾಶ್ವ ಆರ್. ಕುಂದರ್ ಬಾಳಿಕೆರೆ, ರವೀಂದ್ರ ಜಿ. ಮೆಂಡನ್ ಗುಡ್ಡಮ್ಮಾಡಿ, ಶ್ಯಾಮಲ ಜಿ.ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ವನಿತಾ ಎಸ್. ಮೊಗವೀರ […]
ಜ್ಞಾನ ಭಾರತ್-ಬಾಲಸಂಸ್ಕಾರ ಮಕ್ಕಳಿಂದ ಹಿರಿಯಡ್ಕ ದೇಗುಲ ದರ್ಶನ
ಹಿರಿಯಡ್ಕ(ಫೆ.03): ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಹಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ರಂಗಕರ್ಮಿ, ಸಾಹಿತಿ ಶ್ರೀಮತಿ ಪೂರ್ಣಿಮಾ ಸುರೇಶ್ ಸ್ಥಳ ಸಾನಿಧ್ಯದ ಪರಿಚಯ ಮಾಡಿಕೊಟ್ಟರು. ನಮ್ಮ ಊರಿನ ಕ್ಷೇತ್ರದ ಮಹಿಮೆಗಳನ್ನು, ಹಿರಿಯರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ದೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊoಡು ಹೋಗುವ […]
ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಶಿಕ್ಷಕ ನಾಗರಾಜ ಖಾರ್ವಿಯವರಿಗೆ ಕಂಚಿನ ಪದಕ
ಕುಂದಾಪುರ( ಫೆ.02): ತಪಸ್ಯ ಫೌಂಡೇಶನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಟ್ರೆಯಥ್ಲಾನ್ ಸ್ಪರ್ಧೆಯ ಒಂದು ಕಿ.ಮೀ. ಸಮುದ್ರ ಈಜು ವಿಭಾಗದಲ್ಲಿ ಮುಲ್ಲಕಾಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಜಡಿದು ಸಮುದ್ರದಲ್ಲಿ ಈಜಿದ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆ : ಜ್ಞಾಪಕ ಶಕ್ತಿ ಕಾರ್ಯಾಗಾರ
ಕುಂದಾಪುರ (ಫೆ.01): ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮತ್ತು ಆಳವಾದ ಚಿಂತನೆ ಇರಬೇಕು, ಕೇವಲ ಪರೀಕ್ಷೆಗಾಗಿ ಅಭ್ಯಾಸ ಮಾಡಬಾರದು. ಜ್ಞಾನಕ್ಕಾಗಿ ಓದಿದರೆ, ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಮೈಂಡ್ ಪವರ್ ಲರ್ನಿಂಗ್ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರೂ ಆಗಿರುವ ಎಸ್. ಪ್ರಶಾಂತ್ ತಿಳಿಸಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಯೋಜಿಸಿದ […]
ಕೋಟದಲ್ಲಿ ಕಲೋತ್ಸವ ಉದ್ಘಾಟನೆ
ಕೋಟ (ಜ,31): “ಇಂದಿನ ಕಾಲ ಘಟ್ಟದಲ್ಲಿ ಯುವ ಜನತೆ ಕಲೆ ಸಾಹಿತ್ಯದತ್ತ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಒಳ್ಳೆಯ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳಿಂದ ಕೋಟ ಪರಿಸರದ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿರುವುದು ಅಭಿನಂದನೀಯ. ಎರಡು ದಿನಗಳ ಕಲೋತ್ಸವ ಯಶಸ್ವಿಯಾಗಲಿ” ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿಯವರು ಹೇಳಿದರು. ಕೋಟ ಪಟೇಲರ ಮನೆಯಲ್ಲಿ ಆಯೋಜಿಸಿದ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ: ಎಂ ಬಿ ಎ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
ಕುಂದಾಪುರ(ಫೆ.01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಜನವರಿ 29 ರಂದು ಆಯೋಜಿಸಲಾಗಿತ್ತು . ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆಯ ಪ್ರೊಫೆಸರ್ ಡಾ. ನಿಧೀಶ್ ರಾವ್ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ […]