ಗೋಪಾಡಿ(ಜ.11): ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ(ಹೆಣ್ಣು ದೈವದ ಮನೆ ) ಹಾಗೂ ಪರಿವಾರ ದೈವಸ್ಥಾನದ 12ನೇ ವರ್ಷದ ವರ್ಧಂತ್ಯುತ್ಸವ ಜನವರಿ 25ರ ಆದಿತ್ಯವಾರ ಹಾಗೂ 26 ರ ಸೋಮವಾರದಂದು ನಡೆಯಲಿದೆ. ತಾ. 25-01-2026ನೇ ಆದಿತ್ಯವಾರ ಸಂಜೆ ಗಂಟೆ 4.00ಕ್ಕೆ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಗೋಪಾಡಿ (ಪಡು) ಇವರಿಂದ ಶ್ರೀ ಮಲಸಾವರಿ ಅಮ್ಮನವರಿಗೆ ಬೆಳ್ಳಿ ಮುಖವಾಡವನ್ನು ಶ್ರೀ ಚಿಕ್ಕು ಅಮ್ಮ ದೈವಸ್ಥಾನದಿಂದ ಪುರಮೆರವಣಿಗೆಯಲ್ಲಿ ಸಾಗಿ ಸಮರ್ಪಿಸಲಾಗುತ್ತದೆ. […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಕೊಂಕಣಿ ಕಂಠಪಾಠ ಸ್ಪರ್ಧೆ : ಸನ್ನಿಧಿ ಖಾರ್ವಿ ದ್ವಿತೀಯ ಸ್ಥಾನ
ಉಡುಪಿ ( ಜ ,03): ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ವಿಭಾಗದ ಕೊಂಕಣಿ ಕಂಠಪಾಠ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಖಾರ್ವಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಅರುಣ್ ಖಾರ್ವಿ ಹಾಗೂ ಭವಾನಿ ಖಾರ್ವಿ ದಂಪತಿಯ ಪುತ್ರಿ.
ಗಂಗೊಳ್ಳಿಯಲ್ಲಿ ನ .16 ರಂದು ಮಾತೃ ದೇವೋ ಭವ ಕಾರ್ಯಕ್ರಮ
ಗಂಗೊಳ್ಳಿ( ನ .12): ಇಲ್ಲಿನ ಶ್ರೀ ನಾರಾಯಣ ಗುರು ಜನಸೇವಾ ಬಳಗ(ರಿ.), ವತಿಯಿಂದ ಗಂಗೊಳ್ಳಿ ವಲಯದ ಅಂಗನವಾಡಿ ಮತ್ತು ಶಿಶುಮಂದಿರದ 18 ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಗೌರವಿಸುವ ಅಭಿನಂದನಾ ಸಮಾರಂಭ ಮಾತೃ ದೇವೋಭವ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ನವೆಂಬರ್ 16ರ ಭಾನುವಾರ ಸಂಜೆ 4:00 ಗಂಟೆಗೆ ನಡೆಯಲಿದೆ. ಗಂಗೊಳ್ಳಿಯ ಉದ್ಯಮಿ ವಿಠಲ ಬಿ ಶೆಣೈ ಸಮಾರಂಭವನ್ನು ಉದ್ಘಾಟಿಸಲಿದ್ದು, ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ […]
ಬಿ.ಬಿ. ಹೆಗ್ಡೆ ಕಾಲೇಜು: ತ್ರಾಸಿ ಬೀಚ್ ಕ್ಲೀನಿಂಗ್
ಕುಂದಾಪುರ (ಸೆ.20): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ತ್ರಾಸಿ ಗ್ರಾಮ ಪಂಚಾಯತ್, ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ಗಂಗೊಳ್ಳಿ ಹಾಗೂ ಸಿಬ್ಬಂದಿ ವರ್ಗ, ಸ್ವಚ್ಛ ಕರಾವಳಿ ಮಿಷನ್ ಸದಸ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಗಂಗೊಳ್ಳಿ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಖಾರ್ವಿ ಆನ್ಲೈನ್ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯ ಹಾಗೂ ಸ್ವಚ್ಛತಾ ಹೀ […]
ಸ. ಪ. ಪೂ.ಕಾಲೇಜು ಹೊಸಂಗಡಿ : ಬೀಳ್ಕೊಡುಗೆ ಸಮಾರಂಭ
ಹೊಸಂಗಡಿ( ಆ ,13): ಸರ್ಕಾರಿ ನೌಕರಿಯಲ್ಲಿದ್ದು, ಹೊಸಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಸುಮಾರು 12 ವರ್ಷಗಳ ಕಾಲ ತಮ್ಮ ಸೇವೆಯನ್ನು ಸಲ್ಲಿಸಿ, ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಜೀವಶಾಸ್ತ್ರ ಉಪನ್ಯಾಸಕ ಡಾ. ಅರುಣ್ ಕುಮಾರ್ ಶೆಟ್ಟಿ ಮತ್ತುಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರ್ಚನಾ ಇವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜರುಗಿತು. ಸ. ಪ. ಪೂ. ಕಾ. ಹೊಸಂಗಡಿಯ ಪ್ರಾಂಶುಪಾಲರಾದ ರಂಜಿತ್ ಕುಮಾರ್ ಶೆಟ್ಟಿ, ಇವರ ಘನ ಅಧ್ಯಕ್ಷತೆಯಲ್ಲಿ, ಶ್ರೀಯುತ ಗೋಪಾಲ್ ಭಟ್ […]
ಮೂಡುಬಗೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಿರ್ಮಾಣ ಶಿಲನ್ಯಾಸ ಕಾರ್ಯಕ್ರಮ
ಅoಪಾರು(ಜು,19): ಸೇವಾ ಚೇತನ ಟ್ರಸ್ಟ್ (ರಿ) ಮೂಡುಬಗೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಬಾಳ್ಕಟ್ಟು ಮೂಡುಬಗೆ ಇವರ ಮುತುವರ್ಜಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಿಲನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇವಾಲಯ ಶಿಥಿಲಾವಸ್ಥೆಯಿಂದ ಜೀರ್ಣೋದ್ದಾರಕ್ಕೆ ಸಿದ್ದವಾಗಿದೆ. ಲಯಕಾರಕನಾದ ಮಹಾದೇವನ ಮಂದಿರ ಮರಳಿ ಲಯಕ್ಕೆ ಬರುತ್ತಿದೆ. ದೇವಾಲಯಕ್ಕೊಂದು ಕಲೆ ಕೊಡುವುದೆಂದರೆ ಇಡೀ ಊರಿಗೆ ಚೈತನ್ಯ ಕೊಟ್ಟ ಹಾಗೆ .ಸಮಗ್ರ ಗ್ರಾಮದ ಅಬ್ಯುದಯದ ಆಕಾಂಕ್ಷೆಯಿಂದ ಕುಂದಾಪುರ […]
ಅಬಾಕಸ್ನಲ್ಲಿ ಎಚ್. ಎಮ್. ಎಮ್ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಫೆ,18) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ. ವಿದ್ಯಾರ್ಥಿಗಳಾದ ಶ್ರೇಯಸ್ ಆರ್ ರಾವ್, ಪ್ರಣವ್ ದ್ವಿತೀಯ ಸ್ಥಾನವನ್ನು ಮತ್ತು ಪ್ರಥ್ವಿನ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ […]
ಎಚ್.ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ
ಕುಂದಾಪುರ (ನ.1) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತುವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಬಹಳ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವವನ್ನುಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ತಾಯಿಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಸಂಜಿತ್ ಹೆಗ್ಡೆ ದಿನದಮಹತ್ವವನ್ನು ತಿಳಿಸಿದರು. ಶಿಕ್ಷಕ ರವಿಚಂದ್ರರವರ ಕನ್ನಡ ಹಿರಿಮೆಯನ್ನು ಬಿತ್ತರಿಸುವ […]
ಕೂಕನಾಡು ಪುಟ್ಟಮ್ಮ ಶೆಡ್ತಿ ನಿಧನ
ಹೆಮ್ಮಾಡಿ (ಆ.03): ಇಲ್ಲಿನ ದೇವಲ್ಕುಂದ ಗ್ರಾಮದ ಸಾಲಗದ್ದೆ ದಿ.ಶಿವರಾಮ ಶೆಟ್ರ ಪತ್ನಿ ಕೂಕನಾಡು ಪುಟ್ಟಮ್ಮ ಶೆಡ್ತಿ (93) ಅಕ್ಟೋಬರ್ 03 ರಂದು ನಿಧನ ಹೊಂದಿದ್ದಾರೆ. ಇವರು ಕೂಕನಾಡು ಅರಣ್ಯ ಗುತ್ತಿಗೆದಾರ ರಾಜರಾಮ ಶೆಟ್ಟಿ ಸೇರಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ
ಹೆಮ್ಮಾಡಿ(ಆ ,10): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪ್ರಥಮ ಪೋಷಕ-ಶಿಕ್ಷಕರ ಸಭೆ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ಮಾತನಾಡಿ ವರ್ಷದ ಶೈಕ್ಷಣಿಕ ಕಾರ್ಯಕಲಾಪಗಳ ಬಗ್ಗೆ, ಬದಲಾದ ಪರೀಕ್ಷಾ ಪದ್ದತಿಯ ಕುರಿತು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಈ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ತ್ರಿಷಾ ಸಮೂಹ ಶಿಕ್ಷಣ […]










