ಪ್ರಜಾಪ್ರಭುತ್ವವನ್ನು ಬಲಪಡಿಸಿ ಅದರ ಮೌಲ್ಯ ಮತ್ತು ತತ್ವಗಳನ್ನು ಎತ್ತಿಹಿಡಿಯಲು ವಿಶ್ವಸಂಸ್ಥೆಯ ಸಾಮಾನ್ಯಸಭೆಯು 2007 ರಲ್ಲಿ ಸೆಪ್ಟಂಬರ್ 15 ಅನ್ನು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಎಂದು ಅಂಗೀಕರಿಸಿದೆ. ಹಾಗಾಗಿ ನಮ್ಮ ಕರ್ನಾಟಕ ಸರ್ಕಾರವು ವಿಧಾನಸೌಧದಲ್ಲಿ ಸೆಪ್ಟಂಬರ್ 15 ರಂದು 10 ಲಕ್ಷ ಮಕ್ಕಳೊಂದಿಗೆ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದೆ.
2023 ರ ಜೂನ್ 30 ರಂದು ಕರ್ನಾಟಕ ಸರ್ಕಾರವು ಶಾಲಾ-ಕಾಲೇಜು ಅಸೆಂಬ್ಲಿಗಳಲ್ಲಿ ಈ ಸಂವಿಧಾನ ಪೀಠಿಕೆಯನ್ನು ಓದಲು ಹಾಗೂ ಜೀವನದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾಧಿಸಿರುವ ತತ್ವಗಳನ್ನು ಅನುಸರಿಸಲು ಪ್ರತಿಜ್ಞೆ ಮಾಡಲು ಈಗಾಗಲೇ ಆದೇಶಿಸಿದೆ. ಹಾಗೆಯೇ 2022 ರಲ್ಲಿ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರದ ಆದೇಶಕ್ಕನುಗುಣವಾಗಿ ʼಸಂವಿಧಾನ ದಿನʼವಾದ ನವೆಂಬರ್ 26 ರಂದು ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳು ಓದುವ ಮೂಲಕ ಆಚರಿಸಲಾಗುತ್ತಿದೆ.
ನಮ್ಮ ಭಾರತ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಈಪೀಠಿಕೆಯು ಸಂವಿಧಾನದ ಗುರಿ ಮತ್ತು ಆದರ್ಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಒಂದು ಭಾಗವಾಗಿದ್ದು ಇದನ್ನು ಅಮೇರಿಕಾದ ಸಂವಿಧಾನದ ಆಧಾರದ ಮೇಲೆ ಅಳವಡಿಸಿಕೊಳ್ಳಲಾಗಿದೆ.ಆಧುನಿಕ ಕಾಲದಲ್ಲಿ ಎಲ್ಲಾ ಸಂವಿಧಾನಗಳು ಪೀಠಿಕೆ(ಪ್ರಸ್ತಾವನೆ)ಯಿಂದ ಆರಂಭವಾಗುವುದು ಒಂದು ಸಂಪ್ರದಾಯವಾಗಿದೆ.ಈ ಪ್ರಸ್ತಾವನೆಯನ್ನು ಜವಾಹಾರ್ಲಾಲ್ ನೆಹರು ಮಂಡಿಸಿದ ಧ್ಯೇಯಗಳ ನಿರ್ಣಯಗಳ ಆಧಾರದ ಮೇಲೆ ಅಳವಡಿಸಿಕೊಳ್ಳಲಾಗಿದೆ. 13 ಡಿಸೆಂಬರ್ 1946 ರಂದು ಜವಾಹಾರ್ಲಾಲ್ ನೆಹರು ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು.22 ಜನವರಿ 1947 ರಂದು ಸಂವಿಧಾನ ರಚನಾ ಸಭೆ ಇದನ್ನು ಅಂಗೀಕರಿಸಿತು. ಈ ನಿರ್ಣಯದ ಆಧಾರದ ಮೇಲೆಯೇ ನಮ್ಮ ಸಂವಿಧಾನದ ಪೀಠಿಕೆಯನ್ನು ಈ ಮುಂದಿನoತೆ ರಚಿಸಲಾಗಿದೆ.
“ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ,ಸಮಾಜವಾದಿ,ಜಾತ್ಯಾತೀತ,ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು,ರಾಷ್ಟ್ರದ ಸಮಸ್ತ ಪೌರರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ಆರಾಧನೆ, ನಂಬಿಕೆ ಮತ್ತು ಧರ್ಮಗಳಲ್ಲಿ ಸ್ವಾತಂತ್ರಾö್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ, ವ್ಯಕ್ತಿ ಗೌರವ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಸಮಸ್ತ ಜನರಲ್ಲಿ ಭ್ರಾತೃತ್ವ ಮನೋಭಾವನೆಯನ್ನು ವೃದ್ಧಿಸಲು ದೃಢಸಂಕಲ್ಪಮಾಡಿ ಸಂವಿಧಾನ ರಚನಾ ಸಭೆಯಲ್ಲಿ 26 ನವೆಂಬರ್ 1949ರಂದು ನಮ್ಮ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ”.
ಪ್ರಸ್ತಾವನೆಯ ಮೂಲಪ್ರತಿಯಲ್ಲಿ ‘ಸಮಾಜವಾದಿ’,‘ಜಾತ್ಯಾತೀತ’ಮತ್ತು’ಸಮಗ್ರತೆ’ ಎಂಬ ಪದಗಳಿರಲಿಲ್ಲ. ಈ ಪದಗಳನ್ನು 1976 ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ ಸೇರಿಸಲಾಯಿತು.ಹೀಗೆ ಪೀಠಿಕೆಯು ಘನವಾದ ಮೌಲ್ಯಾದರ್ಶಗಳಿಂದ ಕೂಡಿದೆ. ಇಲ್ಲಿನ ಪ್ರತಿಯೊಂದು ಶಬ್ದವನ್ನೂ ಎಚ್ಚರಿಕೆಯಿಂದ ಮತ್ತು ದೂರದೃಷ್ಠಿಯಿಂದ ಸೇರಿಸಲಾಗಿದೆ.
ಈ ಪೀಠಿಕೆಯನ್ನು ಗಮನಿಸಿದರೆ ಸಂವಿಧಾನದ ರೂಪರೇಖೆಗಳು ಸ್ಪಷ್ಟವಾಗಿ ತಿಳಿಯುತ್ತವೆ. ಈ ಪೀಠಿಕೆಯು ಸಂವಿಧಾನದ ಆಶಯಗಳನ್ನು ಮಾತ್ರವಲ್ಲದೇ ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ.ಇದು ಮಹಾತ್ಮಾ ಗಾಂಧೀಜಿ ವರ್ಣಿಸಿದ “ನನ್ನ ಕನಸಿನ ಭಾರತ” ವನ್ನು ಸ್ಥಾಪಿಸುವ ಆಶಯವನ್ನೂ ಹೊಂದಿದೆ. ಹಾಗಾಗಿಯೇ ಇದನ್ನು ಡಾ|| ಬಿ.ಆರ್.ಅಂಬೇಡ್ಕರ್ರವರು “ಭಾರತದ ಭವಿಷ್ಯದ ಜೀವನ ವಿಧಾನದ ಕನ್ನಡಿ” ಎಂದು ಬಣ್ಣಿಸುವುದರೊಂದಿಗೆ ‘ಪ್ರಸ್ತಾವನೆಯು ಸದನದ ಪ್ರತೀ ಸದಸ್ಯರ ಆಶೋತ್ತರಗಳನ್ನು ಒಳಗೊಂಡಿದೆ’ ಎಂದಿದ್ದಾರೆ. ಈ ಪೀಠಿಕೆಯನ್ನು ಕೆಲವರು ‘ಸಂವಿಧಾನದ ಒಡವೆ’ ಎಂದರೆ, ಕೆ.ಎಂ. ಮುನ್ಸಿರವರು ‘ರಾಜಕೀಯ ಜಾತಕ’ ಎಂದಿದ್ದಾರೆ. ಹಾಗೆಯೇ ಪಂಡಿತ್ ಠಾಕೂರ್ ದಾಸ್ ‘ಪ್ರಸ್ತಾವನೆಯು ಸಂವಿಧಾನದ ಸತ್ವ,ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆಗೋಲು’ ಎಂದಿದ್ದಾರೆ.
ಈ ಪ್ರಸ್ತಾವನೆಯಲ್ಲಿ ಭಾರತದ ಪ್ರಜೆಗಳಾದ ನಾವು,ಸಾರ್ವಭೌಮ ,ಸಮಾಜವಾದಿ ,ಜಾತ್ಯಾತೀತ,ಪ್ರಜಾಸತ್ತಾತ್ಮಕ ,ಗಣರಾಜ್ಯವನ್ನಾಗಿ ,ನ್ಯಾಯ,ಸ್ವಾತಂತ್ರö್ಯ,ಸಮಾನತೆ,ಭ್ರಾತೃತ್ವ, ರಾಷ್ಟçದ ಏಕತೆ ಮತ್ತು ಸಮಗ್ರತೆ ಎಂಬ ಮೂಲತತ್ವಗಳು ಹಾಗೂ ಧ್ಯೇಯೋದ್ದೇಶಗಳು ಅತ್ಯದ್ಭುತವಾಗಿ ಪ್ರತಿಬಿಂಬಿತವಾಗಿವೆ.ಈ ಮೂಲ ತತ್ವಗಳಲ್ಲಿನ ‘ಭಾರತದ ಪ್ರಜೆಗಳಾದ ನಾವು’ ಎಂಬ ತತ್ವವನ್ನು ವಿಶ್ವಸಂಸ್ಥೆಯ ಪ್ರನಾಳಿಕೆಯಿಂದ ಹಾಗೂ ‘ಸ್ವಾತಂತ್ರö್ಯ,ಸಮಾನತೆ, ಮತ್ತು ಭ್ರಾತೃತ್ವ’ ಎಂಬ ತತ್ವಗಳನ್ನು ಫ್ರಾನ್ಸ್ ಸಂವಿಧಾನದಿAದ ಪಡೆಯಲಾಗಿದೆ.
ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವೇ?
ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವೇ/ಅಲ್ಲವೇ ಎಂಬುದು ಅತ್ಯಂತ ವಿವಾದಾತ್ಮಕ ವಿಷಯವಾಗಿದ್ದು, ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ ಈ ಬಗ್ಗೆ ಈ ಕೆಳಗಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. .ಈ ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲ. ಆದರೆ ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬoದಲ್ಲಿ ಇದನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ.
ಬೆರುಬಾರಿ ಒಕ್ಕೂಟ ಪ್ರಕರಣದಲ್ಲಿ(1960)- ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲ ಎಂಬ ನಿರ್ಧಿಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಕೇಶವಾನಂದ ಭಾರತಿ v/s ಸ್ಟೇಟ್ ಬ್ಯಾಂಕ್ ಆಫ್ ಕೇರಳ(1973)- ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದಿನ ಅಭಿಪ್ರಾಯವನ್ನು ತಿರಸ್ಕರಿಸಿ ಪ್ರಸ್ತಾವನೆಯು ಸಂವಿಧಾನದ ಒಂದು ಭಾಗ ಎಂದು ಹೇಳಿತು. ಎಲ್.ಐ.ಸಿ. ಆಫ್ ಇಂಡಿಯಾ ಪ್ರಕರಣ(1995)- ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗವೆoದು ಪುನರುಚ್ಚರಿಸಿತು.
ಹಾಗಾಗಿ ಪ್ರಸ್ತಾವನೆಯ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಇದು ಕಾನೂನು ತತ್ವಗಳನ್ನು ಮಾಡುವವರಿಗೆ ಮಾರ್ಗದರ್ಶನ ಮಾಡುತ್ತದೆ ಮತ್ತು ಸಂವಿಧಾನದ ಮೂಲ ಮೌಲ್ಯಗಳನ್ನು ಅರ್ಥೈಸುತ್ತದೆ.
ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದೆ?
ಸಂವಿಧಾನದ 368ನೇ ವಿಧಿಯಡಿಯಲ್ಲಿ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೇಶವಾನಂದ ಭಾರತಿ v/s ಸ್ಟೇಟ್ ಬ್ಯಾಂಕ್ ಆಫ್ ಕೇರಳ ಎಂಬ ಐತಿಹಾಸಿಕ ಪ್ರಕರಣದಲ್ಲಿ ಪ್ರಥಮ ಬಾರಿಗೆ ಉದ್ಬವವಾಯಿತು. ಪ್ರಸ್ತಾವನೆ ಸಂವಿಧಾನದ ಒಂದು ಭಾಗವಲ್ಲವಾದ್ದರಿಂದ ಅದನ್ನು ತಿದ್ದುಪಡಿಮಾಡಲು ಸಾಧ್ಯವಿಲ್ಲವೆಂದು ವಾದಿಸಲಾಯಿತು-ಇದು ಅರ್ಜಿದಾರರ ವಾದವಾಗಿತ್ತು.ಆದರೆ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆ ಸಂವಿಧಾನದ ಒಂದು ಭಾಗವೆಂದು ತೀರ್ಪು ನೀಡಿತು. ಈ ದಿಸೆಯಲ್ಲಿ ತಾನು ಬೆರುಬಾರಿ ಒಕ್ಕೂಟ ಪ್ರಕರಣದಲ್ಲಿ(1960) ನೀಡಿದ ಅಭಿಪ್ರಾಯ ತಪ್ಪು ಎಂಬ ನಿಲುವು ತಳೆಯಿತು.ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆಯಲ್ಲಿ ಅಡಗಿರುವ ಸಂವಿಧಾನದ ಮೂಲ ಲಕ್ಷಣ(ಮೂಲ ಸಂರಚನೆ)ಗಳಿಗೆ ಧಕ್ಕೆಯಾಗದಂತೆ 368 ನೇ ವಿಧಿ ಅನ್ವಯ ಸಂಸತ್ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ತೀರ್ಪು ನೀಡಿತು. ಹಾಗಾಗಿ ಕೇವಲ ಒಂದು ಬಾರಿ 1976 ರಲ್ಲಿ 42ನೇ ತಿದ್ದುಪಡಿ ಮಾಡಿ ಪ್ರಸ್ತಾವನೆಗೆ ‘ಸಮಾಜವಾದ’,‘ಜಾತ್ಯಾತೀತೆ’ಮತ್ತು ‘¸ಸಮಗ್ರತೆ’ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.
ಇಂಥಹ ಅತ್ಯದ್ಭುತವಾದ ಪ್ರಸ್ತಾವನೆಯ ತತ್ವ ಮತ್ತು ಧ್ಯೇಯಗಳನ್ನು ನಮ್ಮ ಆಡಳಿತಗಾರರು ಅರಿತರೆ ಮಾತ್ರ ಸಾಲದು ಇದನ್ನು ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸಬೇಕು ಆಗ ಮಾತ್ರ ಈ ಎಲ್ಲಾ ಆಚರಣೆಗಳಿಗೆ ಅರ್ಥ ಬರುವುದು.
ಜಿ.ಆರ್.ಕೇಶವಮೂರ್ತಿ, ಬೆಂಗಳೂರು
ಉಪನ್ಯಾಸಕರು