ಉಚ್ಚಿಲ(ಆ,30): ಮೊಗವೀರ್ಸ್ ಬಹ್ರೈನ್ ನ ವತಿಯಿಂದ ಮಂಗಳೂರು, ಬಾರ್ಕೂರು ಹಾಗೂ ಬಗ್ವಾಡಿ ಹೋಬಳಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿಶೇಷ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಕ್ಟೋಬರ್ 30 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ಅನ್ನ ಛತ್ರ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಉಚ್ಚಿಲದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ರವರು ವಿದ್ಯಾರ್ಥಿವೇತನ ವಿತರಿಸಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ. ಕೋಟ್ಯಾನ್ ,ಉಡುಪಿ ಶಾಸಕ ಯಶಪಾಲ್ ಸುವರ್ಣ. ಶ್ರಿ ಕ್ಷೇತ್ರ ಉಚ್ಚಿಲದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮೊಗವೀರ್ಸ್ ಬಹರೈನ್ ನ ಉಪಾಧ್ಯಕ್ಷೆ ಯಾದ ಶ್ರೀಮತಿ ಶಿಲ್ಪ ಶಮಿತ್ ಕುಂದರ್. ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ, ಸಲಹೆಗಾರ ವಿನೋದ್ ಶ್ರಿಯಾನ್ ಮಂಗಳೂರು ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ. ಮುಂಬಯಿ ಮೊಗವೀರ ಮಾಸಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ. ದ. ಕ. ಮೊಗವೀರ ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ. ಕಾಪು ನಾಲ್ಕುಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಎಸ್. ಕರ್ಕೇರ ಉಪಸ್ಥಿತರಿದ್ದರು.
ಮೊಗವೀರ್ಸ್ ಬಹರೈನ್ ನ ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ ಸ್ವಾಗತಿಸಿದರು. ಶ್ರೀ ಕ್ಷೇತ್ರ ಉಚ್ಚಿಲದ ವ್ಯವಸ್ಥಾಪಕರದ ಸತೀಶ್ ಅಮಿನ್ ಪಡುಕರೆ ನಿರೂಪಿಸಿದರು.