ಕುಂದಾಪುರ (ನ,01) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಗೈದರು. ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಶಿಕ್ಷಕರಾಗಿರುವ ನಾವೆಲ್ಲರೂ ಕನ್ನಡ ಭಾಷೆಯ ಮೇಲೆ ಎಷ್ಟರ ಮಟ್ಟಿಗೆ ಹಿಡಿತವನ್ನು ಹೊಂದಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲು ಇವತ್ತಿನ ದಿನ ಎನ್ನುವಂತದ್ದು ಪರ್ವಕಾಲ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.
ಶಿಕ್ಷಕಿ ಶಾರದಾ ಕನ್ನಡ ಭಾಷೆಯ ಚೆಲುವು, ಭಾಷೆಯ ಬಗೆಗಿನ ಒಲವು ಮತ್ತು ಗೆಲುವುಗಳ ಬಗ್ಗೆ ಸ್ಪುಟವಾಗಿ ಮಾತನಾಡಿದರು. ಸಂಜಿತ್, ದಿವ್ಯ ಕನ್ನಡದ ಬಗೆಗಿನ ಕಿರು ರಸಪ್ರಶ್ನೆ ನಡೆಸಿಕೊಟ್ಟರು. ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಟೀಚರ್ ಎಜುಕೇಷನ್ ಅಕಾಡೆಮಿ ತಂಡದಿಂದ ಪ್ರತಿಭಾ ಪ್ರದರ್ಶನ ನೆರವೇರಿತು. ಶಿಕ್ಷಕಿ ಆಶಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.