ಕುಂದಾಪುರ – (ಫೆ.14): ಗೌಂಡ್ ರೈಡರ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ತಾಲೂಕು ಗಾಣಿಗ ಸಂಘದ ಉಪಾಧ್ಯಕ್ಷ ಪ್ರಮೋದ ಗಾಣಿಗ ಪಂದ್ಯಕೂಟವನ್ನು ಉದ್ಘಾಟಿಸಿದರು. ಗಂಗೊಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಹರೀಶ ಖಾರ್ವಿ, ಗ್ರಾ.ಪಂ. ಸದಸ್ಯೆ ಶಾಂತಿ ಖಾರ್ವಿ, ಸತೀಶ್ ಜಿ., ಗೋಪಾಲ ಚಂದನ್ ಮತ್ತಿತರರು ಉಪಸ್ಥಿತರಿದ್ದರು. ವಿಶ್ವಾಸ ಗಂಗೊಳ್ಳಿ ತಂಡ ಎವರ್ ಗ್ರೀನ್ ವಿಶ್ವಸಾಗರ ಗಂಗೊಳ್ಳಿ ತಂಡವನ್ನು ಸೋಲಿಸಿ ‘ಗೌಂಡ್ ರೈಡರ್ ಟ್ರೋಫಿ-2021’ನ್ನು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ ವಹಿಸಿದ್ದರು. ಗಂಗೊಳ್ಳಿ ಗ್ರಾ. ಪಂ. ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ ಮತ್ತು ಉಡುಪಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷೆ ಡಾ| ವೀಣಾ ಕಾರಂತ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಹಾಗೇಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಐದು ಮಂದಿ ಕ್ರೀಡಾ ಸಾಧಕರನ್ನು ಗೌರವಿಸಲಾಯಿತು.
ಮತ್ಯೋದ್ಯಮಿ ಹರೀಶ ಖಾರ್ವಿ, ಶ್ರೀ ವೀರೇಶ್ವರ ದೀಪೋತ್ಸವ ಸಮಿತಿ ಅಧ್ಯಕ್ಷ ರತ್ನಾಕರ ಗಾಣಿಗ, ಗಂಗೊಳ್ಳಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ, ಮಂಜುನಾಥ ಸಾಲಿಯಾನ್ ತ್ರಾಸಿ, ಗೋಪಾಲ ಖಾರ್ವಿ ದಾವನಮನೆ, ಗ್ರಾ.ಪಂ. ಸಿಬ್ಬಂದಿ ಶೇಖರ ಜಿ., ಸಂಸ್ಥೆಯ ಅಧ್ಯಕ್ಷ ರಜತ್ ಶೇಟ್ ಉಪಸ್ಥಿತರಿದ್ದರು. ಸುಂದರ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು .