ಕುಂದಾಪುರ ( ಜ .30): ತಮಿಳುನಾಡಿನ ಪುದುಚೇರಿಯಲ್ಲಿ ಜರುಗಿದ National Level 2nd “WEKIE CHAMP” Mental Arithmetic Competition ನಲ್ಲಿ ಹೊಸಾಡು ಗ್ರಾಮದ ಅರಾಟೆ ಲಕ್ಸ್ ರಾಜೇಶ್ ಚಿನ್ನದ ಪದಕ ಪಡೆಯುವುದರೊಂದಿಗೆ 21 ನೇ ” National Level Abacus and Mental Arithmetic Competition ನಲ್ಲಿಯೂ ಸಹ ಭಾಗವಹಿಸಿ 85 ವಿದ್ಯಾರ್ಥಿಗಳಲ್ಲಿ ಹಿಂದಿಕ್ಕಿ “SUPER CHAMPION” ಪ್ರಶಸ್ತಿ ಪಡೆದಿದ್ದಾನೆ.
ಈ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. IPA ಕುಂದಾಪುರ ಸೆಂಟರಿನ ಪ್ರಸನ್ನ ಕೆ.ಬಿ.. ಮಹಾಲಕ್ಷ್ಮಿ, ಮತ್ತು ಕು. ದೀಪಾ ಈತನಿಗೆ ತರಬೇತಿ ನೀಡಿರುತ್ತಾರೆ. ಪ್ರಸ್ತುತ ಕುಂದಾಪುರದ ಓಕ್ವುಡ್ ಇಂಡಿಯನ್ ಸ್ಕೂಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಅರಾಟೆ ರೇಷ್ಮಾ ರಾಜೇಶ್ ದಂಪತಿ ಪುತ್ರ.












