ಉಡುಪಿ (ಫೆ:18) : ಉಡುಪಿ ಹೆಲ್ಪ್ ಲೈನ್ (ರಿ), ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಇವರ ನೇತೃತ್ವದಲ್ಲಿ, ರಕ್ತ ನಿಧಿ ಕೇಂದ್ರ- ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಫೆಬ್ರವರಿ 21ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಹಾಲ್ ನಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:30 ರ ತನಕ ಶಿಬಿರ ನಡೆಯಲಿದೆ.
ಈ ರಕ್ತದಾನ ಶಿಬಿರವನ್ನು ಸೈಂಟ್ ತೆರೆಸಾ ಚರ್ಚ್ ಕೆಮ್ಮಣ್ಣು ಇದರ ಧರ್ಮಗುರುಗಳಾದ Fr. ವಿಕ್ಟರ್ ಡಿ’ಸೋಜಾ ಉದ್ಘಾಟಿಸಲಿದ್ದು, ತೋನ್ಸೆ ಹೆಲ್ತ್ ಸೆಂಟರ್ ಮುಖ್ಯಸ್ಥರಾದ ಶ್ರೀ. ಬಿ.ಎಮ್. ಜಾಫರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ವಿಶೇಷ ಆಹ್ವಾನಿತರು ಸಭಾಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ರಕ್ತದಾನ ಮಾಡುವ ಪ್ರತಿಯೊಬ್ಬ ರಕ್ತದಾನಿಗೆ ಸ್ಟರಣಿಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿರುತ್ತಾರೆ. ಜೊತೆಗೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಬಿ. ಸಿ. ಟ್ರಸ್ಟ್, ಉಡುಪಿ ಜಿಲ್ಲೆ, ಕೆಮ್ಮಣ್ಣು ಒಕ್ಕೂಟ, ಎಲ್. ಎನ್. ಬೀಚ್ ಅಭಿವೃದ್ಧಿ ಸಮಿತಿ, ಗುಜ್ಜರ್ಬೆಟ್ಟು ಕರಾವಳಿ ಆಟೋ ಯೂನಿಯನ್ (ರಿ), ಹೂಡೆ, ಎಡಬೆಟ್ಟು ಫ್ರೆಂಡ್ಸ -ಎಡಬೆಟ್ಟು ಈ ಶಿಬಿರಕ್ಕೆ ಸಹಕಾರವನ್ನು ನೀಡಲಿದ್ದಾರೆ.