ಹಲವು ಅಲ್ಬಂ ಹಾಡು, ಕಿರುಚಿತ್ರ ನಿರ್ಮಿಸಿ ಕರಾವಳಿ ಭಾಗದಲ್ಲಿ ಹೆಸರು ಮಾಡಿರುವ ಅಶ್ನಿಗ್ಧ ಕ್ರಿಯೇಶನ್ಸ್ ತಂಡದ ಮುಂದಿನ ಪ್ರಯತ್ನ ಹೇಳ್ವರಿಲ್ಲ ಕೇಂಬರಿಲ್ಲ. ಈ ಹಾಡಿಗೆ ಸಂಗೀತ ನಿರ್ದೇಶಿಸಿ, ಬರೆದು ಹಾಡಿರುವುದು ಕರಾವಳಿಯ ಹೆಸರಾಂತ ಗಾಯಕ ಅಕ್ಷಯ್ ಬಡಾಮನೆ. ಹಾಡಿನ ಸಂಪೂರ್ಣ ನಿರ್ದೇಶನದ ಹೊಣೆ ಹೊತ್ತವರು ರಿಶಿತ್ ಶೆಟ್ಟಿ ಹಾಗೂ ರಾಘು ಶಿರೂರು.
ಹಾಡಿನ ಸಂಪೂರ್ಣ ಚಿತ್ರೀಕರಣ ಗಂಗೊಳ್ಳಿಯ ಕಡಲ ತೀರದಲ್ಲಿ ಮುಗಿಸಿದ್ದು, ಚಿತ್ರೀಕರಣದ ಹೊಣೆ ಹೊತ್ತವರು ಆವರಿಸಿದೆ ಹಾಡಿನ ಖ್ಯಾತೀಯ ಆದಿತ್ಯ ಗಾಣಿಗ ಕೋಟೇಶ್ವರ. ನೃತ್ಯ ನಿರ್ದೇಶನ ಪರೀಕ್ಷಿತ್ ಅವರದ್ದು ಹಾಗೂ ಹಾಡಿನಲ್ಲಿ ರಿಶಿತ್, ಅನಿಲ್, ಜಿತೇಂದ್ರ, ಸನತ್, ಕಾರ್ತಿಕ್, ಸಚಿನ್, ಮಂಜು, ಶ್ರೀಕಾಂತ್, ಅಭಿಷೇಕ್, ಭರತ್, ಅರುಣ್ ಹೀಗೆ ಹಲವು ಕಲಾವಿದರ ಕೂಡುಕೆ ವಿಶೇಷ. ಕುಂದಾಪ್ರ ಕನ್ನಡದ ಆಡು ಮಾತಲ್ಲಿ ಒಂದಾದ “ಹೇಳ್ವರಿಲ್ಲ ಕೇಂಬರಿಲ್ಲ” ಶೀರ್ಷಿಕೆಯೇ ಈ ಹಾಡಿಗೆ ಒಂದು ವಿಶಿಷ್ಟ ನಿಲುವು ಕೊಟ್ಟಿದೆ.
ಹೆಚ್ಚುವರಿ ಸಾಹಿತ್ಯ ರಜತ್ ಹಾಗೂ ಅಜಿತ್ ಅವರದ್ದು. ಹಾಡಿನ ಎಲ್ಲಾ ಕೆಲಸ ಮುಗಿದಿದ್ದು ಇದೇ ಮಾರ್ಚ್ 13 ಕ್ಕೆ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಕುಂದಾಪ್ರ ಕನ್ನಡದ ಕುರಿತು ಅಪಾರ ಅಭಿಮಾನ ಹೊಂದಿರುವ ಈ ತಂಡಕ್ಕೆ ಶುಭವಾಗಲಿ. ಈ ಹಾಡನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.
ಲೇಖನ : ಅಭಿಷೇಕ್ ಬಡಾಮನೆ