ಕುಂದಾಪುರ (ಏ, 24): ರಕ್ತದಾನ ಶಿಬಿರ ಹಾಗೂ ತುರ್ತು ಸಂದರ್ಭದಲ್ಲಿ ರಕ್ತದಾನದ ಜೊತೆಗೆ ಬಡ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಜನಸೇವೆ ಗೈಯುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ರಕ್ತದಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದೆ.
18ವರ್ಷ ಮೇಲ್ಪಟ್ಟವರು ಮೇ ತಿಂಗಳಲ್ಲಿ ಕೊರೊನ ಲಸಿಕೆ ಪಡೆಯುವವರು ಮುಂದಿನ 28ದಿನ ರಕ್ತ ದಾನ ಮಾಡುವಂತಿಲ್ಲ .ಎರಡನೇ ಡೋಸ್ ಪಡೆದು ಒಟ್ಟು ಮುಂದಿನ 56 ದಿನಗಳತನಕ ರಕ್ತ ದಾನ ಮಾಡಲು ಅಸಾಧ್ಯ .ಆ ನಿಟ್ಟಿನಲ್ಲಿ ಲಸಿಕೆ ಪಡೆಯುವ ಮುನ್ನ ದಯವಿಟ್ಟು ರಕ್ತ ದಾನ ಮಾಡುವುದು ಉತ್ತಮ ಎಂದು
ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಸಂಸ್ಥೆ ರಕ್ತದಾನಿಗಳಲ್ಲಿ ಮನವಿ ಮಾಡಿಕೊಂಡಿದೆ.
ಮೇ 1ರಿಂದ ವ್ಯಾಕ್ಸಿನೇಷನ್ ಪ್ರಾರಂಭವಾಗುವ ಮೊದಲು ರಕ್ತ ದಾನ ಮಾಡಿ ಜೊತೆಗೆ ನಿಮ್ಮದೇ ಒಂದು ಹತ್ತು ಜನರು ಮೇಲ್ಪಟ್ಟ ತಂಡವನ್ನು ರಚಿಸಿ ರಕ್ತ ದಾನ ಮಾಡಲು ಸಿದ್ದರಿದ್ದರೆ KMC Manipal Hospital ಕಡೆಯಿಂದ ನಿಮ್ಮನ್ನು ಮಣಿಪಾಲ ರಕ್ತ ನಿಧಿಗೆ ಉಚಿತವಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಇದೆ. ರಕ್ತ ನಿಧಿಗಳಲ್ಲಿ ನೋ ಸ್ಟಾಕ್ ಎನ್ನುತ್ತಿದ್ದು ಈಗಾಗಲೇ ರಕ್ತದ ಕೊರತೆ ಉಂಟಾಗಿದ್ದು, ರಕ್ತಕ್ಕೆ ಪರ್ಯಾಯವಾದ (ಬದಲಿಯಾದ) ವಸ್ತು ಇಲ್ಲ. ನಿಮ್ಮ ರಕ್ತ ದಾನದಿಂದ ಎಷ್ಟೋ ಜನರ ಜೀವ ಉಳಿಸಬಹುದು .ಹೆಣ್ಣು ಗಂಡೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತ ದಾನ ಮಾಡಬಹುದು ಎಂದು ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ತಿಳಿಸಿದೆ.