ಉಪ್ಪುಂದ (ಜೂ, 17): ದುಡಿಮೆಯ ಒಂದು ಪಾಲು ಸಮಾಜಸೇವೆಗೆ ಮೀಸಲಾಗಿಡುವುದರ ಜೊತೆಗೆ ಸಮಾಜ ಸೇವೆಯೊಳಗಿನ ಸಂತೃಪ್ತಿಯಿಂದ ನಾವು ಪ್ರತಿಯೊಬ್ಬರಲ್ಲೂ ದೈವತ್ವವನ್ನು ನೋಡಬಹುದು ಎಂದು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು, ಮ್ಯಾನೇಜಿಂಗ್ ಡೈರೆಕ್ಟರ್ ಕೊಡುಗೈ ದಾನಿ ಶ್ರೀ ಗೋವಿಂದ ಬಾಬು ಪೂಜಾರಿ ಹೇಳಿದರು.
ಅವರು ಜೂನ್ 17ರಂದು ಉಪ್ಪುಂದದ ಅಂಬಾಗಿಲಿನಲ್ಲಿರುವ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ವರಲಕ್ಷ್ಮೀ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸದಸ್ಯರಿಗೆ ದಿನಸಿ ಸಾಮಗ್ರಿಗಳು ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಗೋವಿಂದ ಬಾಬು ಪೂಜಾರಿಯವರ ಧರ್ಮ ಪತ್ನಿ ಮಾಲತಿ ಗೋವಿಂದ ಪೂಜಾರಿ, ವರಲಕ್ಷೀ ಕ್ರೆಡಿಟ್ ಕೋ- ಸೊಸೈಟಿಯ ಜಯರಾಮ್ ಶೆಟ್ಟಿ, ಗೌರಿ ದೇವಾಡಿಗ ಉಪಸ್ಥಿತರಿದ್ದರು. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸರಿಸುಮಾರು 6 ಸಾವಿರಕ್ಕೂ ಮಿಕ್ಕಿ ಕಡು ಬಡವರಿಗೆ ತಮ್ಮ ಟ್ರಸ್ಟ್ ವತಿಯಿಂದ ಗೋವಿಂದ ಬಾಬು ಪೂಜಾರಿಯವರು ದಿನಸಿ ಕಿಟ್ ಗಳನ್ನು ವಿತರಿಸಿರುತ್ತಾರೆ.