ರಾಜ್ಯದಲ್ಲಿ ಜೂನ್, 21 ರ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. 16 ಜಿಲ್ಲೆಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಒಳಗೊಂಡಂತೆ ಸಡಿಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಉಳಿದ 13 ಜಿಲ್ಲೆಗಳಲ್ಲಿ ಸೋಂಕು ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ 2ರವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾರವರು ಬೆಚ್ಚಿಬೀಳಿಸುವ ಸಂಗತಿಯೊಂದನ್ನು ಹೊರಹಾಕಿದ್ದಾರೆ.

ಭಾರತದಲ್ಲಿ ಮೂರನೇ ಕೋವಿಡ್ ಅಲೆ “ಅನಿವಾರ್ಯ” ಮತ್ತು ಇದು ಮುಂದಿನ ಆರು-ಎಂಟು ವಾರಗಳಲ್ಲಿ ದೇಶವನ್ನು ವ್ಯಾಪಿಸಬಹುವುದು ಎಂದು ಹೇಳಿದ್ದಾರೆ. ಲಸಿಕೆ ಅಭಿಯಾನವನ್ನು ಆದಷ್ಟು ಚುರುಕುಗೊಳಿಸಬೇಕು ಜೊತೆಗೆ ಹಾಟ್ಸ್ಪಾಟ್ಗಳಲ್ಲಿ ಮಿನಿ-ಲಾಕ್ಡೌನ್ಗಳನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕರೋನಾ ತೀವ್ರವಾಗಿ ವ್ಯಾಪಿಸುವ ಸಾಧ್ಯತೆಗಳು ಹೆಚ್ಚಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಎರಡನೇ ಅಲೆಯ ದುಪ್ಪಟ್ಟು ಜೀವಹಾನಿಯನ್ನು ಎದುರಿಸಬೇಕಾಗುತ್ತದೆ.
ಯಾವುದೇ ಕಾರಣಕ್ಕೂ ಲಾಕ್ಡೌನ್ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳದೇ ಜಾಗೃತರಾಗಿರೋದೇ ಒಳ್ಳೆಯದು. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಏಕಕಾಲದಲ್ಲಿ ಲಸಿಕೆ ಹಂಚಿಕೆ ಮಾಡುವುದು ಕಷ್ಟ. ಆ ನಿಟ್ಟಿನಲ್ಲಿ ಲಸಿಕೆ ಹಂಚಿಕೆಯ ವೇಗವನ್ನು ಹೆಚ್ಚಿಸಲು ಸರಕಾರಗಳು ಪ್ರಯತ್ನಿಸುತ್ತಲೇ ಇದೆ. ಸಾರ್ವಜನಿಕರು ಅನ್ ಲಾಕ್ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳದೇ ಸರಕಾರದ ಜೊತೆ ಕೈಜೋಡಿಸಬೇಕೆನ್ನುವುದೇ ನಮ್ಮ ಕಾಳಜಿ
ಕುಂದವಾಹಿನಿ ಬಳಗ










