ಅದ್ಯಾವ ಸೀಮೆಯ ಮಾಯಗಾತಿ ನೀನು..
ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ..
ಸುಮ್ಮನಿರಲು ಈ ಹೃದಯ ಬಿಡಬೇಕಲ್ಲ..
ಅರೇ ! ಇದೇನು ನಿನ್ನ ಹುಚ್ಚಾಟ ಅನ್ನುವುದು ನೀನು
ನೀನಿಲ್ಲದೆ ಬದುಕೆನು ನಾನು..
ನನಗೆ ನೀನೆ ವ್ಯಾಕ್ಸಿನ್ನು…
ಬಿಸಿರಕ್ತ ಹರಿಯುವ ಈ ದೇಹಕ್ಕೆ ..
ಅಣು ಕಣದಿ ನಿನ್ನದೆ ಛಾಯೆ..
ಈ ನನ್ನ ಬದುಕೆಲ್ಲಾ ನಿನ್ನದೆಯಾ ಮಾಯೆ.
ನಿನ್ನ ಪ್ರೀತಿ ಸಂಜೆಯಲಿ ಗುಂಯ್ಗುಡುವ ಸೊಳ್ಳೆಯಂತೆ..
ಮಧ್ಯರಾತ್ರಿ ಕಚ್ಚುವ ತಿಗಣೆಯಂತೆ
ಮುಂಜಾನೆಯಲ್ಲಿ ಮುದುಡುವ ಚಳಿಯಂತೆ..
ಮಧ್ಯಾಹ್ನದಲ್ಲಿ ನೆತ್ತಿ ಸುಡುವ ಬಿಸಿಲಂತೆ.
ಅದಕ್ಕೆ ನಾ ಹೇಳುವೆ ನೀ ನನ್ನಲೊವಿನವಳು..
ಮುದ್ದು ಲವ್ ಯೂ….
ರಾಘವೇಂದ್ರ ಹಾರ್ಮಣ್
ಇಡೂರು ಕುಂಜ್ಞಾಡಿ