ಹೆಮ್ಮಾಡಿ (ಜು, 19 ): ಕಟ್ಟ್ ಬೆಲ್ತೂರು ಗ್ರಾಮ ಪಂಚಾಯತ್ ವತಿಯಿಂದ ಕರೋನಾ ವಿರುದ್ದ ಲಸಿಕಾಕರಣವನ್ನು ಜುಲೈ 19 ರಂದು ಸುಳ್ಸೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಆಟೋ ರಿಕ್ಷಾ ಚಾಲಕರಿಗೆ, ಹೋಟೆಲ್ ಕಾರ್ಮಿಕರಿಗೆ, ಪರ ಊರುಗಳಲ್ಲಿ ಉದ್ಯೋಗಕ್ಕೆ ತೆರಳುವವರಿಗೆ ಆದ್ಯತೆಯ ಮೇರೆಗೆ ಹಾಗೂ 18ರಿಂದ 45 ಪ್ರಾಯದವರಿಗೆ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಪುತ್ರನ್ ಮತ್ತು ಉಪಾಧ್ಯಕ್ಷೆ ಶ್ವೇತಾ ಉಪಸ್ಥಿತರಿದ್ದರು. ಡಾ| ಅಮಿತಾ, ಸಹಾಯಕ ನರ್ಸ್ಗಳು, ಅಂಗನವಾಡಿ ಶಿಕ್ಷಕಿ ಗಿರಿಜಾ ಮತ್ತು ಆಶಾ ಕಾರ್ಯಕರ್ತರು ಲಸಿಕಾಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಒಟ್ಟು 480 ಡೋಸ್ ಲಸಿಕೆ ನೀಡಲಾಯಿತು. ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಪುತ್ರನ್ ಲಸಿಕಾಕರಣಕ್ಕೆ ಆಗಮಿಸಿದವರಿಗೆ ಲಘು ಪಾನೀಯ ವ್ಯವಸ್ಥೆ ಕಲ್ಪಿಸಿದರು.













