ಕಷ್ಟ ನಷ್ಟಗಳ ಭಯದಿಂದ ಕೆಲಸವನ್ನೇ ಆರಂಭ ಮಾಡದವರು ದುರ್ಬಲರು.ವಿಘ್ನಗಳು ಎದುರಾದಾಗ ಕೆಲಸವನ್ನು ನಿಲ್ಲಿಸುವವರು ಹೇಡಿಗಳು. ವಿಘ್ನಗಳನ್ನು ನಿವಾರಿಸಿಕೊಂಡು ಗುರಿ ಸಾಧಿಸುವವರು ಶ್ರೇಷ್ಠರು.
ವಿಘ್ನಗಳ ಅಂಜಿಕೆಯಿಂದ ಕೆಲಸವನ್ನು ಆರಂಭ ಮಾಡದೆ ದುರ್ಬರಂತಿರುವವರು ಹೆಚ್ಚಿರುವ ಈ ಕಾಲಘಟ್ಟದಲ್ಲಿ ನಾವಿಂದು ಪರಿಚಯಿಸುತ್ತಿರುವ ಈ ವ್ಯಕ್ತಿ ವಿಘ್ನಗಳನ್ನು ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಂಡು, ಅವಿರತ ಪ್ರಯತ್ನದಿಂದಾಗಿ ಯಶಸ್ಸಿನತ್ತ ಸಾಗುತ್ತಾ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಿದವರು, ಬಾಲ್ಯದಿಂದಲೂ ಹೋರಾಟಗಳನ್ನು ಎದುರಿಸಿ ಭವಿಷ್ಯದಲ್ಲಿ ಸಾಧಕನಾಗಿಯೇ ಆಗುತ್ತೇನೆ ಎಂಬ ಸ್ಪಷ್ಟ ದಿಸೆಯಲ್ಲಿ ಕಲ್ಲು ಮುಳ್ಳುಗಳನ್ನೇ ತುಳಿಯುತ್ತಾ ಸಾಗಿಬಂದವರು, ಇದೀಗ ಮುಂಬೈ ಮಹಾನಗರದ ಕ್ಯಾಟರಿಂಗ್ ಕ್ಷೇತ್ರದ ದಿಗ್ಗಜರ ಆಗಿ ಹೊರಹೊಮ್ಮಿ ಕರಾವಳಿಯ ಹೆಮ್ಮೆ ಶ್ರೀ ಮಂಜುನಾಥ ಎನ್. ಶೆಟ್ಟಿ ಬೆಳ್ಳಾಡಿ.
ಬಾಲ್ಯದಲ್ಲಿ ಕುಟುಂಬದ ಆರ್ಥಿಕ ಸ್ಥಿತಿಗತಿ, ಬಡತನದ ನೋವು , ಬದುಕಿನಲ್ಲಿ ಏನಾದರು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಇಂದು ಈ ವ್ಯಕ್ತಿಯನ್ನು ಕ್ಯಾಟರಿಂಗ್ ರಂಗದಲ್ಲಿ ಅಪ್ರತಿಮ ಸಾಧಕನನ್ನಾಗಿ ಬೆಳೆಸಿದೆ. ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬ ಮಾತಿನಂತೆ ಬಲ್ಲವನೇ ಬಲ್ಲ ಆತನ ಸಾಧನೆಯ ಹಂಬಲವ ಎಂಬುದು ಇವರ ಸಾಧನೆಗೆ ಅನ್ವಯಿಸುವ ಮಾತು.
ಮೆಟ್ರಿಕ್ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ ಆರ್ಥಿಕ ಸಂಕಷ್ಟದಿಂದ ಕಾಲಿಗೆ ಪಾದರಕ್ಷೆ ಇಲ್ಲದೇ ಮುಂಬೈಗೆ
ಹೊರಟ ಮಂಜುನಾಥ ಎನ್. ಶೆಟ್ಟಿ ಬೆಳ್ಳಾಡಿಯವರು ಇಂದು ಮುಂಬಯಿ ಕಾರ್ಪೊರೇಟ್ ಕ್ಯಾಟರಿಂಗ್ ರಂಗದ “ಪೂರ್ಣಚಂದಿರ”ನೆಂದು ಜನರಿಂದ ಕರೆಯಲ್ಪಡುವುದು ಇವರ ಅವಿರತ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ.
ಇವರ ಈ ಸಾಧನೆಯ ಹಿಂದಿನ ಯಶೋಗಾಥೆ ಎಂಥದ್ದಿರಬಹುದು ಎಂಬುದು ಇಲ್ಲಿ ವಿಶ್ಲೇಷಣಾರ್ಹ.
ಯಶಸ್ಸಿಗಾಗಿ ಹೆಣಗಾಡುವವನು ಎಷ್ಟೇ ಕಷ್ಟಬಂದರೂ ಸಹಿಸಿಕೊಳ್ಳುತ್ತಾನೆ .ಆಗ ಮಾತ್ರ ಆತ ಯಶಸ್ಸಿನ ಬೆನ್ನಟ್ಟಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ ಎನ್ನುವ ಮನೋವೃತ್ತಿಯೇ ಇಂದು ಈ ವ್ಯಕ್ತಿಯ ಕ್ಲಿಷ್ಟ ಕರವಾದ ಪರಿಸ್ಥಿತಿಯನ್ನು ಎದುರಿಸಿ ಸಾಧಕರಾಗಿರುವುದು.
ನಮ್ಮಲ್ಲಿ ನಾವು ಆತ್ಮವಿಶ್ವಾಸ ಕಳೆದುಕೊಂಡರೆ ಸರ್ವಸ್ವವನ್ನು ಕಳೆದುಕೊಂಡಂತೆ ಅನ್ನೋ ಮಾತಿನಂತೆ ನನ್ನ ಆತ್ಮವಿಶ್ವಾಸವನ್ನೇ ಸಾಧನೆಯ ಮೆಟ್ಟಲುಗಳ ಆಗಿ ಪರಿವರ್ತಿಸಿಕೊಂಡು ಚಲದಿಂದ ತ್ರಿವಿಕ್ರಮನಂತೆ ಮುಂಬೈ ಮಹಾನಗರಿಯ ಕ್ಯಾಟರಿಂಗ್ ರಂಗದ ಅನನ್ಯ ಸಾಧಕನಾಗಿ ಹೊರಹೊಮ್ಮಿರುವ ಕುಂದಕನ್ನಡಿಗ ಶ್ರೀ ಮಂಜುನಾಥ ಎನ್ ಶೆಟ್ಟಿ ಬೆಳ್ಳಾಡಿ ಈ ಗುಣವಂತನನ್ನು ಕುಂದಾ ವಾಹಿನಿ ಮೂಲಕ ಪರಿಚಯಿಸಲು ಸಂತೋಷ ಪಡುತ್ತಿದ್ದೇವೆ.
ಹೋಟೆಲ್ ರಂಗದಲ್ಲಿ ಮುಂಬೈ ಮಾತ್ರವಲ್ಲದೆ ಇತರ ರಾಜ್ಯಗಳಲ್ಲೂ ನಮ್ಮ ಕರಾವಳಿಗರ ಆಹಾರಶೈಲಿ ಹೆಸರುವಾಸಿ ಆಗಿರುವುದು ಎಲ್ಲರಿಗೂ ತಿಳಿದೆ ಇದೆ. ಹಾಗಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಆಫೀಸ್ ಮತ್ತು ಕಂಪನಿಗಳಿಗೆ ಎಲ್ಲಾ ಬಗೆಯ ಆಹಾರ ಖಾದ್ಯ ಲಭ್ಯವಾಗಬೇಕು ಎಂದು ಇವರ ಕ್ಯಾಟರಿಂಗ್ ಗುರುಗಳಾದ ದಿವಂಗತ ಗೋವಿಂದ ಮೆಂಡನ್ ರ ಆಶಯ ಮತ್ತು ಇವರ ಕ್ಯಾಟರಿಂಗ್ ಪರಿಕಲ್ಪನೆ ಶ್ರೀಯುತ ಶೆಟ್ಟರ ಚತುರತೆ ಮತ್ತು ಮುಂದಾಲೋಚನೆ, ಇವರಿಬ್ಬರ ಕನಸು ಇಂದು ಮುಂಬೈಯಲ್ಲಿ ಕಾರ್ಪೊರೇಟ್ ಕ್ಯಾಟರಿಂಗ್ ರಂಗ ಮುಂಚೂಣಿಯಲ್ಲಿ ಇರಲು ಕಾರಣವಾಗಿದೆ. ಇವರು ವ್ಯವಹಾರ ಜ್ಞಾನ ಚತುರತೆಯ ಕಾರಣದಿಂದಾಗಿ ಇಂದು ಮುಂಬೈ ಕ್ಯಾಟರಿಂಗ್ ರಂಗದಲ್ಲಿ ಪೂರ್ಣಚಂದಿರ ನೆಂದು ಕರೆಸಿ ಕೊಂಡಿರುತ್ತಾರೆ.
ಮಂಜುನಾಥ ಶೆಟ್ಟಿಯವರ ಉದ್ಯಮ ಕೇವಲ ಮುಂಬೈಗೆ ಮಾತ್ರ ಸೀಮಿತವಾಗಿಲ್ಲ .ತಮ್ಮ ತವರೂರಲ್ಲಿ ಹೋಟೆಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ದೂರದ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಶ್ರೀಯುತ ಶೆಟ್ಟಿಯವರು 2011ರಲ್ಲಿ ಪರಿಮಳ ಹಾಸ್ಪಿಟಲಿಟಿ ಸರ್ವಿಸ್ ಎಂಬ ಉದ್ಯಮವನ್ನು ಆರಂಭಿಸಿದ್ದಾರೆ.
ಮದುವೆ ಸಭಾಭವನ , ಹೋಟೆಲ್ “ರಾಜ್ ಭೋಗ್ “ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ 64 ಕೊಠಡಿಗಳ ಅತಿಥಿ ಗೃಹಗಳನ್ನು ಒಳಗೊಂಡಿದೆ. ಇವರು ಸಾಯಿ ಸಿದ್ದಿ ಮತ್ತು ಪರಿಮಳ ಹಾಸ್ಪಿಟಲಿಟಿ ಕ್ಯಾಟರಿಂಗ್ ಸರ್ವಿಸ್ ಇದರ ಮಾಲೀಕರು ಆಡಳಿತ ನಿರ್ದೇಶಕರು ಆಗಿದ್ದಾರೆ.
ಮಂಜುನಾಥ್ ಶೆಟ್ಟಿ ಯವರು ದಯಾಪರರು, ಸಕಲಗುಣ ಸಂಪನ್ನ ಜೊತೆಗೆ ಕರಾವಳಿ ಮತ್ತು ಪರರಾಜ್ಯದ ಹಲವಾರು ಯುವಕರಿಗೆ ಕೆಲಸ ಮತ್ತು ವಸತಿಯ ವ್ಯವಸ್ಥೆ ಮಾಡಿದ ಪುಣ್ಯ ಶ್ರೀಯುತರ ಜೋಳಿಗೆಯಲ್ಲಿ ಇದೆ .
ಮುಂಬೈಯ ಕ್ಯಾಟರಿಂಗ್ ರಂಗದಲ್ಲಿ ಚಿರಪರಿಚಿತ ಮತ್ತು ಗೌರವದ ವ್ಯಕ್ತಿ ಆರಡಿ ಎತ್ತರದ ,ದಪ್ಪ ಮೀಸೆಯ ಸದಾ ನಗುವಿನ ಇವರ ಮುಖ ದೈವತ್ವದ ಯುಗಪುರುಷ ನಂತೆ ಕಂಡಂತೆ ಎಂಬ ಮಾತು ಅತಿಶಯೋಕ್ತಿಯಾಗದು.
ಶ್ರೀ ಮಂಜುನಾಥ ಶೆಟ್ಟಿ ಯವರ ಕಾರ್ಪೊರೇಟ್ ಕ್ಯಾಟರಿಂಗ್ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ 2017 ಜೂನ್ 24ರಂದು *ಥೈಲ್ಯಾಂಡ್ ಬ್ಯಾಂಕಾಕ್ ಇಂಡಿಯನ್ ವೀಸ್ ವರ್ಲ್ಡ್ ಯುನಿವರ್ಸಿಟಿ*
ಆಯೋಜನೆಯ ಅಡಿಯಲ್ಲಿ ಡಾಕ್ಟರ್ ಆಫ್ ಹಾಸ್ಪಿಟಲಿಟಿ ಸರ್ವಿಸಸ್ & ಮೆನೇಜ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಕ್ಯಾಟರಿಂಗ್ ರಂಗದಲ್ಲಿ ಲಭಿಸಿದ ಮೊಟ್ಟಮೊದಲ ಮತ್ತು ಏಕೈಕ ಉದ್ಯಮಿ ಶ್ರೀ ಮಂಜುನಾಥ ಶೆಟ್ಟಿಯವರು ಆ ಹೆಗ್ಗಳಿಕೆ ಶ್ರೀಯುತರದ್ದು.
ಈ ಪುರಸ್ಕಾರ ಕನ್ನಡಿಗರಾದ ನಮಗೆ ಮಾತ್ರವಲ್ಲದೆ, ಭಾರತೀಯರೆಲ್ಲರೂ ಹೆಮ್ಮೆ ಪಡುವಂತಾಗಿದೆ. ಅದನ್ನು ಇಲ್ಲಿ ನೆನಪಿಸುವುದು ನನ್ನ ಅದ್ಯ ಕರ್ತವ್ಯ. ಕರಾವಳಿ ಪ್ರದೇಶದಿಂದ ಮುಂಬೈಗೆ ಬಂದ ಪ್ರತಿಯೊಬ್ಬ ಸಾಧಕನ ಹಿಂದೆಯೂ ಒಂದೊಂದು ವಿಭಿನ್ನ ರೀತಿಯ ಕಥೆ-ವ್ಯಥೆ ಗಳಿರುತ್ತದೆ ಎಂಬುದನ್ನು ಅಲ್ಲಗಳೆಯಯವಂತಿಲ್ಲ.
ಪ್ರತಿಯೊಬ್ಬ ಸಾಧಕನ ಸಾಧನೆ ಹಿಂದೆ ಬೆವರ ಹನಿಯ ಪ್ರತಿಫಲ ಇರುವುದು.
ಶ್ರೀಯುತ ಶೆಟ್ಟಿಯವರು ಬೆಳ್ಳಾಡಿ ಮೂಡಾಯನ ಮನೆಯವರು ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ತನ್ನ ಹುಟ್ಟೂರಿನಲ್ಲೇ ಪೂರೈಸಿ ಮುಂಬಯಿಯಲ್ಲಿ ರಾತ್ರಿ ಶಾಲೆಯಲ್ಲಿ ಓದುತ್ತಾ ಹಗಲಿ ನಲ್ಲಿ ದುಡುಯುತ್ತಾ ಸಾಧನೆ ಮಾಡಿದ ಸಾಧಕರು. ಇವರು ಉದ್ಯೋಗಕ್ಕಾಗಿ ಮುಂಬಯಿಗೆ ಬಂದವರು ಅಲ್ಲಿಂದ ಅವರ ಜೀವನವೇ ಬದಲಾವಣೆಯಾಯಿತು ಇವರ ಈ ಜೀವನ ಘಟ್ಟಗಳು ಇಂದಿನ ಕೆಲವು ಯುವಕರಿಗೆ ಮಾದರಿ. ಕ್ಯಾಂಟೀನ್ ನಲ್ಲಿ ದುಡಿಯುತ್ತ ಉದ್ಯಮಿಯಾಗಿ ಬೆಳದವರು ,ತಾವು ಗಳಿಸಿದ ಲಾಭಾಂಶದಲ್ಲಿ ಸಮಾಜದ ಶ್ರೇಯೋಭಿವೃದ್ಧಿಗೆ, ದೇವಸ್ಥಾನ ಮತ್ತು ಕಡು ಬಡವರ ಅಭಿವೃದ್ಧಿಗೆ ಸಾಕಷ್ಟು ದೇಣಿಗೆ ನೀಡಿ ಎಲ್ಲಿಯೂ ಪ್ರಚಾರ ಬಯಸದೆ, ತೆರೆಮರೆಯ ಸೇವಕ ಅನಿಸಿ ಕೊಂಡಿದ್ದಾರೆ.
ಕೊಟ್ಟ ಕೊಡುಗೆಯನ್ನು ಎಲ್ಲಿಯೂ ಹೇಳಿಕೊಳ್ಳದೆ ,ಊರ- ಪರವೂರ ಶಾಲೆಗಳಿಗೆ ಸಾಕಷ್ಟು ದೇಣಿಗೆಯನ್ನು ನೀಡಿದ್ದು, ಅಲ್ಲದೆ ಜಾತಿ-ಮತ ಭೇದ ಮರೆತು ವಿದ್ಯಾರ್ಥಿಗಳನ್ನು ದತ್ತು
ಪಡೆದು ವಿದ್ಯಾದಾತರೆನಿಸಿಕೊಂಡಿದ್ದಾರೆ.ನಿಮ್ಮ ನಡೆ, ನುಡಿ, ಸಜ್ಜನ ಗುಣವಂತಿಕೆ ನೆನೆಯುವುದು ನನಗಂತೂ ಆದ್ಯ ಕರ್ತವ್ಯ ಎಂದು ಬಯಸುತ್ತೇನೆ .ಜೀವನದ ಕಷ್ಟಗಳನ್ನು ಅನುಭವಿಸುತ್ತಾ ಸುಖವನ್ನು ಕಂಡವರು ತಾವು. ಕೆಲವು ಎದುರಾಳಿಗಳನ್ನು ಕೂಡ ಆತ ನಮ್ಮವರೇ ಎಂದು ಸಹಕರಿಸಿದ ಮಹಾನುಭಾವರು ತಾವು. “ವಸುದೈವ ಕುಟುಂಬಕಂ”ಎಂದು ತಿಳಿದ ಮಹಾನುಭಾವರು.
ನೀವು ಸಣ್ಣ ಉದ್ಯಮದಿಂದ ಆರಂಭಿಸಿದ ಉದ್ಯೋಗ ಬೆಳೆಯುತ್ತ ಬೆಳೆಯುತ್ತ ಸಾಯಿ ಸಿದ್ದಿ ಕ್ಯಾಟರಿಂಗ್ ಉದ್ಯಮದವಾಗಿ ಬೆಳೆದು ಒಬ್ಬ ಪರಿಪೂರ್ಣ ಉದ್ಯಮಿಯಾಗಿ ಬೆಳೆದು ಬಂದವರು.2000ನೇ ಇಸವಿ ಯಲ್ಲಿ ಸಂಸಾಡಿ ಮುಡಾಯಿನ ಮನೆ ಪ್ರತಿಷ್ಠಿತ ಕುಟುಂಬದ ಮಾಲತಿ ಯವರೊಂದಿಗೆ ವಿವಾಹವಾಗಿ ಎರಡು ಕಣ್ಣುಗಳಂತೆ ಪಾರ್ಥಿವ್ ಮತ್ತು ಪ್ರಾರ್ಥನಾ ಎಂಬ ಮುದ್ದು ಮಕ್ಕಳನ್ನು ಪಡೆದ ತಾವು ಧನ್ಯರು.
ತಮ್ಮ ಕ್ಯಾಟರಿಂಗ್ ರಂಗದ ಸಾಧನೆಯನ್ನು ನೋಡಿ ತಮ್ಮನ್ನು ಅರಸಿ ಬಂದ ಪ್ರಶಸ್ತಿಗಳು ಹಲವಾರು
2013 Indian Tourism, Hospitality Award
2016 Fastest Growing Indian Company Excellence Award
2016 Outstanding Achievement Award
2017 Golden Image of Asia International Award
2017 Doctor of Hospitality Service and Management Award
ಸರಳ ಸಜ್ಜನಿಕೆಯತಾವು ಪರಿಶ್ರಮ ಜೀವನ ನಡೆಸುತ್ತಿರುವ ನಿಮ್ಮ ಮುಂದಿನ ಜೀವನವು ಸುಖ ಸಂತೋಷದಿಂದ ಕೂಡಿರಲಿ.ನಿಮ್ಮ ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಸಮಾಜದ, ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಮಹತ್ತರವಾಗಿರಲಿ ಎಂದು ಕುಂದವಾಹಿನಿ ವತಿಯಿಂದ ಹರಕೆ ಮತ್ತು ಹಾರೈಕೆ.
ಈಶ್ವರ್ ಸಿ ನಾವುಂದ
ಚಿಂತಕ -ಬರಹಗಾರು
9833259692