ಜೀವರಕ್ಷಕ, ಮುಳುಗು ತಜ್ಞ ಭಾಸ್ಕರ್ ಕಳಸ ತಳಗೊಡು, ಈ ಬಡ ಸಂಸಾರ ಆ ಮಕ್ಕಳ ಮೊಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಖುಷಿ ತರಿಸಿದ ಎಲ್ಲಾ ಸಮಾಜ ಸೇವಕರಿಗೂ ಶಿರಬಾಗಿ ನಮಸ್ಕರಿಸುವೆ.
ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಭಾಸ್ಕರ್ ರವರ ಮೂರು ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ಪುಸ್ತಕವನ್ನು ಜೋಡಿಸಿಡಲು ಕಾಪಾಟ್ ಒಂದನ್ನು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ.
ಕಳಸದ ಕೃಷಿಕರು, ಪತ್ರಕರ್ತರಾದ ರವಿ ಕೆಳಂಗಡಿ ಅವರು ಭಾಸ್ಕರ್ ಅವರಿಗೆ ಸೋಲಾರ್ ದೀಪಗಳನ್ನು ನೀಡಿದ್ದಾರೆ. ಚಿಮಿಣಿ ದೀಪದ ಬೆಳಕಿನಲ್ಲಿ ಓದುತ್ತಿದ್ದ ಮೂರು ಮಕ್ಕಳು ಈಗ ಸೋಲಾರ್ ಬೆಳಕಿನಲ್ಲಿ ಓದಲು ಕೊಳ್ಳುತ್ತಿದ್ದಾರೆ .ಮನೆ ಮತ್ತು ಮನದಲ್ಲಿ ಕಷ್ಟದ ಕತ್ತಲು ಆವರಿಸಿದ್ದು ಈ ಬೆಳಕಿನ ಹಬ್ಬದ ದಿನದಲ್ಲಿ ಮಕ್ಕಳು ಬೆಳಕು ಕಂಡಂತಾಗಿ ಅವರ ಮನದಲ್ಲಿ ಮೊಗದಲ್ಲಿ ಸಂತಸ ವ್ಯಕ್ತವಾಗಿದ್ದು ದಾನಿಗಳ ಮತ್ತು ಸಮಾಜ ಸೇವಕರ ಮನ ಮುಟ್ಟಿತು.
ಕೆಕೆಪಿ ಬಸ್ ಸಂಸ್ಥೆ ಭಾಸ್ಕರ್ ಅವರ ಮೂರು ಮಕ್ಕಳಿಗೆ ಶಿಕ್ಷಣ ಮುಗಿಯುವವರೆಗೂ ಉಚಿತ ಬಸ್ ಸೌಲಭ್ಯವನ್ನು ನೀಡಿದ್ದು, ಮನೋ ಅಂತರ ಬಳಗದವರು ಹಾಗೂ ಚಿಂತಕರು ಸಮಾಜ ಸೇವೆಯ ಸಜ್ಜನರು ಮೂಲಕ ಸ್ಥಳೀಯ ಪಂಚಾಯತ್ ರವರ ಜೊತೆ ನಿರಂತರ ಮಾತುಕತೆಯ ಮೂಲಕ ಭಾಸ್ಕರ್ ಅವರಿಗೆ ಮನೆ ನ ನಿರ್ಮಿಸಿಕೊಡುವ ಮಾತುಕತೆ ನಡೆದಿರುತ್ತದೆ.
ಹ್ಯೂಮನಿಟಿ ಸಂಸ್ಥೆ ಬೆಳ್ಮಣ್ ರವರು ಭಾಸ್ಕರ್ ರವರ ಕನಸಿನ ಮನೆ ನಿರ್ಮಾಣಕ್ಕೆ 1 ಲಕ್ಷ ಧನ ಸಹಾಯ ಮಾಡುವ ಸಂಕಲ್ಪ ಮಾಡಿರುವುದನ್ನು ಇಲ್ಲಿ ನೆನೆಸಿಕೊಳ್ಳುವುದು ಅತಿ ಮುಖ್ಯವಾಗಿದೆ
ಭಾಸ್ಕರ್ ರವರಿಗೆ ಧನಸಹಾಯ ಮಾಡಿದ ಎಲ್ಲಾ ಸಮಾಜ ಸೇವಕರು ದಾನಿಗಳಿಗೆ ಹೃದಯಪೂರ್ವಕ ವಂದನೆ ಸಲ್ಲಿಸುತ್ತಿದ್ದೇವೆ.
9480654757 ಭಾಸ್ಕರ್ ತಳಗೋಡ್, ಈಜು ಪಟು.
ಲೇಖನ: ಈಶ್ವರ ಸಿ ನಾವುಂದ