ಕoಬದಕೋಣೆ(ನ,16);“ಸ್ವರಾಜ್ಯ ೭೫” ರವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಪ್ರಯುಕ್ತ ಕoಬದಕೋಣೆಯ ದಿವಂಗತ ಆರ್. ಕೆ. ಸಂಜೀವರಾಯರ ಮನೆಯಲ್ಲಿ ನ,13 ರ ಶನಿವಾರದಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀ ಜನಾರ್ಧನ್ ಮರವಂತೆ ಯವರು ನಾಮಫಲಕವನ್ನು ಅನಾವರಣ ಮಾಡಿದರು. ನಂತರ ಸರ್ವರು ದಿವಂಗತ ಸಂಜೀವರಾಯ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು. ಶ್ರೀ.ಬಿ ಪಿ ಶಿವಾನಂದ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.”ಸ್ವರಾಜ್ಯ75″ ರ ಸಂಚಾಲಕರಾದ ಪ್ರದೀಪ್ ಕುಮಾರ್, ಬಸ್ರೂರು ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿಸ್ವಾತಂತ್ರ ಹೋರಾಟಗಾರರ ಮನೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಿ ನಾಮಫಲಕ ಹಾಗೂ ರಾಷ್ಟ್ರಧ್ವಜವನ್ನು ಮನೆಯವರಿಗೆ ನೀಡುವ ಉದ್ದೇಶ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಶ್ರೀ ವಾಸುದೇವ ಕಾರಂತ ಕೋಡೇರಿ, ಶ್ರೀ ರಮೇಶ್ ವೈದ್ಯ ಅಂಬಾಗಿಲು, ಶ್ರೀ ಪುಂಡಲೀಕ ನಾಯಕ್ ಖಂಬದಕೋಣೆ, ಸಂದೀಪನ್ ಶಾಲೆಯಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವೇಶ್ವರ ಅಡಿಗ, ಗ್ರಾಮಪಂಚಾಯತ್ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹಾಗೂ ದಿವಂಗತ ಸಂಜೀವರಾಯರ ಪುತ್ರಿ ಶ್ರೀಮತಿ ಪ್ರವೀಣಾ ಉಪಸ್ಥಿತರಿದ್ದರು.ಶ್ರೀ ಓಂ ಗಣೇಶ್ ವಂದಿಸಿದರು. ಆಶಾಲತಾ ಮರವಂತೆ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ವಿಶ್ವೇಶ್ವರ ಅಡಿಗರು 9ನೇ ತರಗತಿಯ ಮಕ್ಕಳಿಗೆ “ಸವ್ಯಸಾಚಿ ಸಂಜೀವರಾಯರು” ಎಂಬ ವಿಷಯದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.ಅದೇ ದಿನ ಬೆಳಿಗ್ಗೆ ಶ್ರೀ ಆರ್. ಕೆ. ಸಂಜೀವರಾವ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಸ್ರೂರು ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಲ್ಲಿ ಕoಬದಕೋಣೆ ಗ್ರಾಮಪಂಚಾಯತ್ ಸದಸ್ಯರುಗಳು, ದಿವಂಗತ ಸಂಜೀವ ರಾಯರ ಕುಟುಂಬದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು. “ಸ್ವರಾಜ್ಯ ೭೫” ಸಂಚಾಲಕ ಶ್ರೀ ಪ್ರದೀಪ್ ಕುಮಾರ್ ಅವರ ಕ್ರಿಯಾಶೀಲತೆ ಹಾಗೂ ದೇಶಕ್ಕಾಗಿ ನಡೆಸುತ್ತಿರುವ ಈ ಸೇವೆಯನ್ನು ಶ್ಲಾಘಿಸಿ ಪ್ರೋತ್ಸಾಹಿಸಿದರು.
ಶಾರದಾ ಕಾಲೇಜಿನ ಏನ್ ಸ್ ಎಸ್ ಯೋಜನಾಧಿಕಾರಿ ಶ್ರೀ ಅಕ್ಷಯ ಹೆಗ್ಡೆಯವರು ಧನ್ಯವಾದಗಳನ್ನು ಸಮಪಿರ್ಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿ ಗೊಳಿಸಲಾಯಿತು.ನಂತರ ಸರ್ವರು ರಾಷ್ಟ್ರಧ್ವಜದ ಬಳಿ ತೆರಳಿ ರಾಷ್ಟ್ರಧ್ವಜ ಕ್ಕೆ ವಂದಿಸಿ, ರಾಷ್ಟ್ರಗೀತೆಯನ್ನು ಹಾಡಿ, ದಿವಂಗತ ಸಂಜೀವರಾಯರ ಮನೆಯವರಿಗೆ ಶ್ರೀ ಬಿ ಪಿ ಶಿವಾನಂದ ರಾವ್ ರವರು ರಾಷ್ಟ್ರಧ್ವಜವನ್ನು ಅರ್ಪಿಸಿದರು.