ಗೋಪಾಡಿ: ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ ಹಾಗೂ ಪರಿವಾರ ದೈವಸ್ಥಾನದ 7ನೇ ವರ್ಷದ ವರ್ಧಂತ್ಯುತ್ಸವ ಜನವರಿ 25 ಹಾಗೂ 26 ರಂದು ನಡೆಯಲಿದೆ. ಕೋಟ ವೇದಮೂರ್ತಿ ಶ್ರೀಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ,ಅನ್ನ ಸಂತರ್ಪಣೆ ನಡೆಯಲಿದ್ದು ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸವಿನಯ ಚಂಡೆ ಬಳಗ ಗೋಪಾಡಿ (ಪಡು) ಇವರಿಂದ 2 ದಿನದ ವಿಶೇಷ ಚಂಡೆ ಸೇವೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.