ಕೋಟೇಶ್ವರ (ಜೂ,02): ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾ ಜೋಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್, ಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕ ವೃಂದ ಮತ್ತು ಗ್ರಾಮಸ್ಥರು ಕಾಳಾವರ ಸಹಭಾಗತ್ವದಲ್ಲಿ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಣಾಧಿಕಾರಿ ಕೆ ರಾಜೀವ ಶೆಟ್ಟಿ ಸಾಧಕ ವಿದ್ಯಾರ್ಥಿ ನಿಶಾ ಜೋಗಿಗೆ ಸನ್ಮಾನಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ ಪರವಾಗಿ ಸಂಧ್ಯಾ, ಅಧ್ಯಾಪಕರ ಪರವಾಗಿ ಗಣೇಶ ಶೆಟ್ಟಿಗಾರ, ಗ್ರಾಮಸ್ಥರ ಪರವಾಗಿ ಡಾ. ಭಾಸ್ಕರ ಶೆಟ್ಟಿ ಪ್ರಾಂಶುಪಾಲರು, ಸುರೇಶ ಎನ್ ಶೆಟ್ಟಿ ಉಪನ್ಯಾಸಕರು ನಿಶಾ ರವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಮಚಂದ್ರ ನಾವಡ, ಕಾಳಾವರ ಮಹಾಲಿಂಗೇಶ್ವರ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ಅಧ್ಯಕ್ಷರಾದ ಈ ಎಸ್ ಚಂದ್ರಶೇಖರ್ ಹೆಗ್ಡೆ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಿತ್ಯಾನಂದ ದೇವಾಡಿಗ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿಶಾಳ ಸಾಧನೆಗೆ ಕಾರಣಿಕರ್ತರಾದ ಎಲ್ಲಾ ಅಧ್ಯಾಪಕರನ್ನು ಗೌರವಿಸಲಾಯಿತು. ಮುಖ್ಯೋಪಾಧ್ಯಾಯರಾದ ಅಶೋಕ ವರ್ಣೇಕರ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕಿ ಗಾಯತ್ರಿ ಅಡಿಗರು ವಂದಿಸಿದರು. ಉಪನ್ಯಾಸಕ ಕಾಳಾವರ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.