ಕುಂದಾಪುರ (ಜೂ,10):. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2021-22 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಮೇ,27ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಸಂಪನ್ನಗೊಂಡಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ ಉಮೇಶ್ ಶೆಟ್ಟಿ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾರ್ಷಿಕ ಕ್ರೀಡಾಕೂಟದಲ್ಲಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕುಂದಾಪುರದ ನಿರ್ದೇಶಕರಾದ ಶ್ರೀ ಕುಸುಮಾಕರ ಶೆಟ್ಟಿ ,ಸಂಚಲನ ಗ್ರೂಪ್ ಕುಂದಾಪುರದ ಅಧ್ಯಕರಾದ ಅಕ್ಷತ್ ಶೆಟ್ಟಿ ,ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್ ,ಕ್ರೀಡಾ ಕಾರ್ಯದರ್ಶಿ ನಿತೀನ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಕ್ರೀಡಾ ಸಂಘದ ಸಹ ಸಂಯೋಕರಾದ ಹರೀಶ್ ಬಿ ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. .ಉಪನ್ಯಾಸಕ ಯೋಗೀಶ್ ಶಾನುಭೋಗ್ ಸ್ವಾಗತಿಸಿದರು.ಉಪನ್ಯಾಸಕರಾದ ದೀಪಾ ಪೂಜಾರಿ ವಂದಿಸಿ , ನಿರೂಪಿಸಿದರು.
ಕ್ರೀಡಾಕೂಟದಲ್ಲಿ ದ್ವೀತಿಯ ಬಿ.ಕಾಂ ಎ ಸಮಗ್ರ ಚಾಂಪಿಯನ್, ದ್ವೀತಿಯ ಬಿ.ಕಾಂ ಸಿ ರನ್ನರ್ ರಪ್ ,ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್ ರಕ್ಷಿತ್ ದ್ವೀತಿಯ ಬಿ.ಕಾಂ ಎ,ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಭೂಮಿಕಾ ತ್ರತೀಯ ಬಿ.ಕಾಂ ಬಿ ಪಡೆದರು.
ಪಥಸಂಚಲನದಲ್ಲಿ ಪ್ರಥಮ ಸ್ಥಾನ ದ್ವೀತಿಯ ಬಿ.ಕಾಂ ಎ ದ್ವೀತಿಯ ಸ್ಥಾನ ದ್ವೀತಿಯ ಬಿ.ಕಾಂ ಬಿ ,ತ್ರತೀಯ ಸ್ಥಾನ ಪ್ರಥಮ ಬಿ ಕಾಂ ಸಿ ತಂಡ ಪಡೆದು ಕೊಂಡಿತು.