ಕುಂದಾಪುರ (ಸೆ. 12) : ಇಲ್ಲಿನ ಡಾ| ಬಿ ಬಿ ಹೆಗ್ಡೆ ಕಾಲೇಜಿನ ರೋಟರಾಕ್ಟ್ ಕ್ಲಬ್ನ 2024-25ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಸೆಪ್ಟಂಬರ್ 12ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ರೋಟರಿ ಕ್ಲಬ್ ಕುಂದಾಪುರ ಹಾಗೂ ಕಾಲೇಜಿನ ರೋಟರಾಕ್ಟ್ ಕ್ಲಬ್ನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರೋಟರಾಕ್ಟ್ ಸಂಸ್ಥೆಯು ಯುವಕರಿಗಾಗಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಸದಸ್ಯರು ಸಂಸ್ಥೆಯ ನೀತಿ, ನಿಯಮ, ಉದ್ದೇಶವನ್ನು ತಿಳಿದುಕೊಂಡು ಕಾರ್ಯ ಪ್ರವೃತ್ತರಾಗಬೇಕು, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಹೊಂದಿ ಯಶಸ್ಸು ಸಾಧಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ಅಧ್ಯಕ್ಷ ರೊ. ಕಿಶೋರ್ ಕುಮಾರ್ ಬಿ. ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು ಪ್ರಸ್ತುತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ವಿಧಿ-ವಿಧಾನ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ ಶೆಟ್ಟಿ ವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ರೊ. ಲಿಯಾಕತ್ ಆಶಯ ನುಡಿಗಳನ್ನಾಡಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ರೊ. ಸಚ್ಚಿದಾನಂದ ಹಾಗೂ ರೋಟರಿ ಕ್ಲಬ್ ಸದಸ್ಯ ರೊ. ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯ ನಾಗರಾಜ್ ಶೆಟ್ಟಿ, ರೋಟರಾಕ್ಟ್ ಕ್ಲಬ್ನ ಸಂಯೋಜಕಿ ಅವಿತಾ ಕೊರೆಯಾ, ನಿರ್ಗಮನ ಅಧ್ಯಕ್ಷ ಶ್ರೀಶ ಅಂತಿಮ ಬಿಕಾಂ ಸಿ, ನಿರ್ಗಮನ ಕಾರ್ಯದರ್ಶಿ ಸೌಮ್ಯ ಅಂತಿಮ ಬಿ.ಕಾಂ. ಬಿ, ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಆದಿತ್ಯ ದ್ವಿತೀಯ ಬಿಸಿಎ ಹಾಗೂ ನೂತನ ಕಾರ್ಯದರ್ಶಿ ಮಾನ್ಯ ದ್ವಿತೀಯ ಬಿಸಿಎ ಪದಗ್ರಹಣ ಸ್ವೀಕರಿಸಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಾಕ್ಟ್ ಕ್ಲಬ್ನ ಸಂಯೋಜಕ ಶ್ರೀ ಸತೀಶ್ ಶೆಟ್ಟಿ ಹೆಸ್ಕುತ್ತೂರು ವಂದಿಸಿದರು. ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ ಪ್ರಾರ್ಥಿಸಿ, ಸುಹಾನಿ ನಿರೂಪಿಸಿದರು.