ಕುಂದಾಪುರ(ಸೆ,5): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಪ್ಟಂಬರ್ 05 ರಂದು ಸಂಜಯ ಗಾಂಧಿ ಪ್ರೌಢಶಾಲೆಯ ನಿವೃತ್ತ ಸಹ ಶಿಕ್ಷಕರಾದ ಶ್ರೀ ಜಯಂತ ಶೆಟ್ಟಿ ದಂಪತಿಗಳನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ ಗೌರವಿಸುವ ಮೂಲಕ ಆಚರಣೆ ಮಾಡಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಜಯಂತ ಶೆಟ್ಟಿ ಅವರು ಮಾತನಾಡುತ್ತಾ ನಾವು ಕಲಿಸಿದ ವಿದ್ಯಾರ್ಥಿಗಳು ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಿಕೊಂಡಾಗ ನಮಗೆ ಅದರಷ್ಟು ಸಂತೋಷದ ಉಡುಗೊರೆ ಬೇರೆ ಯಾವುದೂ ಇಲ್ಲ ಎಂದು ಹೇಳಿದರು. ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲ.ರತ್ನಾಕರ ಶೆಟ್ಟಿ ಕಂದಾವರ, ಲ .ವಸಂತರಾಜ ಶೆಟ್ಟಿ ವಂಡ್ಸೆ , ಲ.ನಾರಾಯಣ ಶೆಟ್ಟಿ ಕಡ್ರಿ ಲ.ಸುಕುಮಾರ ಶೆಟ್ಟಿ ಹೇರಿಕುದ್ರು, ಲ .ಕಿರಣ್ ಹೆಗ್ಡೆ ಅಂಪಾರು, ಲ.ಅರುಣ್ ಕುಮಾರ್ ಶೆಟ್ಟಿ ಅಂಪಾರು, ಲ.ಉದಯ್ ಕುಮಾರ್ ಶೆಟ್ಟಿ ಮಚಟ್ಟು, ಲ.ಪ್ರಭಾಕರ ಶೆಟ್ಟಿ ಯಳಂತೂರು, ಲ.ನಿತೀಶ್ ಶೆಟ್ಟಿ ಬಸ್ರೂರು, ಲ.ಪ್ರಶಾಂತ್ ಶೆಟ್ಟಿ ಶಿರೂರು, ಲ.ಗಣೇಶ ಬೈಂದೂರು, ಲ .ವಿಜಯ್ ಕುಮಾರ್ ಶೆಟ್ಟಿ ಹಂದುಕುಂದ, ಲ.ಸಂತೋಷ್ ಕುಮಾರ್ ಶೆಟ್ಟಿ ವಡೇರಹೋಬಳಿ, ಲ.ಅಜಯ್ ಕುಮಾರ್ ಶೆಟ್ಟಿ ಅಂಪಾರು, ಲ.ಪ್ರಕಾಶ್ ಶೆಟ್ಟಿ ಬಗ್ವಾಡಿ, ಲ.ರಾಜೀವ ಶೆಟ್ಟಿ ಹೆಂಗವಳ್ಳಿ ಉಪಸ್ಥಿತರಿದ್ದರು.

ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಪ್ರಧಾನ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲರಾದ ಲ. ಭುಜಂಗ ಶೆಟ್ಟಿ ರಟ್ಟಾಡಿ ವಂದಿಸಿದರು.











