ಕುಂದಾಪುರ( ನ,25): ಕಂಡ್ಲೂರು ಕೆಡಿಎಫ್ ಡೋಜೋ ವಿದ್ಯಾರ್ಥಿಗಳು 22ನೇ ಕೆಬಿಐ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2025ರಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ರಾಜ್ಯ ಮತ್ತು ಡೋಜೋಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ಸಿಹಾನ್ ಶೇಖ್ ಬಸ್ರೂರು, ಸೌರವ್ ಶೆಟ್ಟಿ ಮತ್ತು ತ್ರುಪ್ತಿ ಆಚಾರ್ ಮೊಹಮ್ಮದ್ ಇಬ್ರಾಹಿಂ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯಲ್ಲಿ ತಂಡ ಒಟ್ಟು 32 ಪದಕಗಳನ್ನು ಗಳಿಸಿದೆ — 12 ಚಿನ್ನ, 6 ಬೆಳ್ಳಿ, 14 ಕಂಚು ಪಡೆದಿದ್ದಾರೆ.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಯಾ ಶಾಲಾ ವ್ಯವಸ್ಥೆ, ಟೀಂ ಕೆಡಿಎಫ್ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದೆ.
ಹಾಗೆಯೇ ತಂಡಕ್ಕೆ ಸದಾ ಬೆಂಬಲ ಮತ್ತು ಮಾರ್ಗದರ್ಶನ ನೀಡುತ್ತಿರುವ ಫೌಝಿಯಾ ಕೆಬಿ, ಕಂದ್ಲೂರು ಡೋಜೋ ಹುಡುಗಿಯರ ತಂಡದ ಮ್ಯಾನೇಜರ್ ಅವರಿಗೆ ವಿಶೇಷ ಧನ್ಯವಾದಗಳು ಸಲ್ಲಿಸಲಾಯಿತು.

ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತಿನ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.










