ಆಗಷ್ಟೇ ಕನಸು ಕಾಣಲು ಶುರುಮಾಡಿದ್ದೆ. ಚೆನ್ನಾಗಿ ಓದಿ ಒಳ್ಳೆ ಕೆಲಸ ಹುಡುಕಿ ನನ್ನದೇ ಸ್ವಂತ ದುಡಿಮೆಯಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಸ್ವತಂತ್ರ ಹಕ್ಕಿಯಾಗಬೇಕೆಂದು ಬಯಸಿದ್ದೆ. ಆ ದಾರಿಗೂ ಮುಳ್ಳು ಹಾಕಿದ್ದರು. ಸಮಾಜ ನನ್ನನಂತೂ ನೋಡುತ್ತಿದ್ದ ದೃಷ್ಟಿಕೋನ ” ನಾನೊಂದು ಹೆಣ್ಣೆಂದೂ, ಮದುವೆಯಷ್ಟೇ ಇನ್ನುಳಿದ ಬದುಕೆಂದೂ…
ಇದೆಂಥಾ ವಿಪರ್ಯಾಸ ನೋಡಿ. ಓದಿನ್ನು ಮುಗಿಯದೇ ಇದ್ದ ಹುಡುಗಿ, ಊರ ಊಸಾಬರಿ ಅರಿಯದೇ ತನ್ನದೇ ತರಾತುರಿಯಲ್ಲಿದ್ದವಳಿಗೆ, ಪರಿಚಯಸ್ಥರು ಮನೆಯವರ ಮೇಲೆ ಹೇರುತ್ತಿದ್ದದ್ದು ಮದುವೆ ಎಂಬ ‘ಬಂಧನ ‘. ಆಡಿಕೊಳ್ಳೊರ ಬಾಯಿ ಮುಚ್ಚಿಸೋ ಪ್ರಯತ್ನದಲಿ ಹೆತ್ತವರು ಮಗಳ ಮೇಲೆ ಹೊರಿಸುತ್ತಿರೋ ಈ ‘ ಬಂಧನ ‘ ದ ಭಾರದಲಿ ಆಕೆ ಇನ್ನೇಷ್ಟು ನೊಂದು ಬೆಂದು ಬಂಧಿಯಾರಬಹುದು ನೀವೇ ಹೇಳಿ…!?
ಹೆತ್ತವರಿಗೆ ಭಾರವಾಗದೇ ” ನಾನು ಸ್ವಾವಲಂಬಿಯಾಗಿ ಬದುಕಬೇಕು ” ಎಂಬ ಅದೇಷ್ಟೋ ಹೆಂಗಳೆಯರ ಕನಸುಗಳು ಮುರಿದು ಮರಳಿ ಇನ್ನೊಬ್ಬರ ಬದುಕಲಿ ಪಾತ್ರಧಾರಿಯಾಗುತಿರೋ ನನಸು. ‘ನನದೂ ಅಂಥ ಹೆಸರು ಮಾಡೊದಿದೆ’ ಎಂದವಳ ಹೆಸರೇ ಇಲ್ಲದೇ ಇಂದೇಕೋ ಮೂಲೆ ಗುಂಪಾಗಿ ಬದುಕಲೂ ಇನ್ನೊಬ್ಬರ ಆಶ್ರಯವನ್ನು ಬಯಸುವಂತಾಗಿದೆ. ಹುಡುಗ settle ಅಂದ್ರೆ job ,ಮನೆ ಮಟ ಅನ್ನುತ್ತಿದ್ದರೆ, ಹುಡುಗಿ settle ಅನ್ನುವಾಗ ಗಂಡ,ಮಕ್ಕಳು …..!
ಇದೆಂಥಾ ಸಮಾನತೆ.!?
ಬೇಡಿಕೆ ಇಡುತಿರುವುದಂತೂ ಇಷ್ಟೇ, ಸ್ವಲ್ಪ ಸಮಯವಾದರೂ ಸ್ವತಂತ್ರವಾಗಿ ಬದುಕಲೂ ಬಿಡಿ ಖಂಡಿತ ಇದು ಸ್ವಾರ್ಥಕ್ಕಾಗಿ ಅಲ್ಲ, ಅತ್ಮಾಭಿಮಾನಕ್ಕಾಗಿ. ನಾನು ಯಾರ ಹಂಗಿಲ್ಲದೇ ಬದುಕಬಲ್ಲೇ ಎಂದು ನನಗೂ ತಿಳಿಯಬೇಕೆಂದೂ,..
ಹಾಗೆಂದೂ ಬೇರೆಯವರ ಆಲೋಚನೆ ತಪ್ಪೆಂದು ವಾದಿಸುತ್ತಿಲ್ಲ. ನಮಗೂ ತಿಳಿದುಂಟು .ಕಾಲ ಸರಿಯಿಲ್ಲ. ಅತ್ಯಾಚಾರ, ಅನಾಚಾರದಲಿ ಹೆತ್ತವರು ಭಯ ಪಡುವುದು ಸಹಜ.ಹಾಗೆಂದ ಮಾತ್ರಕ್ಕೆ ಅವರನ್ನು ಮದುವೆಯ ‘ ಬಂಧನ ‘ ದಲ್ಲಿ ಕಟ್ಟಿಹಾಕುವುದು ಅದೇಷ್ಟು ಸರಿ.! ಆಕೆಯನ್ನು ನೀವಿನ್ನು ಸಬಲರನ್ನಾಗಿ ಮಾಡಬೇಕು. ಆಕೆಯ ಭದ್ರತೆ, ಶಕ್ತಿಯನ್ನು ನೀವೇ ಹುಟ್ಟಿ ಹಾಕಿ ಹುರಿದುಂಬಿಸಬೇಕು.ಆಕೆಯನ್ನು ಇನ್ಯಾರದ್ದೋ ನಂಬಿಕೆಯ ಮೇಲೆ ಕಳುಹಿಸುತ್ತಿರೋ ನೀವು ! ಆಕೆಯ ಮೇಲೆಕೆ ಅದೇ ನಂಬಿಕೆ ಇಡುತ್ತಿಲ್ಲ? ಹೆಣ್ಣು ಶಕ್ತಿಯ ಸ್ವರೂಪ. ಅದನ್ನು ಆಕೆಯಲಿ ನಿರೂಪಿಸಲೂ ಬಿಡಿ .
ಮದುವೆಯ ಬಂಧನ ಎರಡು ಮನಸುಗಳು ಖುಷಿಯಿಂದ ಬಂಧಿಯಾಗಬೇಕೇ ಹೊರತು ಇನ್ಯಾರದೋ ಬೇಡಿಕೆಯ ಒತ್ತಡದ ಮೇಲೆ ಕನಸುಗಳು ಬಂಧಿಯಾಗಬಾರದು. ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಇನ್ಯಾರನ್ನೋ ಸಬಲರನ್ನಾಗಿ ಮಾಡುವ ಶಕ್ತಿ ಅವಳಲ್ಲಿರುವಾಗ, ಅವಳ ಪ್ರಬಲತೆ,ಪ್ರಾಮುಕ್ಯತೆಯನ್ನು ತಡೆ ಹಿಡಿಯೋ ಪ್ರಯತ್ನ ಈ ಸಮಾಜಕ್ಕೆ ಏಕೆ..!?
ಇಂಥ ಬಂಧನಕ್ಕೆ ದಿಕ್ಕಾರವಿರಲಿ.
‘ಬಂಧನ’ ಯಾರಿಗೂ ‘ ಬಂಧನ ‘ ವಾಗದಿರಲಿ.
ಬದುಕನ್ನು ರೂಪಿಸಿಕೊಳ್ಳಲು ….ಬದುಕಲು ಬಿಡಿ….
📝- ಅರ್ಚನಾ.ಆರ್ .ಕುಂದಾಪುರ.