ಕೋಟೇಶ್ವರ:( ಏ,17): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ ವತಿಯಿಂದ ಮೂವರು ಮಕ್ಕಳನ್ನು ಕಳೆದುಕೊಂಡು , ದುಡಿಮೆಯ ವಯಸ್ಸು ಮೀರಿದ ಅಸಹಾಯಕ ಕುಟುಂಬಕ್ಕೆ ಸಂಘಟನೆಯ ವತಿಯಿಂದ ನಿರ್ಮಿಸಿ ಕೊಟ್ಟ ಮನೆ “ಶ್ರೀ ಕೃಷ್ಣ” ಇದರ ಗ್ರಹ ಪ್ರವೇಶ ಏ.16 ರಂದು ಜರುಗಿತು.
ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಜಗದೀಶ್ ಮಾರ್ಕೋಡು ರವರು ಉದ್ಘಾಟನೆಗೊಳಿಸಿ, ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ ನಾಯ್ಕ್, ಗೌರವ ಅಧ್ಯಕ್ಷ ರಾಜೀವ ಮರಕಾಲ ಸೌರಭ, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಸ್ಥಾಪಕಾಧ್ಯಕ್ಷರಾದ ಸತೀಶ್ ಎಮ್. ನಾಯ್ಕ್, ಹಿರಿಯರಾದ ರಾಮ ನಾಯ್ಕ್ ಬೀಜಾಡಿ, ಶಂಕರ್ ನಾಯ್ಕ್ ಅರಸರಬೆಟ್ಟು, ರಾಜು ಮೊಗವೀರ,ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ ,ಭಾಸ್ಕರ್ ಹಳೆ ಅಳಿವೆ, ಗೌರವ ಸಲಹೆಗಾರರಾದ ಸುರೇಶ್ ಮೊಗವೀರ ಶಾನಾಡಿ, ಆನಂದ ಗುರಿಕಾರರು,ಮಹಿಳಾ ಸಂಘಟನೆ ಅಧ್ಯಕ್ಷರಾದ ಅನುಸೂಯ ಕೆದೂರು, ಮಾಜಿ ಅಧ್ಯಕ್ಷರಾದ ಶಾರದಾ ಮೂಡುಗೋಪಾಡಿ, ದಿವ್ಯಲಕ್ಷ್ಮಿ ಕೋಟೇಶ್ವರ, ಪದಾಧಿಕಾರಿಗಳಾದ ಗಾಯತ್ರಿ ತೆಕ್ಕಟ್ಟೆ ,ಉಷಾ ಮಾರ್ಕೋಡು,ಜೊತೆ ಕಾರ್ಯದರ್ಶಿ ರಾಘವೇಂದ್ರ ಹಳೆಹಳಿವೆ,ದಿನೇಶ್ ಕೊರ್ಗಿ,ಜಯರಾಜ್ ಅಂಕದಕಟ್ಟೆ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಆಚಾರ್ಯ, ಮಾಜಿ ಕಾರ್ಯದರ್ಶಿ ರಾಘವೇಂದ್ರ ಹರಪನಕೆರೆ,ಮತ್ತು ಇತರರು ಉಪಸ್ಥಿತರಿದ್ದರು.