ಏ ಸಖಿ,………….ನಾ ನಿನಗೆ ದೀಪಾವಳಿಯ ಕಥೆ ಹೇಳಲೆಂದೆ ಬಂದೆ. ಆದರೆ ಕಥೆ ಮುಗಿಯುವ ತನಕ ನಾನು ಕರೆದುಕೊಂಡಲ್ಲಿ ನೀನು ಬರಬೇಕು ಅಷ್ಟೆ! ಸರಿ ಎಂದು ತಲೆ ಆಡಿಸಿದ ಆರು ವರುಷದ ಪುಟಾಣಿ ಸಖಿ, ಕಿವಿಗಳೆರಡು ನೆಟ್ಟಗೆ ಮಾಡಿಕೊಂಡು ಬಾ ಎಂದು ಕರೆದೊಯ್ದಿದ್ದು ದೇವಲೋಕಕ್ಕೆ. ಕಲ್ಪನಾಲೋಕದ ಕಥಾಯಾನ ಶುರು. ಹೀಗೆ ಕಥೆ ಪ್ರಾರಂಭವಾಯಿತು. ಒಮ್ಮೆ ದೇವಲೋಕದಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ. ಆ ಸಭೆಯಲ್ಲಿ ಬೆಳಕಿನ ಕಿಡಿಗಳು ತಮ್ಮ ನಿಜವಾದ ಬದುಕಿನ ಅರ್ಥ ಏನು ಎನ್ನುವುದು ಎಂದು ಮಾತನಾಡುತ್ತಿರುತ್ತವೆ. ಮಾತು ವಾದವಾಗಿ, ವಾದ ಜಗಳವಾಗಿ ಘರ್ಷಣೆ ಆಗುತ್ತದೆ. ಬೆಳಕಿನ ಕಿಡಿ ಗಳೆಲ್ಲ ಒಂದೊಂದು ರೀತಿಯಲ್ಲಿ ವಾದ ಮಾಡುತ್ತಿರಲು, ಬದುಕನ್ನು ಹೇಗೆ ಎಲ್ಲಿ ಬೆಳಗಬೇಕು ಎನ್ನುವುದನ್ನು ಮಾತನಾಡುತ್ತಿರಲು ಒಂದು ಸೋಮಾರಿ ಬೆಳಕಿನ ಕಿಡಿಯೊಂದು ಇನ್ನೂ ತನ್ನ ಕೊನೆಯ ಬಿಟ್ಟು ಕದಲದೇ ಎಷ್ಟು ದಿನಗಳಿಂದ ವಿಶ್ರಾಂತಿಯಲ್ಲಿತ್ತು .
ಆ ಬೆಳಕಿನ ಕಿಡಿ ತನ್ನ ಕಾರ್ಯದ ಶ್ರೇಣಿಯಲ್ಲಿ, ಜವಾಬ್ದಾರಿಯಲ್ಲಿ ಸೋಮಾರಿಯಾಗಿ ಹಿಂದೆಯೇ ಇರುತ್ತಿತ್ತು. ದೇವಲೋಕದಲ್ಲಿ ಹಾಕಲಾದ ಶ್ರೇಣಿಯಲ್ಲಿ ಕೊನೆಯ ಬೆಳಕಿನ ಕಿಡಿಯಾಗಿ ಅದರ ಸ್ಥಾನ ಗಟ್ಟಿಯಾಗಿತ್ತು. ಈ ರೀತಿಯಾದ ಬೆಳಗಿನ ಕಿಡಿಗೆ ಈ ವಾದ-ವಿವಾದಗಳಿಂದ ಎಚ್ಚರಿಕೆ ಆಗಿತ್ತು. ತನ್ನ ಬಾಲ್ಯದಿಂದ ಪ್ರಸ್ತುತ ದವರೆಗೂ ಸುಖವನ್ನೇ ಕಂಡ ಈ ಬೆಳಕಿನ ಕಿಡಿಗೆ ನಿಜವಾಗಲೂ ಬದುಕಿನ ಅರ್ಥವೇ ಗೊತ್ತಿರಲಿಲ್ಲ. ತಿಳಿದುಕೊಳ್ಳಬೇಕೆಂಬ ಅವಶ್ಯಕತೆ ಅಥವಾ ಯಾವುದೇ ಆಸಕ್ತಿಯೂ ಆ ಬೆಳಕಿನ ಕಿಡಿಗೆ ಇರಲಿಲ್ಲ,ಬದುಕಿನಲ್ಲಿ ಅದಕ್ಕೆ ಬೇಕಾಗಿದ್ದ ಎಲ್ಲಾ ಆಡಂಬರವೂ ಸುಖವು ದೇವಲೋಕದಲ್ಲಿ ಐಷಾರಾಮಿ ಜೀವನದ ರೂಪದಲ್ಲಿ ಸಿಗುತ್ತಿತ್ತು.
ಆದರೆ ದೇವಲೋಕದಲ್ಲಿದ್ದ ಬೆಳಕಿನ ಕಿಡಿಗಳಿಗೆ ತಮ್ಮ ಜೀವನದ ನಿಜವಾದ ಅರ್ಥ ತಿಳಿಯದ ಕಾರಣದಿಂದ ಅವುಗಳಲ್ಲಿ ದೈವೀಶಕ್ತಿ ಪ್ರಾಪ್ತಿಯಾಗಿರಲಿಲ್ಲ. ಈ ಶಕ್ತಿಗಳನ್ನು ಪ್ರಾಪ್ತಿ ಮಾಡಿಕೊಳ್ಳಲು ಜೀವನದ ನಿಜವಾದ ಅರ್ಥವನ್ನು ಹುಡುಕುವುದು ಅವಶ್ಯವಾಗಿತ್ತು. ಇದನ್ನು ತಿಳಿಯದೆ ಹಿರಿಯ ಬೆಳಕಿನ ಕಿಡಿಗಳು ವಾದ-ವಿವಾದ ಮಾಡುವಾಗ ಈ ಸೋಮಾರಿ ಪುಟಾಣಿ ಬೆಳಕಿನ ಕಿಡಿಯೊಂದು ಶ್ರೀಮಂತಿಕೆ ಯಿಂದ ಮಾತ್ರ ಬದುಕಿಗೊಂದು ಅರ್ಥವೆನ್ನುತ್ತದೆ. ಈ ಮಾತನ್ನು ಕೇಳಿ ಬೇಸರಗೊಂಡ ಅಲ್ಲಿನ ಮುಖ್ಯ ದೇವತೆ ಆ ಬೆಳಕಿನ ಕಿಡಿಯನ್ನು ಭುವಿಯಲ್ಲಿ ಹೋಗಿ ನಿನ್ನ ಬದುಕಿನ ಅರ್ಥವನ್ನು ಹುಡುಕಿಕೊಂಡು ಬಾ ಎಂದು ಭುವಿಗೆ ಕಳುಹಿಸುತ್ತಾರೆ. ಎಲ್ಲಿ ತನಕ ನಿನ್ನ ಬೆಳಕಿಗೆ ಸರಿಯಾದ ಜಾಗ ಸಿಗುವ ತನಕ,ದೇವ ಲೋಕದಿ ನೀನು ಬರುವಂತಿಲ್ಲ ಎಂದು ಬಹಿಷ್ಕರಿಸುತಾರೆ ಎಂದು ಹೇಳಿದಾಗ ಪುಟ್ಟ ಸಖಿ ಎರಡು ಕಣ್ಣನ್ನು ಬಿಚ್ಚಿಕೊಂಡು ನನ್ನನ್ನೇ ದಿಟ್ಟಿಸುತ್ತಿದ್ದಳು.
ಭೂಲೋಕಕ್ಕೆ ಪ್ರಾಯಶ್ಚಿತ ಕ್ಕೆ ಬಂದ ಬೆಳಕಿನ ಕಿಡಿ ಸ್ವರ್ಗದಿಂದ ಬೀಳುವಾಗ ರಭಸವಾಗಿ ಮಣ್ಣಿನ ನೆಲವನ್ನು ಸೇರಿತು. ಮೇಲಿನಿಂದ ಬಿದ್ದ ಕಾರಣ ಅದು ಬಿದ್ದ ಹೊಡೆತಕ್ಕೆ ಬೆಳಕಿನ ಕಿಡಿಯ ಸುತ್ತ ಮಣ್ಣು ಮೆತಿದ್ದ ಕಾರಣ.. ಬೆಳಿಕಿನ ಕಿಡಿ ಮಣ್ಣಲ್ಲಿ ಸೇರಿ ಹೋಗಿತು. ತನ್ನ ಈ ಕಾಲದಲ್ಲಿ ಆ ಮಣ್ಣು ಮಳೆಯನ್ನು ಕಂಡಿತು. ಬಿಸಿಲಿನ ಬೇಗೆಯನ್ನು ಕಂಡಿತ. ರೈತನ ಬೆವರಲ್ಲಿ ತೆವವಾಯಿತು, ಹಸುರಿಗೆ ಕಂಗೊಳಿಸಿತು. ತನ್ನ ವರ್ಷದ ಈ ಕಾಲದಲ್ಲಿ ಪ್ರಕೃತಿಯ ಮಡಲಿನಲ್ಲಿ ಮಾಗಿದ ರಸ ಮಾವಿನಂತೆ ಪರಿಪಕ್ವವಾಯಿತು. ಮಣ್ಣ ಒಳಗೆ ತನ್ನ ಬೆಳಿಕಿನ ಅಂಶವನ್ನು ಹಿಡಿದಿದ್ದ ಆ ಬೆಳಕಿನ ಕಿಡಿ ಜೀವನವು ಎನ್ನೇನುವುದು ಸಂಪೂರ್ಣವಾಗಿ ಆ ಬೆಳಿಕಿನ ಕಿಡಿಗೆ ತಿಳಿದು ಹೋಗಿತ್ತು. ಅದಕ್ಕೆ ರೈತನ ಬೆವರಿನ ಪರಿಶ್ರಮ, ತನ್ನ ಮಣ್ಣಿನಿಂದ ಚಿಗುರಿದ ಗಿಡಮೂಲಿಕೆಯ ಗುಣ ಇದೆ ರೀತಿ ನೋವು ನಲಿವು ಎಲ್ಲವನ್ನು ಅರ್ಥ ಮಾಡಿಕೊಳ್ಳುತ ಹೋಗಿತು.
ನಂತರ ಈ ಮಣ್ಣನ್ನು ಕುಂಬಾರನು ಮಡಿಕೆ ಮಾಡಲೆಂದು ತೆಗೆದು ಕೊಂಡು ಹೋದನು, ಮಣ್ಣಿನ ರೂಪವನ್ನು ಬೆಳಕಿನ ಕಿಡಿ ಪಡೆದಿದ್ದರಿಂದ,ಮಣ್ಣು ಜೇಡಿ ಮಣ್ಣಿನಲ್ಲೂ ಸೇರಿತು, ಕಪ್ಪುಮಣ್ಣಲ್ಲೂ ಸಹ ಕೊಂಡೋಯ್ದ ಕುಂಬಾರನು ಆ ಮಣ್ಣಿನಲ್ಲಿ ಈ ಭಾರಿ ಹಣತೆ ಮಾಡಿದ ಅದನ್ನು ಬಿಸಿಯಲ್ಲಿ ಸುಟ್ಟು ಮನೆಯ ಮುಂದೆ ಹಾಕಿದ,ದೀಪವನ್ನು ಬೆಳಗಿದ, ಅದನ್ನು ಕಂಡ ಜನರು ಈ ರೀತಿಯ ದೀಪವೊಂದು ಬೇಕೆಂದು ಬೇಡಿಕೆ ಇಟ್ಟರು. ಆ ಬೆಳಿಕಿನ ಕಿಡಿಯ ಮಣ್ಣಿನ ರೂಪದಲ್ಲಿ ಮಾಡಿದ ಹಣತೆಯಲ್ಲಿ ಬಂದ ಬೆಳಕು ಕೇವಲ ಉರಿಯಲಿಲ್ಲ ಬದಲಾಗಿ ಪ್ರಜ್ವಲಿಸಿತು. ಅದರ ಪ್ರಕಾಶ ದೇವಲೋಕವನ್ನು ಜಗಮಗಿಸುವಂತೆ ಮಾಡಿತು. ಇದರ ಮೂಲ ತಿಳಿದ ದೇವತೆಗಳು ಆ ಮೂಲ ಹಣತೆಯನ್ನು ಕರೆದೋಯ್ದು ನೀನೇ ಶ್ರೇಷ್ಠ ಎಂದರು. ಜೀವನ, ಬದುಕಿನ ನಿಜವಾದ ಅರ್ಥವನ್ನು ತಿಳಿದ ಕಾರಣ ಆ ಬೆಳಿಕಿನ ದೈವತತ್ವ ಪ್ರಾಪ್ತಿಯಾಗಿತು. ಇದರ ಫಲವಾಗಿ ಜನರ ನಕರತ್ಮಕ ಚಿಂತನೆಗಳನ್ನು ದೂರ ಮಾಡಿ ಸಕರತ್ಮಕ ಚಿಂತನೆಗಳನ್ನು ಹುಟ್ಟುಹಾಕುವ ಶಕ್ತಿ ಲಭಿಸಿತು. ಕತ್ತಲನ್ನು ಓಡಿಸಿ ಬೆಳಕನ್ನು ತರುತಿತ್ತು. ದೇವತೆಗಳ ಸಮೂಹ ಈ ಬೆಳಕಿನ ಕಿದಿಯನ್ನು ಶ್ರೇಷ್ಠ ವೆಂದರು, ಗೌರವಿಸಿದರು.
ಆದರೆ ಮಂಕಾಗಿದ್ದ ಹಣತೆಯ ಕಂಡು ಕಾರಣ ಕೇಳಿದಾಗ ದೇವತೆಗಳು ಸಹ ಮುಖವಿಸ್ಮಿತಾರಾದರು. ಹಣತೆಯು ತನ್ನನು ಪುನಃ ಭುವಿಗೆ ಕಲಿಸಬೇಕೆಂದು ವಿಜ್ಞಾಪಿಸಿತು. ಹಿರಿಯ ಬೆಳಕಿನ ಕಿಡಿ ಕಾರಣ ಕೇಳಿತು. ಉತ್ತರವಾಗಿ ಹಣತೆ ನುಡಿಯಿತು ಬದುಕಿನ ನಿಜವಾದ ಅರ್ಥವಿರುದು ಶ್ರೀಮಂತಿಕೆಯಲ್ಲಲ್ಲಾ ಅಥವಾ ಐಷಾರಾಮಿ ಜೀವನದಲ್ಲಿ ಅಲ್ಲ, ಬದಲಾಗಿ ಅಗತ್ಯ ಇದ್ದವರಿಗೆ ಸಹಾಯ ಮಾಡುದರಲ್ಲಿ, ತಮ್ಮ ಅವಶ್ಯಕತೆ ಇದ್ದಲಿ ತಮ್ಮನು ತಾವು ಸಮರ್ಪಸಿಕೊಳ್ಳುವುದ್ರಲ್ಲಿ, ಸಮರ್ಪಣೆ ಜೀವನದ ಉದ್ದೇಶ ಆಗಬೇಕು ಇದು ನನಗೆ ಭೂಲೋಕದ ಈ ಅವಧಿಯಲ್ಲಿ ಕಲಿತ ಪಾಠ ಅದಕ್ಕಾಗಿ ನಾನು ಮರಳಿ ಭುವಿಗೆ ಹೋಗಿ ಅಲ್ಲಿನ ಜನರ ಬಾಳಲ್ಲಿ ಬೆಳಕ ತರುವ ಕೆಲಸ ಮಾಡಬೇಕು ಎನ್ನುದು ನನ್ನ ಆಸೆ ಎಂದಿತು. ದೇವಲೋಕವಾಸಿಗಳಿಗೆ ಹೊಸ ಸೂರ್ಯೋದಯದಂತೆ ಕಂಡಿತು. ಒಪ್ಪಿಗೆ ನೀಡಿದರು ಹೊರಡುವ ಸಮಯದಿಂದ ಆ ಬೆಳಕಿನ ಕಿಡಿಯಲ್ಲಿ ದೇವಲೋಕದ ಎಲ್ಲ ಬೆಳಕಿನ ಕಿಡಿಗಳು ಲೀನವಾದವು. ಮುಂದೆ ಕತ್ತಲನ್ನು ದೂರ ಮಾಡಿ ಬೆಳಕ ತಂದವು. ಜನರ ಖುಷಿ, ಸಂಭ್ರಮದಿಂದ ಹಣತೆಗಳನ್ನು ಬರಮಾಡಿಕೊಂಡರು, ಸಂಭ್ರಮಿಸಿದರು ಆ ಹಣೆತೆಯ ಶಕ್ತಿಯಿಂದ ಖುಷಿಖುಷಿಯಾಗಿ ಜೀವನ ನಡೆಸಿದರು.
ಹೀಗೆ ಕಥೆ ಮುಗಿಸಿ ಸಖಿಯನ್ನು ಕಂಡಾಗ, ಸಖಿ ಚಪ್ಪಾಳೆ ತಟ್ಟುತ ನಗುತಾ ಖುಷಿ ಪಟ್ಟ ಕಣ್ಣುಗಲ್ಲಿ, ಅವಳ ಮುಗ್ದತೆಯಲ್ಲಿ ಆ ದಿನ ನಾನು ಕಂಡಿದ್ದು ಅದೇ ಹಣತೆಯ ರೂಪ, ಪರಿಶುದ್ಧವಾದ ನಗುವಿನ ಶಕ್ತಿಯದು ಎನಿಸಿತು ನನಗೆ, ಪುಟಾಣಿ ಸಖಿ ನಗುತ್ತಾ ಮನೆಯ ಮಳಿಗೆ ಮೇಲಿದ್ದ ಹಣತೆಗಳನ್ನು ತೆಗೆದು ದೀಪಾವಳಿ ಸಂಭ್ರಮಿಸಲು ಸಿದ್ದವಾಗಿ ಕುಳಿತಳು.
ಅಭಿನಯ. ಎ. ಶೆಟ್ಟಿ. ದ್ವಿತೀಯ ಬಿಕಾಂ ಡಾI ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ