ಕುಂದಾಪುರ (ಜೂನ್ 26): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜೂ.26 ರಂದು ಅಂತಿಮ ವರ್ಷದ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Cognitive Solutions ಕಂಪೆನಿ ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನಡೆಯಿತು. Cognitive Solutions ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಸಾಗರ್ ಆಳ್ವ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ […]
Author: KundaVahini Editor
ವಿ. ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ : ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ್ಯ ಕುರಿತು ಕಾರ್ಯಗಾರ
ಕುಂದಾಪುರ (ಜೂ,29): ಇಂದು ಬದುಕು ಗೊತ್ತುಗುರಿ ಇಲ್ಲದೆ ಓಡುತ್ತಿದೆ; ಹಾಗಾಗಬಾರದು. ಬದುಕಲ್ಲಿ ಗುರಿ ಇರಬೇಕು. ಕಷ್ಟಗಳನ್ನು ಎದುರಿಸಿ ಎದೆಗುಂದದೆ ಛಲದಿಂದ ಮುಂದುವರಿದಾಗ ಗೆಲುವು ನಮ್ಮದಾಗುತ್ತದೆ. ಜೊತೆಯಲ್ಲಿ ಇಂತಹ ಗೆಲುವು ಸಾಧಿಸಬೇಕಾದರೆ ನಮ್ಮಲ್ಲಿ ಗುರಿ ಇಟ್ಟುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಮೌಸ್ ಮತ್ತು ಕೀಲಿಮಣೆ ಇಲ್ಲದ ಕಂಪ್ಯೂಟರ್ನoತೆ ಆಗುತ್ತದೆ. ಹಾಗೆ ನಮಗೆ ನಾವೇ ಪ್ರೇರಣೆಯಾಗಬೇಕು ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ ಶಿರಿಯಾರ ಗಣೇಶ್ ನಾಯಕ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶ್ರೀ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ: ವಿಶ್ವ ಯೋಗ ದಿನಾಚರಣೆ
ಬ್ರಹ್ಮಾವರ(ಜೂ,29): ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಯ್ಕಾಡಿಯಲ್ಲಿ ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಇಶಾ ಫೌಂಡೇಶನ್ ಸಂಸ್ಥೆಯ ಸಹಕಾರದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ವಿಶ್ವ ಯೋಗ ದಿನಾಚರಣೆಯ ಮಹತ್ವ,ಯೋಗದಿಂದಾಗುವ ಪ್ರಯೋಜನ, ಯೋಗದ ಅರಿವು ಮತ್ತು ಪ್ರಸ್ತುತ ಸಮಯದಲ್ಲಿ ಯೋಗದ ಅವಶ್ಯಕತೆ ಮತ್ತು ಪ್ರಾತ್ಯಕ್ಷಿಕೆ ಯನ್ನು ಶಾಲಾ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ 340 ಜನ ಕಾರ್ಯಗಾರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ […]
ಕುಂದಾಪುರ: ಜೂ.28 ರಂದು ಯುವ ಬಂಟರ ಸಂಘದ ವತಿಯಿಂದ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ
ಕುಂದಾಪುರ. ಜೂನ್ 26. ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಆಚರಣೆಯ ಅಂಗವಾಗಿ ಹಸಿರು ಹೊನ್ನು ಎಂಬ ಯೋಜನೆಯನ್ನು ರೂಪಿಸಲಾಗಿದ್ದು ಮುಖ್ಯವಾಗಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಯುವ ಜನಾಂಗ ಹೆಚ್ಚು ಸಕ್ರಿಯವಾಗಿ ತೊಡಗಿ ಕೊಳ್ಳುವಂತಾಗಬೇಕು ಎಂಬ ಗುರಿಯನ್ನು ಇರಿಸಿಕೊಂಡು ಜೂನ್ 28 ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ ಈ […]
ಡಾIಬಿ.ಬಿ ಹೆಗ್ಡೆ ಕಾಲೇಜ್ ನಲ್ಲಿ ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ವತಿಯಿಂದ ಫಿಟ್ನೆಸ್ ಚಾಲೆಂಜ್ ಕಾರ್ಯಕ್ರಮ
ಕುಂದಾಪುರ(ಜೂ,26): ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ಕುಂದಾಪುರ ಇವರ ವತಿಯಿಂದ ಕುಂದಾಪುರದ ಪ್ರತಿಷ್ಟಿತ ಡಾ.ಬಿ. ಬಿ ಹೆಗ್ಡೆ ಕಾಲೇಜ್ ನಲ್ಲಿ ಫಿಟ್ನೆಸ್ ಟಾಸ್ಕ್ ಚಾಲೆಂಜ್ ಕಾರ್ಯಕ್ರಮ ನಡೆಯಿತು.ವೆಯಿಟ್ ಝೋನ್ ಇದರ ಮಾಲಕರಾದ ರಾಘವೇಂದ್ರ ವಿಠಲವಾಡಿಯವರು ವಿದ್ಯಾರ್ಥಿಗಳಿಗೆ ಫಿಟ್ನೆಸ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಮಾಹಿತಿಯ ಜೊತೆಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು . ವೆಯಿಟ್ ಝೋನ್ ನ ಗೌರವ ಅಧ್ಯಕ್ಷ ರಾದ ಡಾIಉಮೇಶ್ ಪುತ್ರನ್, ಕಾಲೇಜಿನ ಉಪ […]
ಡಾ| ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ: ಕ್ಯಾಂಪಸ್ ನೇಮಕಾತಿ ಡ್ರೈವ್
ಕುಂದಾಪುರ (ಜೂನ್ 24): ಕಾಲೇಜಿನ ವ್ರತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜೂನ್ 24 ರಂದು ಅಂತಿಮ ಪದವಿ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿ ಬುಕ್ ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನೆರವೇರಿತು. ವಿ ಬುಕ್ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಆಚಾರ್ಯ ಶ್ರೀ ನಾಗರಾಜ್, ಶ್ರೀ ಪವನ್, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವ್ರತ್ತಿ ಮಾರ್ಗದರ್ಶನ ಘಟಕದ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, […]
ಶಿರ್ವ: ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ
ಶಿರ್ವ(ಜೂ,26): ಇಂದಿನ ವಿವಿಧ ಕ್ಷೇತ್ರಗಳಲ್ಲಿ ದತ್ತಾಂಶ ಸಮಸ್ಯೆಗಳನ್ನು,ಪರಿಹರಿಸಲು ಡೇಟಾ ವಿಜ್ಞಾನವನ್ನು ಬಳಸುವ ಮೂಲಕ ದತ್ತಾಂಶ ಗಣಿಗಾರಿಕೆ, ಯಂತ್ರ ಕಲಿಕೆ ಮತ್ತು ಅಂಕಿಅಂಶಗಳ ವಿಶ್ಲೇಷಣೆಯ ಸಂಯೋಜನೆಯಾಗಿದೆ. ಯುವಕರು ಇಂತಹ ಡೇಟಾ ವಿಜ್ಞಾನದ ಕೌಶಲ್ಯಗಳನ್ನು ಕಲಿಯುವ ಮೂಲಕ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳಿಗೆ ಉತ್ತಮ ನಿರ್ಧಾರಗಳನ್ನು ನೀಡುವ ಮೂಲಕ ಉತ್ತಮ ಉಪಾದಿಗಳನ್ನು ಪಡೆಯಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ […]
ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ಲೇಖಕ ಬಿ ರಾಘವೇಂದ್ರ ರಾವ್ ರವರ 56ನೇ ಕೃತಿ “ಹಾವಿನ ಮನೆ” ಬಿಡುಗಡೆ
ಕಾರ್ಕಳ (ಜೂ.26): ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) […]
ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು, ಕೊಲ್ಲೂರು: ವಿಶ್ವ ಯೋಗ ದಿನ
ಕೊಲ್ಲೂರು(ಜೂ,22): ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ, ಶ್ರೀ ಮೂಕಾಂಬಿಕಾ ದೇವಳದ ಅನುದಾನಿತ ಪ್ರೌಢಶಾಲೆ ಕೊಲ್ಲೂರು, ವರಸಿದ್ದಿವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಹಾಗೂ ಈಶಾ ಪೌಂಡೇಶನ್ ಕೊಯಮುತ್ತೂರು ಇವರ ಜಂಟಿ ಆಶ್ರಯದಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. .ಈ ಕಾರ್ಯಕ್ರಮವನ್ನು ಪ್ರಸನ್ನಾ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಧರ್ಮದರ್ಶಿಗಳು ಆದ ಶ್ರೀಯುತ ರಾಘವನ್ ದೀಪ […]
ಜೆ ಸಿ ಐ ಸೆವಾಮೆ ಬ್ರಹ್ಮಾವರ: ವಿವಿಧ ಸಂಘ -ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ
ಬ್ರಹ್ಮಾವರ(ಜೂ,23): ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆಇಲ್ಲಿ ಜೆ ಸಿ ಐ ಸೆವಾಮೆ ಬ್ರಹ್ಮಾವರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಿದ್ಕಲ್ ಕಟ್ಟೆ ,ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಹೈಕಾಡಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಉದಯ ಕುಮಾರ ಶೆಟ್ಟಿ ಉದ್ಘಾಟಿಸಿದರು. ಐಟಿಐ ನ ಪ್ರಾಚಾರ್ಯರಾದ ಗಂಗಾಧರಪ್ಪನವರು ಮುಖ್ಯ […]










