ಬೆಂಗಳೂರು( ಆ .31): ಇಲ್ಲಿನ ಕೋರಮಂಗಲದಲ್ಲಿ ನಡೆದ 4 ನೇ ಯ ದಕ್ಷಿಣ ಭಾರತ ಕರಾಟೆ ಚಾಂಪಿನ್ಶಿಪ್ 30 ಆಗಸ್ಟ್ 2025 ರಲ್ಲಿ ಕುಂದಾಪುರದ ಅರ್ನೋನ್ ಡಿ ಆಲ್ಮೆಡಾ 11 ರ ವಯೋಮಿತಿಯ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 11 ವಯೋಮಿತಿಯ -40 ಕೆ ಜಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಈತ ಕುಂದಾಪುರದ ವಿಲ್ಸನ್ ಹಾಗೂ ಜ್ಯೋತಿ ಡಿ ಆಲ್ಮೆಡ ಇವರ ಪುತ್ರನಾಗಿದ್ದು, ಎಚ್ ಎಮ್ […]
Author: KundaVahini Editor
ಎಚ್.ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆ: ಕರಾಟೆಯಲ್ಲಿ ಪ್ರಥಮ
ಕುಂದಾಪುರ (ಸೆ. 2 ): ಸೌತ್ ಇಂಡಿಯಾ ಕರಾಟೆ ಫೆಡರೇಶನ್ ಬೆಂಗಳೂರು ಇವರು ಆಯೋಜಿಸಿದ 4th ಸೌತ್ ಇಂಡಿಯಾ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್. ಎಮ್ ಮತ್ತು ವಿ. ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 5ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ 10ರ ವಯೋಮಾನದ ಬಾಲಕರ ವಿಭಾಗದ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ […]
ಜನತಾ ಪಿ.ಯು ಕಾಲೇಜು ಹೆಮ್ಮಾಡಿ: ದಾಖಲೆಯ 14 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಸೆ.2): ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿಯು ಕಾಲೇಜಿನ ಕ್ರೀಡಾoಗಣದಲ್ಲಿ ನಡೆಯಿತು. ಕುಸ್ತಿ ಪಂದ್ಯಾಟವು ಬಾಲಕರ ವಿಭಾಗದ ಫ್ರಿ ಸ್ಟೆಲ್ ಹಾಗೂ ಗ್ರಿಕೋ ರೋಮನ್ ಮತ್ತು ಬಾಲಕಿಯರ ವಿಭಾಗ ದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು 160ವಿದ್ಯಾರ್ಥಿಗಳು […]
5 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಜನತಾ ಪಿಯು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ
ಹೆಮ್ಮಾಡಿ( ಸೆ .01): ಶಿಕ್ಷಣ ಎಂಬುದು ಬೆಳಕು.ಆ ಬೆಳಕು ಹಂಚಿದಷ್ಟು ಅದು ಬೆಳೆಗುತ್ತದೆ ಆ ಕೆಲಸವನ್ನು ಈ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ.ಗೆದ್ದರೆ ಖುಷಿ ಪಡಿ ಸೋತರೆ ಅನುಭವದ ಕಿಡಿ ಪ್ರಜ್ವಲಿಸಲಿ ಎಂದು ರಾಷ್ಟ್ರೀಯ ಈಜುಪಟು ಗಿನ್ನಿಸ್ ದಾಖಲೆ ಖ್ಯಾತಿಯ ನಾಗರಾಜ್ ಖಾರ್ವಿ ಕಂಚಗೋಡು ಹೇಳಿದರು. ಅವರು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಡುಪಿ ಇವರ ಆಸರೆಯಲ್ಲಿ ನಡೆದ ಜಿಲ್ಲಾ […]
ಟೇಬಲ್ ಟೆನಿಸ್ ನಲ್ಲಿ ಎಚ್.ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ(ಆ. 25) : ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ವೇದಿಕಾ, ಶ್ರೀಯಾ ಮತ್ತು ವಿಷ್ಮಾ ಕುಂದಾಪುರ ವಲಯ ಮಟ್ಟದ 14ರ ವಯೋಮಾನದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಹಾಗೆಯೇ ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಆಶಿಶ್, ಪ್ರಣವ್, ನಿಖಿಲ್, ತನಿಷ್ ಮತ್ತು ಶಯಾನ್ ದ್ವಿತೀಯ ಸ್ಥಾನವನ್ನು ಪಡೆಯುವುದರ ಜೊತೆಗೆ […]
ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಬಿ.ಕಾಂ. ಕೋರ್ಸ್ ಜೊತೆ ಎಸ್.ಎಸ್.ಸಿ ಗೆ ಚಾಲನೆ
ಕುಂದಾಪುರ (ಆಗಸ್ಟ್ 16): ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ನಿರಂತರ ತರಬೇತಿ ನೀಡುವ ಹಾಗೂ ಪದವಿಪೂರ್ವ ಶಿಕ್ಷಣ ಅರ್ಹತೆಯ ಮೇರೆಗೆ ರಾಜ್ಯ ಸರ್ಕಾರ ಆಯೋಜಿಸುವ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನ ಆವರಣದಲ್ಲಿಯೇ ತರಬೇತಿ ನೀಡುವ ದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷ 2025-26 ರಿಂದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹೊಸ ಕೋರ್ಸ್ B.Com (SSC)ಯನ್ನು ಆರಂಭಿಸಿದ್ದು, ಆಗಸ್ಟ್ 16 ರಂದು ವಿಧ್ಯುಕ್ತ ಚಾಲನೆ […]
ಸಾರ್ವಕಾಲಿ ಕಮೌಲ್ಯಸಾರಿದ ದಾರ್ಶನಿಕ ಕನಕದಾಸರು–ಡಾ| ಸುಧಾಕರ್ ದೇವಾಡಿಗ ಬಿ.
ಕುಂದಾಪುರ (ಆ. 25): ಕನಕದಾಸರ ಭಕ್ತಿಯ ಸ್ವರೂಪ, ಸಮಾನತೆಯ ಪ್ರಜ್ಞೆ, ಅಹಿಂಸಾನೆಲೆ, ಧಾರ್ಮಿಕ ಆಚರಣೆಗಳ ನಿರಾಕರಣೆ, ಅವರ ಸಮಾಜ ಸುಧಾರಣೆಯ ಅಂಶಗಳು ಇಂದಿಗೂ ಪ್ರಸ್ತುತ. ಕನಕದಾಸರು ತಮ್ಮ ಕೃತಿಗಳ ಮೂಲಕ ಕುಲಕ್ಕಿಂತ ಗುಣಕ್ಕೆ ಪ್ರಾಮುಖ್ಯತೆ ನೀಡಿ, ಜಾತಿಬೇಧ, ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸಿ, ಸಮಾನತೆ, ಮಾನವೀಯತೆ, ನೈತಿಕತೆ ಮುಂತಾದ ಸಾರ್ವಕಾಲಿಕ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಸುಧಾಕರ್ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದಲ್ಲಿ ‘ಸ್ಫೂರ್ತಿ ಮಾತು-11’ ಸರಣಿ ಕಾರ್ಯಕ್ರಮ
ಕಾರ್ಕಳ ( ಆ.28): ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಕೆಯಲ್ಲಿ ಆಸಕ್ತಿ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಾರಂಭವಾದ ಸಂಸ್ಥೆಯ ನೂತನ ಪರಿಕಲ್ಪನೆಯಾದ ಸ್ಫೂರ್ತಿ ಮಾತು-11 ಸರಣಿ ಕಾರ್ಯಕ್ರಮವು ‘ನಿಮಗೆ ನೀವೇ ಕನ್ನಡಿಯಾಗಿ’ ಎಂಬ ಶೀರ್ಷಿಕೆಯಡಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯದ ಅಸಿಸ್ಟೆಂಟ್ ಪ್ರೊಫೆಸರಾದ ಡಾ. ಅನುರಾಧ ಕುರುಂಜಿ ನಡೆಸಿಕೊಟ್ಟರು. ” ತಂದೆ ತಾಯಿ ಮತ್ತುಗುರುಗಳಿಗೆ […]
ಫುಟ್ಬಾಲ್ ಪಂದ್ಯಾಟದಲ್ಲಿ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಆ.26): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.)ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಸಫಾನ್, ಪ್ರಣೀತ್.ಜಿ, ಆರ್ಯನ್.ಎ ನಾಯ್ಕ್, ಮೊಹಮ್ಮದ್ ನಿಬ್ರಾಜ್, ಮೊಹಮ್ಮದ್ ಅಯ್ಯನ್, ಮೊಹಮ್ಮದ್ ಫಥ, , ಮೊಹಮ್ಮದ್ ಫೈಝಲ್, ಪ್ರಜ್ವಲ್.ಸಿ, ಮೊಹಮ್ಮದ್ ಇಮದ್, ಸಾತ್ವಿಕ್.ಎಸ್.ಎಂ, ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಇಂದದ್, ಕುಂದಾಪುರ ವಲಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಮೊಹಮ್ಮದ್ ಸಫಾನ್, ಪ್ರಣೀತ್.ಜಿ, ಆರ್ಯನ್.ಎ […]
ಬಿ.ಬಿ. ಹೆಗ್ಡೆ ಕಾಲೇಜು: ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟನೆ
ಕುಂದಾಪುರ (ಆ. 26): ಶಿಕ್ಷಣ ಸಂಸ್ಥೆಯೊAದಕ್ಕೆ ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಆಡಳಿತ ಮಂಡಳಿಗಳು ಆಧಾರ ಸ್ಥಂಭವಾಗಿದ್ದು ಈ ಮೂರರ ನಡುವೆ ಸೇತುವೆಯಾಗಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಕಾರ್ಯನಿರ್ವಹಿಸಬೇಕು. ಈ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದಷ್ಟು ಶೈಕ್ಷಣಿಕ ಸಂಸ್ಥೆ ಸೃಜನಶೀಲವಾಗಿರುತ್ತದೆ ಎಂದು ಬೆಹರಿನ್ ಕಿಂಗ್ಡಮ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಡಾ. ಇಕ್ಬಾಲ್ ಹವಾಲ್ದಾರ್ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ […]










