ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ನೇತೃತ್ವದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂ ,18 ರಂದು ಎಸ್. ಎಸ್. ಎಲ್. ಸಿ ಮಕ್ಕಳ ಶಿಕ್ಷಕ ಪೋಷಕ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಶುಭಾ ಕೆ. ಎನ್. ಪೋಷಕರಿಗೆ ವಾರ್ಷಿಕ ಕ್ರಿಯಾ […]
Author: KundaVahini Editor
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ಯೋಗ ದಿನಾಚರಣೆ
ಗಂಗೊಳ್ಳಿ (ಜೂ,22): ಯೋಗವನ್ನು ನಾವು ಕಲಿಯುವುದರ ಜೊತೆಜೊತೆಗೆ ಮುಂದಿನ ಪೀಳಿಗೆಯವರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ […]
ಬಸ್ರೂರು: ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ
ಬಸ್ರೂರು(ಜೂ,20): ಇಲ್ಲಿನ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ “ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಬಹಳ ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ವಿಜಯನಗರ,ಆಳುಪ,ಕೆಳದಿ ಸಂಸ್ಥಾನಗಳು ಆಳ್ವಿಕೆ ನಡೆಸಿದ ಸ್ಥಳ ಕೂಡಾ ಆಗಿದೆ.ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವಷ೯ಗಳ ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿರುವುದು […]
ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ: ಪಿ.ಯು. ಪರೀಕ್ಷೆಯಲ್ಲಿ ಉತ್ಕ್ರಷ್ಟ ಸಾಧನೆ
ಕುoದಾಪುರ(ಜೂ, 23):ಇಲ್ಲಿನ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 94.58% ರ ಫಲಿತಾಂಶವನ್ನು ಸಾಧಿಸಿದೆ. 388 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ,ಅದರಲ್ಲಿ 179 ಮಂದಿ ವಿಶೇಷ ಶ್ರೇಣಿ ಹಾಗೂ 155ಮಂದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಕಿಣಿ 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ಸ್ಥಾನ ಗಳಿಸಿದರೆ, ಪ್ರಗತಿ ಪೂಜಾರಿ 590 ಅಂಕ ಪಡೆದು 9ನೇ ಸ್ಥಾನಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಗುರುರಾಜ್ […]
ಎಕ್ಸಲೆಂಟ್ ಹೈಸ್ಕೂಲು ಮತ್ತು ಪಿಯು ಕಾಲೇಜು: ಪಾಲಕರ -ಶಿಕ್ಷಕರ ಸಭೆ
ಕುಂದಾಪುರ (ಜೂ ,22: ಎಕ್ಸಲೆಂಟ್ ಹೈಸ್ಕೂಲು ಮತ್ತು ಪಿಯು ಕಾಲೇಜು ಸುಣ್ಣಾರಿಯಲ್ಲಿ2022-23 ನೇ ಸಾಲಿನ ಪಾಲಕರ ಹಾಗೂ ಶಿಕ್ಷಕರ ಸಭೆಯನ್ನು ಇತ್ತೀಚೆಗೆ ಆಯೋಜಿಸಲಾಗಿತು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿೆ ಅವರು ಮಾತನಾಡಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನ ಗುರಿಯಾಗಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಒಬ್ಬ ಯಶಸ್ವಿ ವಿದ್ಯಾರ್ಥಿಯ ಸಾಧನೆಗೆ ಪೋಷಕರ ಸಹಕಾರ ಮತ್ತು […]
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ , ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. 130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1200 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು. ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಬಿ.ಸಿ.ಎ. ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಕುಂದಾಪುರ (ಜೂ,19): ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಸಿ.ಎ. ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಜೂ ,12ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಯಿತು. ಬಿ.ಸಿ.ಎ. ವಿಭಾಗದ ಪ್ರಥಮ ರ್ಯಾಂಕ ಗಳಿಸಿದ ಸಾಧಕಿ ದೇವಾಡಿಗ ಕಾವ್ಯ ಹಾಗೂ ನಾಲ್ಕನೇಯ ರ್ಯಾಂಕ್ ಗಳಿಸಿದ ಸುಮಧುರ ಶೆಟ್ಟಿ ಇವರಿಗೆ ಮುಖ್ಯ ಅತಿಥಿಗಳಾದ ಶ್ರೀ ಮಹಾಬಲೇಶ್ವರ ಎಮ್.ಎಸ್., ಎಮ್.ಡಿ ಮತ್ತು ಸಿ.ಇ.ಒ. ಕರ್ನಾಟಕ ಬ್ಯಾಂಕ್ ಮಂಗಳೂರು ಸನ್ಮಾನಿಸಿದರು . ಹಾಗೆಯೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾಧಿಕಾರಿ […]
ನ್ಯಾಷನಲ್ ಕರಾಟೆ ಗ್ರಾಂಡ್ ಚಾಂಪಿಯನ್ ಶಿಪ್:ನಿತಾ ಬಿಲ್ಲವ ಪ್ರಥಮ ಸ್ಥಾನ
ಕುಂದಾಪುರ ( ಜೂ ,19): ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸೂಪರ್ ಸ್ಪೋರ್ಟ್ಸ್ ಶೋಟೋಕನ್ ಕರಾಟೆ ಅಕಾಡೆಮಿ ಆಯೋಜಿಸಿದ್ದ ಫಸ್ಟ್ ನ್ಯಾಷನಲ್ ಕರಾಟೆ ಗ್ರಾಂಡ್ ಚಾಂಪಿಯನ್ ಶಿಪ್ 2022 ರ ಕಟಾ ಮತ್ತು ಕುಮಿಟೆ ಎರಡು ವಿಭಾಗಗಳಲ್ಲಿ ನಿತಾ ಬಿಲ್ಲವ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈಕೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಉಪ್ರಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪ ಬಿಲ್ಲವ ಮತ್ತು ಕೇಶವತಿ ದಂಪತಿ ಪುತ್ರಿ […]
ದ್ವಿತೀಯ ಪಿಯುಸಿ ಫಲಿತಾಂಶ: ಎಕ್ಸಲೆಂಟ್ ಸಾಧನೆ
ಕುಂದಾಪುರ(ಜೂ,19): ಇಲ್ಲಿನ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದು ,ಸಂಸ್ಥೆಯ ವಿದ್ಯಾರ್ಥಿಗಳಾದ, ಜ್ಞಾನ್ದೇವ್ ಉಪಾಧ್ಯಾಯ-583, ಸವಿನಾ-581,ದೀಕ್ಷಾ ಎ ಶೆಟ್ಟಿ-580, ಶೆಟ್ಟಿ ಅನನ್ಯಾ ದೇವರಾಜ್-575, ದೀಕ್ಷಾ-565, ಪ್ರಜ್ವಲ್ ಪೀಟರ್ ಬೆರೆಟೋ-573, ಕೀರ್ತಿ ವಿದ್ಯಾಧರ್ ಪೈ-572, ರಜತಾ-572, ಸುನಿತಾ ಸಿಂಗ್-572, ಕೀರ್ತೆಶ್ವಿನಿ-571, ಪ್ರತೀಕ್ ಕೋತ್-570, ತ್ರಶ್ಯಾ ಅಡಪ-570, ಸೌಮ್ಯ-569, ಸುಮನಾ-567, ಕೀರ್ತಿ ಕೆ ಶೆಟ್ಟಿ-566, ಅಭಿಷೇಕ್ಎಸ್-564, ಸುಮಿತ್ ಪಾಟೀಲ್-564, ಪನ್ನಗಾ […]
ವಿ. ಕೆ. ಆರ್. ಪ್ರೌಢ ಶಾಲೆ ಕುಂದಾಪುರ :ಸಾಧಕರಿಗೆ ಸನ್ಮಾನ
ಕುಂದಾಪುರ (ಜೂ ,19): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯಲ್ಲಿ ಜೂ,18 ನಡೆಯಿತು ಎಸ್. ಎಸ್. ಎಲ್. ಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 2021-22 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 620 ಕ್ಕೂ ಅಧಿಕ ಅಂಕ ಪಡೆದ ಅನ್ವಿತಾ ಎಸ್.(624), ಅನಿರುದ್ಧ ಎಸ್. ಹತ್ವಾರ್(624), ಅಭಿಷೇಕ್ ಅಡಿಗ (623 […]










