ಕುಂದಾಪುರ (ಏ.05): ಕುಂದಾಪುರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರತೀತ್ ಎನ್.ಶೆಟ್ಟಿ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಪುರುಷರ ವಿಭಾಗದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿದ್ದು , ಅವರನ್ನು ಬೈಂದೂರಿನ ಶಾಸಕರು ಹಾಗೂ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ. ಬಿ. ಎಮ್. ಸುಕುಮಾರ ಶೆಟ್ಟಿಯವರು ಸ್ಪರ್ಧೆಯಲ್ಲಿ ವಿಜಯಶಾಲಿ ಬರಲು ಶುಭಹಾರೈಸಿದರು. ಈ ಸಂಧರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ […]
Author: KundaVahini Editor
ಮರವಂತೆ ಸರ್ಕಾರಿ ಶಾಲೆಗೆ ಶಾಶ್ವತ ಶುದ್ಧ ನೀರಿನ ಘಟಕ ನೀಡಿದ ಡಾ.ಗೋವಿಂದ ಬಾಬು ಪೂಜಾರಿ
ಮರವಂತೆ(ಏ ,03):ಸರ್ಕಾರಿ ಶಾಲಾ ಉಳಿಸುವ ಅಭಿಯಾನದಲ್ಲಿ ತನ್ನ ಪಾತ್ರವಹಿಸುತ್ತಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಈಗಾಗಲೇ ಅನೇಕ ಸರ್ಕಾರಿ ಶಾಲೆಗಳಿಗೆ ಒಂದೊಂದೇ ಕೊಡುಗೆ ನೀಡುತ್ತಾ ಬಂದಿದ್ದಾರೆ . ಹಾಗೆಯೇ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಕೊಡುಗೆಯಾಗಿ ರೂ.80,000 ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಏ.03 ರಂದು ಶಾಲೆಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಿರಿಯ ಚಿಂತಕರು ಶ್ರೀ ಎಸ್. […]
ಕೋಟೇಶ್ವರ: ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ
ಜಿಲ್ಲಾ ವಿಕಲಚೇತನರ ಇಲಾಖೆ ಉಡುಪಿ ಜಿಲ್ಲೆ , ಎಪಿಡಿ ಸಂಸ್ಥೆ ಬೆಂಗಳೂರು, ಗ್ರಾಮ ಪಂಚಾಯತ್ ಕೋಟೇಶ್ವರ ಆಶ್ರಯದಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮಾರ್ಚ್ 31 ರಂದು ಬೆಳಿಗ್ಗೆ 11 ಗಂಟೆಗೆ ಕೋಟೇಶ್ವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೃಷ್ಣ ಗೊಲ್ಲ ಮಾತನಾಡಿ ಗ್ರಾಮೀಣ ಭಾಗದಲ್ಲಿ ವಿಶೇಷ ಚೇತನರನ್ನ ಗುರುತಿಸಿ ಎಪಿಡಿ ಸಂಸ್ಥೆ […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ: ಕುಂದಾಪುರ ಘಟಕದ ಪದಪ್ರದಾನ ಸಮಾರಂಭ
ಕುಂದಾಪುರ(ಮಾ.28): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಮಾ.27 ರಂದು ಕುಂದಾಪುರದ ಕುಂಭಾಶಿ ರಾಧಾಬಾಯಿ ವೆಂಕಟ್ರಮಣ ಪ್ರಭು ರಂಗಮಂದಿರ (ಕೊಯಾಕುಟ್ಟಿ) ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ: ಹಾಲಾಡಿ ಶಂಕರನಾರಾಯಣ ಘಟಕದ ಮಹಾಸಭೆ & ಪದಪ್ರದಾನ ಸಮಾರಂಭ – ಸಮುದಾಯವನ್ನು ಒಗ್ಗೂಡಿಸುವಲ್ಲಿ ಯುವ ಸಂಘಟನೆಯ ಪಾತ್ರ ಮಹತ್ವವಾದುದ್ದು: ಯಶಪಾಲ್.ಎ.ಸುವರ್ಣ
ಹಾಲಾಡಿ(ಮಾ.27): ನಾಡೋಜ ಡಾ.ಜಿ.ಶಂಕರ್ ರವರ ಸಂಘಟನಾತ್ಮಕ ಚಿಂತನೆ ,ಮಾರ್ಗದರ್ಶನ, ಸಂಘನೆಯ ಕುರಿತಾದ ಅವರ ದೂರದರ್ಶಿತ್ವ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು ಹಾಗೂ ಸಮುದಾಯವನ್ನು ಒಗ್ಗೂಡಿಸುವಲ್ಲಿ ಯುವ ಸಂಘಟನೆಯ ಪಾತ್ರ ಮಹತ್ವವಾದುದ್ದು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ ಹೇಳಿದರು. ಅವರು ಮಾ.26 ರಂದು ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನ ತೆರೆದ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ (ರಿ.), […]
ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಉಪ್ಪುಂದ: ಮನೆ ಹಸ್ತಾಂತರ ಕಾರ್ಯಕ್ರಮ ಡಾ.ಗೋವಿಂದ ಬಾಬು ಪೂಜಾರಿಯವರ ಸಮಾಜ ಸೇವೆ ಶ್ಲಾಘನೀಯ: ಕಲ್ಲಡ್ಕ ಡಾ.ಪ್ರಭಾಕರ್ ಭಟ್
ಬೈಂದೂರು( ಮಾ. 29:): ಡಾ.ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮೂಲಕ ಮಾನವೀಯ ನೆಲೆಯಲ್ಲಿ ಸಮಾಜ ಸೇವೆಗೈಯುತ್ತಿರುವುದು ಶ್ಲಾಘನೀಯ ಎಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಡಾ.ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮೂಲಕ ನಿರ್ಮಾಣಗೊಂಡ ಶ್ರೀ ವರಲಕ್ಷ್ಮೀ ನಿಲಯದ ಏಳನೆಯ ಮನೆಯ ಹಸ್ತಾಂತರ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಬೈಂದೂರಿನ ಗದ್ದೆಮನೆ ಲಕ್ಷ್ಮೀ ದೇವಾಡಿಗ ಬಡ ವ್ರದ್ಡ […]
ಯುವ ಲೇಖಕ -ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಗೆ ಸನ್ಮಾನ
ಗಂಗೊಳ್ಳಿ( ಮಾ.29) : ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ, ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ಇವರ ವತಿಯಿಂದ ಕಳೆದ ಸೋಮವಾರ ಯುವ ಬರಹಗಾರ ವಾಗ್ಮಿ ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜು ಎನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಜಿ.ಸುಬ್ಬ, ಉಪಾಧ್ಯಕ್ಷರಾದ ಜಿ ಕೆ ಸುರೇಶ್, ಕೋಶಾಧಿಕಾರಿ […]
ಮೊಗವೀರ ಯುವ ಸಂಘಟನೆ(ರಿ.) ಉಡುಪಿ :ಕರೋನ ವಾರಿಯರ್ಸಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ
ಉಡುಪಿ (ಮಾ.29): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಹಾಗೂ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಜಂಟಿ ಆಶ್ರಯದಲ್ಲಿ ಕಳೆದ ಕರೋನಾ ಲಾಕ್ಡೌನ್ ಸಂಧರ್ಭದಲ್ಲಿ ನಾಡೋಜ. ಡಾ.ಜಿ.ಶಂಕರ್ ರವರ ಸಲಹೆಯ ಮೇರೆಗೆ ಕರೋನಾದಿಂದ ಮ್ರತಪಟ್ಟವರ ಶವಸಂಸ್ಕಾರ ಕಾರ್ಯದಲ್ಲಿ ತಮ್ಮ ಜೀವದ ಹಂಗು ತೋರೆದು ಅನೇಕ ಶವಗಳಿಗೆ ಮುಕ್ತಿ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಉಡುಪಿ ಹಾಗೂ ಕುಂದಾಪುರ ಭಾಗದ ಕರೋನಾ ಫ್ರಂಟ್ಲೈನ್ ವಾರಿಯರ್ಸ್ ಗಳ […]
ಕುಂದಾಪುರ: ಕ್ರೀಡಾ ಸಾಧಕ ಪ್ರಶಾಂತ್ ಶೆಟ್ಟಿ ನಾಲ್ಕು ಪದಕಗಳೊಂದಿಗೆ ರಾಷ್ಟ್ರಮಟ್ಟ್ಟಕ್ಕೆ ಆಯ್ಕೆ
ಕುಂದಾಪುರ (ಮಾ.24): ಕ್ರೀಡಾ ಸಾಧಕ ಹಾಗೂ ಶಿಕ್ಷಕರಾದ ಪ್ರಶಾಂತ್ ಶೆಟ್ಟಿಯವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ನಾಲ್ಕು ಪದಕಗಳನ್ನು ಪಡೆಯುದರ ಜೊತೆಗೆ ಮುಂದಿನ ಮೇ 18ರಿಂದ 21ರವರೆಗೆ ಕೇರಳದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ಹಾಗೂ ಲಾಂಗ್ ಜಂಪ್ ವಿಭಾಗದಲ್ಲಿ ಕಂಚಿನ ಪದಕಗಳು, 400 ಮೀಟರ್ ಪುರುಷರ ರಿಲೇಯಲ್ಲಿ ಕಂಚಿನ ಪದಕ […]
ಗುಜ್ಜಾಡಿ : ಮಹಿಳೆಯ ಮೂತ್ರ ಪಿಂಡದ ಕಸಿ ಆಪರೇಷನ್ ಗೆ ಆಸ್ಪತ್ರೆ ವೆಚ್ಚ ಭರಿಸಲು ಬೇಕಿದೆ ಸಹಾಯ ಹಸ್ತ
ಗುಜ್ಜಾಡಿ(ಮಾ.24): ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶಾಲೆ ರಸ್ತೆ ಬಳಿಯ ವಾಸವಾಗಿರುವ ಕಂಟದಮನೆ ವಿದ್ಯಾವತಿ ಪೂಜಾರಿಯವರು ಸುಮಾರು ಒಂದು ವರ್ಷದಿಂದ ಮೂತ್ರ ಪಿಂಡದ ವೈಫಲ್ಯ ಖಾಯಿಲೆಯಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಾಲಿಸೀಸ್ ಮಾಡ ಬೇಕಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ರಿ ಖಾಯಿಲೆಗೆ ಮುಂದಿನ ತಪಾಸಣೆ ಮತ್ತು ಮೂತ್ರಪಿಂಡದ ಕಸಿ (Kidney Transplant) ಆಪರೇಷನ್, ಮತ್ತಿತರ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಆಸ್ಪತ್ರೆಯ ವೈದ್ಯರು ನೀಡಿದ್ದು, ಅದರಂತೆ […]










