ಕುಂದಾಪುರ (ಮಾ.15):ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2021-22 ನೇ ಸಾಲಿನ ವಿದ್ಯಾರ್ಥಿ ಕ್ಷೇಮ ನಿಧಿಯಿಂದ ಮಾ.14 ರಂದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ 45 ವಿದ್ಯಾರ್ಥಿಗಳು ಈ ಪುರಸ್ಕಾರವನ್ನು ಪಡೆದಿರುತ್ತಾರೆ. ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಮತ್ತು ಶ್ರೀ ಚಂದ್ರಶೇಖರ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಶಿವಾನಂದ ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ವನಿತಾ ನಾಯ್ಕ ವಂದಿಸಿದರು. […]
Author: KundaVahini Editor
ಬಾಲಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ನೆಂಪು ಫ್ರೆಂಡ್ಸ್
ವಂಡ್ಸೆ( ಮಾ.14): ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಗ್ರಾಮದ ನಿವಾಸಿಗಳಾದ ಶ್ರೀಮತಿ ಶ್ಯಾಮಲಾ ಮತ್ತು ಚರಣ್ ರವರ ಮಗನಾದ ಮಾಸ್ಟರ್ ಪವನ್ ಕುಮಾರ್ (ವಯಸ್ಸು 4 ವರ್ಷ) ಈ ಮಗು ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು ,ಬಾಲಕನ ಈ ಕಾಯಿಲೆಗೆ ತುರ್ತುಚಿಕಿತ್ಸೆಯ ಅಗತ್ಯವಿದ್ದು ಸುಮಾರು ರೂ. 40 ಲಕ್ಷದಷ್ಟು ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ನೆಂಪು ಫ್ರೆಂಡ್ಸ್ ಹಾಗೂ ನೆಂಪು ಪ್ರೀಮಿಯರ್ ಲೀಗ್ (NPL) ಇವರ ಸಹಾಯ ಹಸ್ತದಿಂದ […]
ಬೆಳಗಾವಿ: ರವಿಗೌಡ ಪಾಟೀಲ್ ರವರಿಗೆ ಡಾಕ್ಟರೇಟ್ ಪದವಿ
ಬೆಳಗಾವಿ (ಮಾ.10): ಇಲ್ಲಿನ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ & ರಿಸರ್ಚ್ ಇದರ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿಗೌಡ ಪಾಟೀಲ್ ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಇನ್ವೆಸ್ಟಿಗೇಶನ್ ಆಫ್ ಮ್ಯಾಕಾನಿಕಲ್ ಅಕೌಸ್ಟಿಕ್ ಆ್ಯಂಡ್ ತರ್ಮಲ್ ಬಿಹೇವಿಯರ್ ಆಫ್ ಸಿಲಿಕಾ ಆರೋಜೆಲ್ ಆ್ಯಂಡ್ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಫಿಲ್ಲಡ್ ವಿದ್ ಇಪೋಕ್ಸಿ ಕಂಪೋಸಿಟ್ ಮೆಟಿರಿಯಲ್ ಎನ್ನುವುದು ಮಹಾ ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ದಾವಣಗೆರೆಯ ಬಾಪುಜಿ ಇನಸ್ಟಿಟ್ಯೂಟ್ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ: ವಿಶ್ವ ಮಹಿಳಾ ದಿನಾಚರಣೆ
ಕುಂದಾಪುರ:(ಮಾ.9): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಜೇಸಿಐ ಕುಂದಾಪುರ ಸಿಟಿ ಇವರ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು . ಈ ಸಂದರ್ಭ ಲೇಖಕಿ ಸವಿತಾ ಮಾಧವ ಶಾಸ್ತ್ರೀ , ವಿದ್ಯಾರ್ಥಿ ಪ್ರತಿಭೆಗಳಾದ ಅಕ್ಷತಾ, ಸೌಜನ್ಯಾ ಹಾಗೂ ನವ್ಯಾ ಪಿ.ಯವರನ್ನು ಸನ್ಮಾನಿಸಲಾಯಿತು.ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಜೇಸಿ ಅಭಿಲಾಷ್ ಬಿ.ಎ., […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಬ್ರಹತ್ ರಕ್ತದಾನ ಶಿಬಿರ
ಕುಂದಾಪುರ( ಮಾ.9): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ., ಎನ್.ಎಸ್.ಎಸ್., ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ ಮಾ .9 ರಂದು ಜರಗಿತು. ಇಂಡಿಯನ್ ರೆಡ್ಕ್ರಾಸ್ ಘಟಕದ ಚೇರ್ಮನ್ ಜಯಕರ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯದರ್ಶಿಗಳಾದ ಸೀತಾರಾಮ್ ಶೆಟ್ಟಿ, […]
ನಾಯಕವಾಡಿ : ಸಂಗಮೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ
ನಾಯಕವಾಡಿ (ಮಾ.8 ): ಭಜನೆ ಎನ್ನುವುದು ಧಾರ್ಮಿಕ ಮನ ಶುದ್ಧಿಯನ್ನು ತರುವುದು ಮಾತ್ರವಲ್ಲದೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಹಾಯಮಾಡುತ್ತವೆ. ಆ ಮೂಲಕ ಜನರಲ್ಲಿ ಪರಸ್ಪರ ಸಹಕಾರವನ್ನು ಮೂಡಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಅನುಕೂಲವಾಗುತ್ತದೆ ಎಂದು ಕೊಂಕಣ ಕೊಪ್ಪದ ಸನ್ಯಾಸಿನಿ ಪ್ರವಚನ ಕೇಸರಿ ಪದ್ಮಾದೇವಿ ಅವರು ಅಭಿಪ್ರಾಯಪಟ್ಟರು. ಅವರು ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ ಮತ್ತು ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿಯ 67ನೇ ವಾರ್ಷಿಕೋತ್ಸವ ಮತ್ತು ಶ್ರೀ ಚೆನ್ನಬಸವೇಶ್ವರ ಯುವಕ […]
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕ : ವಿಶ್ವ ಮಹಿಳಾ ದಿನಾಚರಣೆ
ಬೈಂದೂರು (ಮಾ.8):ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಇದರ ಬೈಂದೂರು – ಶಿರೂರು ಘಟಕದ ಆಶ್ರಯದಲ್ಲಿ ಘಟಕದ ಯಡ್ತರೆಯ ಆಡಳಿತ ಕಛೇರಿಯಲ್ಲಿ ಮಾ.08ರಂದು “ವಿಶ್ವ ಮಹಿಳಾ ದಿನ”ವನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ COVID – 19 ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯ ಸುರಕ್ಷೆಗಾಗಿ ಅವಿರತವಾಗಿ ಶ್ರಮಿಸಿದ ಸಂಘಟನೆಯ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು – ಶಿರೂರು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ ಚಂದನ […]
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ : ವಿಟಿಯು ಅಂತಿಮ ಪರೀಕ್ಷೆಯಲ್ಲಿ ಎರಡು ರ್ಯಾಂಕ್
ಪುತ್ತೂರು (ಮಾ. 08): ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2020-21ನೇ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ 2 ರ್ಯಾಂಕ್ ಪಡೆದುಕೊಂಡಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ರಂಜನ್ ಎಂ. ಮೂರನೇ ರ್ಯಾಂಕ್ ಹಾಗೂ ಎಲೆಕ್ಟಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಕೃತಿಕಾ ಕೆ ಎಂಟನೇ ರ್ಯಾಂಕ್ ಗಳಿಸಿಕೊಂಡಿದ್ದಾರೆ. ರಂಜನ್ ಎಂ. 3ನೇ ರ್ಯಾಂಕ್ ಕೃತಿಕಾ ಕೆ. 8ನೇ ರ್ಯಾಂಕ್ ವಿದ್ಯಾರ್ಥಿಗಳ […]
ಮೂಡ್ಲಕಟ್ಟೆ ಎಂ ಐ ಟಿ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾಯ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ
ಕುಂದಾಪುರ(ಮಾ.6): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ಮಾದರಿ ಸ್ಪರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವು ಕಾಲೇಜಿನ ವಠಾರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿ ತಂಡಗಳು ತಮ್ಮ ತಮ್ಮ ವಿಶೇಷ ವಿಜ್ಞಾನ ಮಾದರಿಗಳ ಜೊತೆ ಭಾಗವಹಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೆನ್ನೀಸ್ ಬಂಜಿ ರವರು ಮಾತನಾಡಿ ವಿದ್ಯಾರ್ಥಿ ಸಮುದಾಯವು […]
ಡಾ| ಬಿ. ಬಿ ಹೆಗ್ಡೆ ಕಾಲೇಜು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕುಂದಾಪುರ (ಮಾ.6) : ಇಲ್ಲಿನ ಡಾ|. ಬಿ. ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯದಲ್ಲಿ ʼರಾಷ್ಟ್ರೀಯ ವಿಜ್ಞಾನ ದಿನʼ ಕಾರ್ಯಕ್ರಮ ಮಾರ್ಚ್ 3 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರಾಂಶುಪಾಲರಾದ ವಿಘ್ನೇಶ್ವರ ಭಟ್ ರವರು ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಹಾಗೂ ಬಿ.ಎಸ್.ಸಿ ಪದವಿಯ ನಂತರದ ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿ ಗಳಿಗೆ ವಿವರಿಸಿದರು. ಪ್ರಾಂಶುಪಾಲರಾದ ಫ್ರೋ. ಕೆ. ಉಮೆಶ್ ಶೆಟ್ಟಿ ಅಧ್ಯಕ್ಷತೆ […]










