ನಿಜ. ಆ ಚಿಂತನೆಗಳು ಬಹಳ ಸೂಕ್ಷ್ಮ ಮತ್ತು ಆಳವಾಗಿದ್ದವು. ಆ ಚಿಂತನೆಗಳ ಒಂದೊಂದು ಪದಗಳನ್ನು ಮಣಿಗಳಂತೆ ಪೋಣಿಸುತ್ತಾ ಹೋದಾಗ ಅದ್ಬುತ ಬರವಣಿಗೆಯಾಗಿ ಹೊರಹೊಮ್ಮತ್ತಿತ್ತು. ಸಾಧನೆ ಮಾಡ ಹೊರಟವರಿಗೆ ಶಕ್ತಿಯಾಗಿ ನಿಲ್ಲುತ್ತಿತ್ತು. ಈ ಬರವಣಿಗೆಯ ಹಿಂದಿರುವ ಕೈ ಬೇರೆ ಯಾರದ್ದು ಅಲ್ಲ. ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿಂತಕ,ಬರಹಗಾರ ಈಶ್ವರ್ ಸಿ ನಾವುಂದರವರದ್ದು. ಯೋಚನೆಗಳು ನನ್ನ ಸಾಧನೆಗಳಾಗಿದ್ದವು ಹಾಗೂ ಶಕ್ತಿಶಾಲಿ ಸಾಧನೆಗಳು ಹೌದು.ಕೆಲವೊಂದು ಸೃಜನಶೀಲ ಕೆಲಸಗಳಿಗೆ ನನ್ನ ಈ ಯೋಚನೆಗಳೇ ಸಾಧನವಾಗಿದ್ದವು. […]
Category: ಲೇಖನ
ಕುಂದಾಪ್ರ ಕನ್ನಡ —> ಲೇಖನ
ನಾ ಕಂಡಂತೆ ಕರುಣಾಮಯಿ ಶ್ರೀ ಗೋವಿಂದ ಬಾಬು ಪೂಜಾರಿ
ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಬಂದ ಕರೋನ ಮಹಾಮಾರಿಯ ಆರಂಭದ ಸಮಯ. ಕರೋನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಕಂಡುಬಂದರೂ ಸಹ ಹಲವರ ಬದುಕಿನ ದಿಕ್ಕು ತಪ್ಪಿದಂತೂ ಸುಳ್ಳಲ್ಲ. ಸರಿಸುಮಾರು ನಾಲ್ಕು ತಿಂಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದೆ. 30 ವರ್ಷದಿಂದ ಮುಂಬೈಯಲ್ಲಿ ವಾಸವಾಗಿದ್ದ ನನಗೆ ಬಹುತೇಕ ಎಲ್ಲಾ ಕ್ಯಾಟ್ ರಿಂಗ್ ವಲಯದ ಒಡನಾಟವಿದೆ. ಸಣ್ಣ ಮಟ್ಟದಲ್ಲಿ ನನ್ನ ಒಡೆತನದಲ್ಲಿ ಆಕಾಶ್ ಹೆಲ್ತ್ ಫುಡ್ ಪಾಸ್ತಾ ಅಂಡ್ […]
ನ್ಯಾಯದ ಹಸಿವು
ಹಸಿದ ಹೊಟ್ಟೆ ಮಾತ್ರ ಆಹಾರವನ್ನು ಹುಡುಕುತ್ತದೆ. ಹಸಿವಿಲ್ಲದವನಿಗೆ ಆಹಾರವು ಅಗತ್ಯ ಅನಿಸುವುದಿಲ್ಲ. ಈ ಸಮಾಜದ ಪರಿಸ್ಥಿತಿ ಕೂಡ ಹಾಗೇ ಆಗಿದೆ. ಇಲ್ಲಿ ಶೋಷಿತರು ,ಬಡವರು, ಅವಕಾಶ ವಂಚಿತ ಸಮುದಾಯಗಳು ಸಾಮಾಜಿಕವಾಗಿ ನ್ಯಾಯದಿಂದ ವಂಚಿತರಾಗಿದ್ದಾರೆ. ಇವರಿಗೆ ನ್ಯಾಯವೆಂಬ ಹಸಿವಿದೆ..ಆದರೆ….! ಹಸಿದವನಿಗೆ ಮಾತ್ರ ತಿಳಿಯುವುದು ಅನ್ನದ ಮಹತ್ವ. ಅನ್ಯಾಯಕ್ಕೊಳಗಾದವನಿಗೆ ತಿಳಿಯುವುದು ನ್ಯಾಯದ ಮಹತ್ವ .ಹಸಿವಿಲ್ಲದ ವ್ಯಕ್ತಿ ಹೇಗೆ ಆಹಾರವನ್ನು ಹುಡುಕುವುದಿಲ್ಲವೊ ಹಾಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಪ್ರಬಲ ಹೊಂದಿರುವ ವ್ಯಕ್ತಿ ಅನ್ಯಾಯದ ಕುರಿತು […]
ಕುಂದಗನ್ನಡದಲ್ಲೊಂದು ಪ್ರೇಮಪತ್ರ
ನಾನು ನೀನು ಹೈಕಂಡದ್ ಆಣ್ಭಾಷಿ ತೀರ್ಮಾನ ಆಯ್ಕರೆ ಯಾವ್ ದೈದ್ ಮನಿಗ್ ಹೊಯ್ಕೋ ಗುತ್ತಿಲ್ಲ. ಆರೆ ಎಂತ ಮಾಡುದ್ ನೀ ಜಾಸ್ತಿ ಸಿಟ್ ಮಾಡುಕು ನನ್ನಾಣಿ ನೀ ನನ್ ಗೊಂಬಿ ತುಂಡ್ ಅಂತಿದ್ದಿದೆ. ನೀ ಸಿಟ್ಟಂಗೆ ದೂರ್ವಾಸ್ರ್ ಹತ್ರದ್ ಪೈಕಿ ನೀನ್. ಅಲ್ದಿರೆ ಹಬ್ಬದಗೆ ಬಳಿ ತ್ಯಾಗ್ಸಿ ಕೊಡ್ಲ ಅಂದೇಳಿ ತಿಂಗ್ಳನಾಗಟ್ಲೆ ಮಾತೇ ಆಡ್ಲಾ ನೀನ್. ನಿಂಗೆಂತ ಗೊತಿತ್ ನನ್ ಕಷ್ಟ ಮಾರಾಯ್ತಿ, ಹೆಣ್ಮಕ್ಕಳ್ ಅಂದ್ರೆ ನಾಚ್ಕಿ ಕೊಟ್ಟಿ ನಾನ್. […]
ನೂತನ ಆಡಳಿತದೊಂದಿಗೆ ಎಕ್ಸಲೆಂಟ್ ಪಿಯು ಕಾಲೇಜು ಸುಣ್ಣಾರಿ : ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆ ಸಾರಥ್ಯ
2012 ರಲ್ಲಿ ಎಮ್. ಮಹೇಶ ಹೆಗ್ಡೆ ಯವರಿಂದ ಸ್ಥಾಪನೆಗೊಂಡ “ಎಕ್ಸಲೆಂಟ್ ಪಿ.ಯು. ಕಾಲೇಜ್, ಸುಣ್ಣಾರಿ” ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ. ಕೇವಲ ಕುಂದಾಪುರ-ಉಡುಪಿ ಪರಿಸರದ ವಿದ್ಯಾರ್ಥಿಗಳು ಮಾತ್ರವಲ್ಲದೇ ರಾಜ್ಯ-ಹೊರ ರಾಜ್ಯದಿಂದಲೂ ಈ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಜನೆಗೆ ಆಗಮಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ನಿದರ್ಶನ. ಸ್ಥಾಪನೆಗೊಂಡ ಕಿರು ಅವಧಿಯಲ್ಲಿಯೇ ಅತಿ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು, ಐಐಟಿ ವಿದ್ಯಾರ್ಥಿಗಳು ಮತ್ತು ಸಿಎ ವಿದ್ಯಾರ್ಥಿಗಳನ್ನು ಈ ಸಂಸ್ಥೆ ರೂಪಿಸಿದೆ. […]
ಕುಂದಗನ್ನಡದ ಕಂಗ್ಲೀಷ್ ಪದಗಳು
ಕರ್ನಾಟಕದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕುಂದಗನ್ನಡವು ಒಂದಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಜನರು ಅತಿವೇಗದಲ್ಲಿ ಹಾಗೂ ಚುಟುಕಾಗಿ ಪದಗಳನ್ನು ಪೋಣಿಸಿ ಮಾತನಾಡುವ ಭಾಷೆ ಈ ಕುಂದಗನ್ನಡ. ಪ್ರಾದೇಶಿಕತೆಯ ವೈಶಿಷ್ಟತೆಯನ್ನು ಒಳಗೊಂಡಿರುವ ಈ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವುದೇ ಚೆಂದ. ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ಪದಗಳನ್ನು ಸೇರಿಸಿ ಮಾತನಾಡುವ ಈ ಭಾಷೆ ಅನ್ಯರಿಗೆ ಸ್ವಲ್ಪ ವೈಶಿಷ್ಟಪೂರ್ಣ ಹಾಗೂ ವಿಭಿನ್ನವಾಗಿ ಕಂಡುಬರುವುದು ಸಹಜ. ಹಾಗೆಯೇ ಕುಂದಗನ್ನಡ ಭಾಷೆಯಲ್ಲಿ ಮಾತನಾಡುವಾಗ ಈ ಭಾಗದ […]
ಸೋಂಕಿತರು… ನೀವಂದುಕೊಂಡಷ್ಟೇ ಬದುಕಲ್ಲ
ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಮಗ, ಸೋಂಕಿಗೆ ಭಯಗೊಂಡು, ಇಂದು ಊರ ದಾರಿ ಹಿಡಿದಿದ್ದ.. ದೂರದಲ್ಲೆ ಕಂಡ ಚಿಂಟು, ಗುರುತು ಹಚ್ಚಿ ಕುಂಯ್ ಗುಡುತ್ತಾ ಓಡಿ ಬಂದು ಕಾಲು ನೇವರಿಸುತಿತ್ತು.. ಅದು ಸುಮಾರು ಆರು ವರ್ಷದ ಹಿಂದಿನ ಮಾತು, ಚಿಂಟುವಿಗಾಗ ನಾಲ್ಕೇ ತಿಂಗಳು.. ಅದರ ನೆನಪಲ್ಲಿ ಇವನ ಮುಖ ಮಾಸಿರಲಿಲ್ಲ.. ಬಾಲ ಅಲ್ಲಾಡಿಸುತಿತ್ತು…. ಚಿಂಟು ಓಡಿದ್ದನ್ನು ಕಂಡು, ಅದಾಗಲೇ ಒಲೆ ಪಕ್ಕ ಇಟ್ಟ ಬಟ್ಟಲಿಗೆ ಒಂದಷ್ಟು ನೀರು ಸುರಿದು, ಅರಸಿನ […]
ಸಪ್ತಪದಿ ಯೋಜನೆ : ಸಾಮೂಹಿಕ ವಿವಾಹ ಕಾರ್ಯಕ್ರಮ – ಒಂದಿಷ್ಟು ಮಾಹಿತಿ
ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
ಮನಿಗ್ ಯಾರಾರು ನೆಂಟ್ರ ಬಂದಾಳಿಕೆ! (ಕುಂದಗನ್ನಡದ ಲೇಖನ)
ಮೂರ ಗಂಟಿಯಿಂದ ಕಾದ್ ಕಾದ್ ಸಾಕಾಯ್ತ್.. ಇವತ್ ಬತ್ರೊ ಇಲ್ಯೊ…..?? 5 ಗಂಟಿ ಬಸ್ಸಿಗಾರು ಬಂದಿರ್ ಸಾಕಿದ್ದಿತ್.
ಜಟ್ಟಿದೇವಸ್ಥಾನ್ ಹಬ್ಬ….. ಒಂದು ನೆನಪು..
ಪೊಡಾಯಿನ್ ಜೋರ್ ಗಾಳಿಗೆ, ಕಡ್ಲಿನ್ ಆ ತೆರಿಗಳ್ ಸುಂಯ್ ಗುಟ್ಟು ಶಬ್ದು ಕೆಳ್ಕಂಡ್, ಅಜ್ಜಿ ಹೇಳು ಕಥಿಗೆ ಮಲ್ಕಂತಿದ್ದರ್ ನಾವ್. ಅವತ್ತ್ ಜನವರಿ ಆರ್ನೆ ದಿನದ್ ಹೊತ್ತ್ ಕಂತಿ ಹೊಯ್ ಇದ್ದಿತ್. ಏಳುವರೆ ಏಂಟ್ ಆಯ್ತ್ ಅಂದ್ರ ಸಾಕ್ ಊರಿಗ್ ಊರೆ ಉಂಡ್ಕ ಮನಿಕಂತ್ ಇದ್ದಿತ್. ಆ ನೂರ್ ವೋಲ್ಟಿನ್ ಬಲ್ಪ ಸುಚ್ಚ್ ಬಂದ್ ಮಾಡಿ ಅಜ್ಜಿ ಹಾಂಗೆ ಎಲಿ ಅಡ್ಕಿ ತಿಂತ ಹಸಿ ಬುಡ್ದಂಗ್ ಗೋಡಿ ಒರ್ಗಿ ಕುಕಂಡಳ್.ಕಾಲ್ […]