ಗಂಗೊಳ್ಳಿ (ಮಾ.8): ಗಂಗೊಳ್ಳಿಯಲ್ಲಿ ಕಳೆದ 75 ವರ್ಷಗಳಿಂದ ಧರ್ಮ ಜಾಗ್ರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುತ್ತಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನ ಕುಂದಾಪುರ ಪರಿಸರದ ಪ್ರಮುಖ ಭಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಸರಕಾರದ ಹಾಗೂಇತರ ಅನುದಾನವನ್ನು ಬಳಸಿಕೊಂಡು ವ್ಯವಸ್ಥಿತವಾದ ಸಭಾಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರಿನ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 7 ರ ರವಿವಾರ ಶ್ರೀ ಇಂದುಧರ ದೇವಸ್ಥಾನ […]
Day: March 8, 2021
ಡಾ| ಬಿ. ಬಿ. ಹೆಗ್ಡೆ ಕಾಲೇಜು: ವಿಶ್ವ ಮಹಿಳಾ ದಿನಾಚರಣೆ – ಸಾಧಕ ಮಹಿಳೆಯರಿಗೆ ಸನ್ಮಾನ
ಕುಂದಾಪುರ (ಮಾ. 8) ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ಜೇಸಿರೇಟ್ ವಿಂಗ್ ಆಫ್ ಜೆಸಿಐ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಾ.ಶ್ರಾವ್ಯ (ಸಮಾಜಸೇವೆ), ಮಮತಾ ಆರ್. ಶೆಟ್ಟಿ,ಹದ್ದೂರು(ಕ್ರಷಿ) ಲಿರಾ ಜೂಲಿಯೆಟ್ (ವ್ಯವಹಾರಿಕ), ಡಾ.ಸರೋಜಿನಿ (ಶಿಕ್ಷಣ) ಕಾಲೇಜಿನ ವಿದ್ಯಾರ್ಥಿನಿಯರಾದ ನಿವೇದಿತ (ಕ್ರೀಡೆ) ಶುಭಲಕ್ಷ್ಮಿ (ಶಿಕ್ಷಣ) ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. […]
ಬಿಡುಗಡೆಗೆ ಸಜ್ಜಾಗುತ್ತಿದೆ ಕುಂದಗನ್ನಡದ ಅಲ್ಬಂ ಹಾಡು “ಹೇಳ್ವರಿಲ್ಲ ಕೇಂಬರಿಲ್ಲ”
ಹಲವು ಅಲ್ಬಂ ಹಾಡು, ಕಿರುಚಿತ್ರ ನಿರ್ಮಿಸಿ ಕರಾವಳಿ ಭಾಗದಲ್ಲಿ ಹೆಸರು ಮಾಡಿರುವ ಅಶ್ನಿಗ್ಧ ಕ್ರಿಯೇಶನ್ಸ್ ತಂಡದ ಮುಂದಿನ ಪ್ರಯತ್ನ ಹೇಳ್ವರಿಲ್ಲ ಕೇಂಬರಿಲ್ಲ. ಈ ಹಾಡಿಗೆ ಸಂಗೀತ ನಿರ್ದೇಶಿಸಿ, ಬರೆದು ಹಾಡಿರುವುದು ಕರಾವಳಿಯ ಹೆಸರಾಂತ ಗಾಯಕ ಅಕ್ಷಯ್ ಬಡಾಮನೆ. ಹಾಡಿನ ಸಂಪೂರ್ಣ ನಿರ್ದೇಶನದ ಹೊಣೆ ಹೊತ್ತವರು ರಿಶಿತ್ ಶೆಟ್ಟಿ ಹಾಗೂ ರಾಘು ಶಿರೂರು. ಹಾಡಿನ ಸಂಪೂರ್ಣ ಚಿತ್ರೀಕರಣ ಗಂಗೊಳ್ಳಿಯ ಕಡಲ ತೀರದಲ್ಲಿ ಮುಗಿಸಿದ್ದು, ಚಿತ್ರೀಕರಣದ ಹೊಣೆ ಹೊತ್ತವರು ಆವರಿಸಿದೆ ಹಾಡಿನ ಖ್ಯಾತೀಯ […]
ಮಾರ್ಚ್, 9 ರಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ
ಉಡುಪಿ (ಮಾ.7): ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ “ಜ್ಞಾನವಾಹಿನಿ” ಹಾಗೂ ಉಡುಪಿ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ಇದೇ ಮಾರ್ಚ್ 9ರಂದು ಪರ್ಕಳ ಶ್ರೀ ಸುರಕ್ಷಾ ಸಭಾ ಭವನದಲ್ಲಿ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಯವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿ ಅಭ್ಯಾಗತರಾಗಿ […]