ಕೋಟಿ ಕಿರಣಗಳ ಸೂಸುವ ಮೂಲ ಭಾನು ತಾ ಏಕ ರವಿ ರಶ್ಮಿಯ ಸ್ಪರ್ಶಕೆ ಹಾತೊರೆಯುವ ಭುವಿಯ ಜೀವಿಗಳನೇಕ ಕ್ಷಣ ಹಿತದ ಆಸರೆಯ ನೆರಳಿಗೆ ಮನ ಸೆರೆಯಾಯಿತು ಬಹುತೇಕ #ಏನೇ_ಹೇಳಿ, ಭವ ಬಂಧನದ ಮುಕ್ತಿಗೆ ಭಗವಂತನ ಭಕ್ತಿಯೇ ಪೂರಕ.
Day: March 12, 2021
ಕ್ರೀಡೆಗೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ : ಮನೀಷ್ ಪೂಜಾರಿ
ಕುಂದಾಪುರ, ಮಾ.(10) : ಅತ್ಯಂತ ಕಿರು ಅವಧಿಯಲ್ಲಿ ಕ್ರೀಡೆಯಲ್ಲಿ ಉತ್ಕ್ರಷ್ಟ ಸಾಧನೆ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಗಮನ ಸೆಳೆದ ಸಂಸ್ಥೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆಕಾಲೇಜು. ವಿದ್ಯಾರ್ಥಿದೆಸೆಯಲ್ಲಿ ನನ್ನ ಕ್ರೀಡಾಪ್ರತಿಭೆಯನ್ನು ಗುರುತಿಸಿದ ಈ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ ಎಂದು ಖಾಸಗಿ ಕಂಪೆನಿ ಉದ್ಯೋಗಿ ಕಾಲೇಜಿನ ಪೂರ್ವ ವಿದ್ಯಾರ್ಥಿ ಮನೀಷ್ ಪೂಜಾರಿ ಹೇಳಿದರು.ಅವರು ನಗರದ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಾರ್ಷಿಕ ಕ್ರೀಡಾಕೂಟ ಸಂಪನ್ನ
ಕುಂದಾಪುರ, (ಮಾ. 10) : ನಗರದ ಗಾಂಧಿ ಮೈದಾನದಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಮಾರ್ಚ್ 10ರಂದು ನಡೆಯಿತು.ಕಾಲೇಜು ಪೂರ್ವ ವಿದ್ಯಾರ್ಥಿ ಉದ್ಯಮಿ ಶ್ರೀಧರ್ ಶೆಟ್ಟಿ ಕೆರಾಡಿ, ಯುವಜನ ಸೇವಾ ವಿಭಾಗದ ಕ್ರೀಡಾಧಿಕಾರಿ ಶ್ರೀ ಕುಸುಮಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಶ್ರೀ ಸೀತಾರಾಮ ನಕೃತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜನ ಪ್ರಾಂಶುಪಾಲರಾದ ಪ್ರೊ| […]
ಶ್ರೀಧವಲಾ ಕಾಲೇಜು : ಕಲಾ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಶ್ರೀಧವಲಾ ಕಾಲೇಜಿನ ಕಲಾ ಸಂಘದ 2020-21ನೇ ಸಾಲಿನ ಚಟುವಟಿಗಳ ಉದ್ಘಾಟನೆಯು ಮಾರ್ಚ್ 6 ರಂದು ಜರುಗಿತು. ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಾ ವಿದ್ಯಾರ್ಥಿಗಳ ಮುಂದಿನ ಹೆಜ್ಜೆ ಮತ್ತು ಹಾದಿ ಈ ವಿಷಯದ ಕುರಿತು ಮಾತನಾಡಿದರು.