ಕುಂದಾಪುರ (ಮಾ. 22) ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಪೈಯವರು ತಮ್ಮ ಸದಸ್ಯರ ಜೊತೆಗೂಡಿ 65 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಕೋಟೇಶ್ವರ- ಕುಂಭಾಶಿ -ಗೋಪಾಡಿ ಮೂರು ಗ್ರಾಮಗಳಲ್ಲಿ ಕರೋನಾ ಲಸಿಕೆಯನ್ನು ಹಾಕಿಸಲು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Day: March 23, 2021
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ : ಮಾರ್ಚ್ 26 ರಂದು ಕನ್ನಡ ನಾಟಕ ಅಧ್ವಾನಪುರ ಪ್ರದರ್ಶನ
ಉಡುಪಿ (ಮಾ. 23) ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಇದರ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಧ್ವಾನಪುರ ಎನ್ನುವ ಕನ್ನಡ ನಾಟಕ ಇದೇ ಮಾರ್ಚ್ 26 ರ ಸಂಜೆ 6.30ಕ್ಕೆ ಕಾಲೇಜಿನ ಬಯಲು ರಂಗಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವಿ ಹೆಚ್. ಡುಂಡಿರಾಜ್ ರಚನೆಯ, ವಿಘ್ನೇಶ್ ತೆಕ್ಕಾರು, ವಿನ್ಯಾಸ -ನಿರ್ದೇಶನದ ಈ ನಾಟಕಕ್ಕೆ ರೋಹಿತ್ ಎಸ್. ಬೈಕಾಡಿ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಹಾಗೆಯೇ ರವಿ ಕಾರಂತ್ ಕೋಟ ರಾಗ ಸಂಯೋಜನೆ ಮಾಡಿದ್ದು, […]
ವಿಶ್ವ ಜಲ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಗಾರ
ಉಡುಪಿ (ಮಾ. 23) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪರಿಸರ ಕ್ಲಬ್ ಮತ್ತು ಸಂಸ್ಥೆಯ ಸಿವಿಲ್ ವಿಭಾಗದ ಸ್ಥಪತಿ ಘಟಕದ ಸಹಯೋಗದೊಂದಿಗೆ ವಿಶ್ವ ಜಲದಿನಾಚರಣೆಯ ಅಂಗವಾಗಿ 22 ಮಾರ್ಚ್ 2021 ರಂದು “ಮಾನವನ ಆಧುನಿಕ ಚಟುವಟಿಕೆಗಳು ನೀರಿನ ಕೊರತಗೆ ಕಾರಣವಾಗಿವೆಯೇ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಜಿಲ್ಲಾ ಜಲಸಂಪನ್ಮೂಲ ವ್ಯಕ್ತಿ ಶ್ರೀ ಜೋಸೆಫ್ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಗತ್ತು ಎದುರಿಸುತ್ತಿರುವ ಪ್ರಸ್ತುತ […]
ಸಪ್ತಪದಿ ಯೋಜನೆ : ಸಾಮೂಹಿಕ ವಿವಾಹ ಕಾರ್ಯಕ್ರಮ – ಒಂದಿಷ್ಟು ಮಾಹಿತಿ
ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
ಡಾ| ಬಿ.ಬಿ. ಹೆಗ್ಡೆ ಕಾಲೇಜು : ಸಾಂಪ್ರದಾಯಿಕ ದಿನಾಚರಣೆ
ಸಂಸ್ಕೃತಿ, ಆಚರಣೆಗಳು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಬಾರದು. ಧಾರ್ಮಿಕ ಕಾರ್ಯಕ್ರಮಗಳಿಗಾದರೂ ಸಾಂಪ್ರದಾಯಿಕ ಉಡುಗೆ ತೊಡುವಂತಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಉಳಿಯುವಂತಾದರೆ ಈ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ.
ಶ್ರೀ ಧವಲಾ ಕಾಲೇಜು : ಶಿಕ್ಷಕರ ತರಬೇತಿ ಕಾರ್ಯಕ್ರಮ
ಉಡುಪಿ (ಮಾ. 21) ಶ್ರೀ ಧವಲಾ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ “ಮೆಂಟರಿಂಗ್ ಸ್ಕಿಲ್ಸ್” ಬಗ್ಗೆ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆಡಳಿತ ಮಂಡಳಿ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ (ರಿ) ಮೂಡಬಿದ್ರೆ ಇದರ ಸಂಚಾಲಕರಾದ ಶ್ರೀ ಕೆ. ಹೇಮರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದ್ದರು.ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. […]