ಮಗ್ಗಲು ಬದಲಿಸಲು ರಾತ್ರಿಗಳೆಷ್ಟುಘೋರ ರಾತ್ರಿಯಲ್ಲಿ ಬೆಳದಿಂಗಳ ಹುಡುಕುವ ಬಯಕೆ!ಒಳಗೆ ಹೇಳಲಾಗದ ಚಡಪಡಿಕೆಹೊರಗೆ ಘನ ಘೋರ ಮಳೆನಿದ್ದೆ ಹತ್ತಿರ ಸುಳಿಯುತ್ತಿಲ್ಲ …ಅದೇನೋ ಯಾತನೆ….. ಕಠೋರ ವರ್ತನೆ ಹೇಳಬೇಕಾದುದು ಹೇಳಲಾಗುತ್ತಿಲ್ಲಅನುಭವಿಸಬೇಕಾದುದು.. ಅನುಭವಿಸಲಾಗುತ್ತಿಲ್ಲನನ್ನ ಬಣ್ಣ ಮಾಸಿದ ಬದುಕಿನ ಬಗ್ಗೆ ಏನಾದರೂ ಹೇಳಲೇ ಬೇಕಿತ್ತುಕಪ್ಪು ಮಸಿ ಹಚ್ಚಿದ ವಿಧಿ ಬರಹದ ಪರಿಯು ಹೇಳಬೇಕಿತ್ತುನಿದ್ದೆಗೂ ಹೊಟ್ಟೆಕಿಚ್ಚು …ಯಾಕೆ ಗೊತ್ತಾ ನಿದ್ದೆ ಬಂದರೆ ನೀನು ಕನಸಲ್ಲಿ ಬಂದು ಬಿಡ್ತೆಯಾಲ್ಲಾ….!?
Day: July 11, 2021
ಕುಂದಾಪುರ : ‘ಸುರಗಂಗೆ’ ಪುಸ್ತಕ ಬಿಡುಗಡೆ
ಕುಂದಾಪುರ (ಜು, 11) : ಪಂಚಭಾಷಾ ಲೇಖಕಿ ಪಾರ್ವತಿ ಜಿ ಐತಾಳ್ ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಸಾಧನೆ ಸದಾ ಕಾಲ ಪ್ರೇರಣೆ ನೀಡುವಂತದ್ದು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಮನ್ನಣೆ ಸಿಗಲೇ ಬೇಕಿದೆ ಎಂದು ಖ್ಯಾತ ಕಲಾವಿದೆ ಸಾಹಿತಿ ಪೂರ್ಣಿಮಾ ಸುರೇಶ್ ಅಭಿಪ್ರಾಯಪಟ್ಟರು. ಅವರು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಸಂಪಾದಕತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಸಮಗ್ರ ಕೃತಿಗಳ […]
ಯುವಾಬ್ರಿಗೇಡ್ ಶಂಕರನಾರಾಯಣ : “ಉಸಿರು ಹಂಚೋಣ” ಗಿಡ ನೆಡುವ ಕಾರ್ಯಕ್ರಮ
ಶಂಕರನಾರಾಯಣ (ಜು, 11): ಕುಂದಾಪುರ ತಾಲೂಕಿನ ಶಂಕರನಾರಾಯಣದ ಕುಪ್ಪಾರು ಪ್ರದೇಶದಲ್ಲಿ ಯುವಾಬ್ರಿಗೇಡ್ ಶಂಕರನಾರಾಯಣದ ವತಿಯಿಂದ “ಉಸಿರು ಹಂಚೋಣ” ಶೀರ್ಷಿಕೆಯಡಿಯಲ್ಲಿ ಮನೆ-ಮನೆಗೆ ಸಂಪರ್ಕ ಮಾಡಿ ವಿವಿಧ ರೀತಿಯ ಗಿಡಗಳನ್ನು ವಿತರಿಸಿ ,ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಘಟಕದ ಪ್ರಮೋದ್ ಶಂಕರನಾರಾಯಣ, ವಿಜಯ್ ಯಡಮಕ್ಕಿ, ಕಿರಣ್ ಉಳ್ಳೂರು-74, ನಂದನ ಶಂಕರನಾರಾಯಣ, ನಿತೀಶ್ ಶಂಕರನಾರಾಯಣ, ಶ್ರೀಶ ಶಂಕರನಾರಾಯಣ, ಚೇತನ್ ಶಂಕರನಾರಾಯಣ ಪಾಲ್ಗೊಂಡಿದ್ದರು.
ಎಕ್ಸಲೆಂಟ್ ಕಾಲೇಜ್ ಕುಂದಾಪುರ : ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳಿಗಾಗಿ “ಭವಿಷ್ಯದ ಬಾಗಿಲು” ಕಾರ್ಯಕ್ರಮ
ಕುಂದಾಪುರ (ಜು, 11): ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದಿರೆಯ ಆಡಳಿತಕ್ಕೆ ಒಳಪಟ್ಟ ಕುಂದಾಪುರದ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಸ್ಕೂಲ್ ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ “ಭವಿಷ್ಯದ ಬಾಗಿಲು” ಎನ್ನುವ ವಿನೂತನ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಜುಲೈ 12 ಮತ್ತು 13 ರಂದು ಹಮ್ಮಿಕೊಂಡಿದೆ. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿರುವ ಡಾ|| […]
ಅಮ್ಮ ಸೇವಾ ವೇದಿಕೆ ಹೆಮ್ಮಾಡಿ : ಪದಾಧಿಕಾರಿಗಳ ಆಯ್ಕೆ ಮತ್ತು ಸಹಾಯ ಧನ ಸಂಗ್ರಹ
ಹೆಮ್ಮಾಡಿ (ಜು, 11): ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ನಿಗೆ ಶಾಶ್ವತವಾಗಿ ಮನೆಯೊಂದನ್ನು ನಿರ್ಮಿಸಿ ಕೊಡುವ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮ್ಮ ಸೇವಾ ವೇದಿಕೆ ಹೆಮ್ಮಾಡಿ ಇದರ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಜುಲೈ 11 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ಸಭಾಗ್ರಹದಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಉದಯ ಕುಮಾರ್ ಹಟ್ಟಿಯಂಗಡಿಯವರನ್ನು ಅಧ್ಯಕ್ಷರಾಗಿ, ಚಂದ್ರ ಬಿ. ಕಂಡ್ಲೂರು ರವರನ್ನುಕಾರ್ಯದರ್ಶಿಯಾಗಿ ಹಾಗೂ ಕೋಶಾಧಿಕಾರಿಯಾಗಿ ಶ್ರೀ ಜಗದೀಶ್ ಮಾರ್ಕೋಡು […]
ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ : ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುತ್ತ ಪಾದಯಾತ್ರೆಗೈಯುತ್ತಿರುವ ಚರಣ್ ಗಂಗೊಳ್ಳಿ ನೇತೃತ್ವದ ಯುವಕರ ತಂಡ
ಗಂಗೊಳ್ಳಿ (ಜು,11) : ಕುಂದಾಪುರ ತಾಲೂಕಿನ ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯುವಕರ ತಂಡವೊಂದು ಪಾದಯಾತ್ರೆಗೆ ಹೊರಟಿದೆ. ಸತತ ಹದಿಮೂರನೇ ವರುಷದ ಪಾದಯಾತ್ರೆ ಯಲ್ಲಿ ಸಾಗುತ್ತಿರುವ ಈ ತಂಡ ದಾರಿಯುದ್ದಕ್ಕೂ ರಕ್ತದಾನದ ಮಹತ್ವದ ಕುರಿತು ಅರಿವು ಮುಡಿಸುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈ ಭಕ್ತರ ತಂಡದ ನೇತೃತ್ವ ವಹಿಸಿರುವವರು ರಕ್ತದಾನಿ ಚರಣ್ ಗಂಗೊಳ್ಳಿ . ಸತತ ನಲವತ್ತು ಬಾರಿ ಅಗತ್ಯ ಉಳ್ಳವರಿಗೆ ಸ್ವತಃ ರಕ್ತದಾನ ಮಾಡುವುದರ […]
ವಿಶ್ವದ ಅತ್ಯಂತ ಕುಬ್ಬ ಕರು ಬಾಂಗ್ಲಾ ದೇಶದಲ್ಲಿ ಜನನ
ಬೆಂಗಳೂರು (ಜು, 10) : ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾ ದೇಶಲ್ಲಿ ವಿಶ್ವದ ಅತ್ಯಂತ ಕುಬ್ಬ ಕರು ಜನಿಸಿದೆ.ಕೇವಲ 26 ಇಂಚು (66 ಸೆಂ.ಮೀ) ಎತ್ತರ, 26 ಕೆಜಿ ತೂಕವಿರುವ ರಾಣಿ ಹೆಸರಿನ ಈ ಕುಬ್ಜ ಕರು ಬಾಂಗ್ಲಾ ದೇಶದ ರಾಜಧಾನಿಯಾದ ಢಾಕಾ ಸಮೀಪದ ಚರಿಗ್ರಾಮ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದೆ. ಈಗಾಗಲೇ ವಿಶ್ವದ ಅತಿ ಕುಬ್ಬ ಕರುವೆಂದು ಗಿನ್ನೆಸ್ ದಾಖಲೆಗೆ ಸೇರಿರುವ ಕರುವಿಗಿಂತ ಈ ಕರು 10 ಸೆಂ.ಮೀ. […]