ಕುಂದಾಪುರ (ಆ, 09) : ಆಸಾಡಿ ಅಮಾಸಿ ಆಗಸ್ಟ್ 8 ರ ವಿಶ್ವ ಕುಂದಾಪ್ರ ಕನ್ನಡ ದಿನ ಅಂಗವಾಗಿ ಅಕ್ಷೋಹಿಣಿ ಟೀಮ್ ಕುಂದಾಪುರ ಆಯೋಜಿಸಿದ “ನಾನು ನನ್ನ ಕುಂದಾಪ್ರ “ಎನ್ನುವ ವಿಷಯದ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯ ಮೊದಲ ಬಹುಮಾನ ಮಂಜುನಾಥ ಗುಂಡ್ಮಿ ಹಾಗೂ ದ್ವೀತಿಯ ನವ್ಯಶೀ ದೊರೆತಿದ್ದು, ಸಂಸ್ಥೆಯ ವತಿಯಿಂದ ವಿಜೇತರಿಗೆ ಹಸ್ತಾಂತರಿಸಲಾಯಿತು.
Day: August 10, 2021
ಡಾನ್ ಬಾಸ್ಕೋ ಸ್ಕೂಲ್ ತ್ರಾಸಿ : ಸೈಬರ್ ಸೆಕ್ಯುರಿಟಿ ಅರಿವು ಕಾರ್ಯಕ್ರಮ
ತ್ರಾಸಿ (ಆ, 10) : ಇಲ್ಲಿನ ಡಾನ್ ಬಾಸ್ಕೋ ಸೀನಿಯರ್ ಸೆಕೆಂಡರಿ ಶಾಲೆಯ ವೆಲ್ಫೇರ್ ವಿಭಾಗದ ಆಶ್ರಯದಲ್ಲಿ ಇತ್ತೀಚೆಗೆ ವರ್ಚುವಲ್ ಮೋಡ್ನಲ್ಲಿ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿತು. ಉಡುಪಿಯ ಪೃಥ್ವಿಷನ್ ಸಂಸ್ಥೆಯ ಸ್ಥಾಪಕರು ಹಾಗೂ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಪರಿಣಿತರಾಗಿರುವ ಶ್ರೀ ಪೃಥ್ವೀಶ್ ಕೆ, ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆಗಳ […]
ರೋಟರಿ ಕ್ಲಬ್ ಕುಂದಾಪುರ : ಸರಕಾರಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಔಷಧಿ ಕಿಟ್ ಹಸ್ತಾಂತರ
ಕುಂದಾಪುರ (ಆ, 09) : ಕೋವಿಡ್ 19 ಎರಡನೇ ಅಲೆ ಮುಗಿದಿದ್ದು, ಮೂರನೆಯ ಅಲೆಯು ಮಕ್ಕಳ ಜೀವಕ್ಕೆ ಅಪಾಯ ಇರುವುದರ ಬಗ್ಗೆ ತಜ್ಞರ ವರದಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ಚಿಕ್ಕಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ ಬೇಕಾಗಿದ್ದು , ವಿಶೇಷವಾಗಿ ತಾಲೂಕಿನ ಸರಕಾರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಹತ್ತನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆಯನ್ನು ನುರಿತ ವೈದ್ಯರಿಂದ ಮಾಡಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇದ್ದಲ್ಲಿ ಅಂತಹ ಮಕ್ಕಳಿಗೆ […]
ಅಶೋಕ್ ಕುಟುಂಬಕ್ಕೆ ಬೈಂದೂರು ಶಾಸಕರಿಂದ ಐದು ಲಕ್ಷ ರೂಪಾಯಿ ಚೆಕ್ ವಿತರಣೆ
ಕುಂದಾಪುರ (ಆ, 10 ) : ಇತ್ತೀಚಿಗೆ ಮಳೆಯ ಆರ್ಭಟದಿಂದ ನದಿಗೆ ಬಿದ್ದು ಹಳ್ನಾಡು ನಿವಾಸಿ ಅಶೋಕ್ ಮೃತಪಟ್ಟಿದ್ದು, ಆತನ ಮನೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮನೆಯವರಿಗೆ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ರಾಘವೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಪುತ್ರನ್, ಸಾಮ್ರಾಟ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ದಿನೇಶ್ ಆಚಾರ್, ಪ್ರಕಾಶ್ ಶೆಟ್ಟಿ […]
ಅಭಿನವ ಕಲಾತಂಡ ಕುಂದಾಪುರ : ಕಲಾತ್ಮಕ ಕಿರುಚಿತ್ರ “ಕರ್ಕಾಟಿ ಅಮಾಸಿ” ಬಿಡುಗಡೆ
ಕುಂದಾಪುರ (ಆ, 10) : ಅಭಿನವ ಕಲಾತಂಡ ಕುಂದಾಪುರ ಇವರ ಕಲಾತ್ಮಕ ಕಿರುಚಿತ್ರ “ಕರ್ಕಾಟಿ ಅಮಾಸಿ” ಬಿಡುಗಡೆ ಸಮಾರಂಭ, ಅಭಿನವ ಪ್ರಶ್ನಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಯನ್ನು ಶ್ರೀ ಕಾರ್ತಿಕೇಯ ಕೃಪಾ ಸಭಾಭವನ ಕುಂದಾಪುರ ಇಲ್ಲಿ ಆಗಸ್ಟ್ ,8 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ ರಾಮಚಂದ್ರ ಉಡುಪ ಕುಂದಾಪುರ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜೊತೆಗೆ “ಕರ್ಕಾಟಿ ಅಮಾಸಿ” ಕಲಾತ್ಮಕ […]
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ (ಆ, 10) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಕಳಸಿಗೆಗೆ ಭತ್ತ ಹೊಯ್ಯುವುದರ ಮೂಲಕ ಕುಂದಗನ್ನಡದ ರಾಯಭಾರಿ, ಸಾಂಸ್ಕೃತಿಕ ಚಿಂತಕ ಹಾಗೂ ಶಿಕ್ಷಕ ಮನು ಹಂದಾಡಿಯವರು ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾಷೆಯನ್ನು ಬಳಸುವಿಕೆ, ಬೆಳೆಸುವಿಕೆ ತನ್ಮೂಲಕ ಉಳಿಸುವಿಕೆ ಕುರಿತಂತೆ ಹಾಗೂ ಕುಂದಾಪ್ರ ಭಾಷಾ ಸೊಗಡು ರಂಜನೀಯವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ […]
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ : ದಾಖಲೆ ನಿರ್ಮಿಸಿದ ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಕುಂದಾಪುರ (ಆ, 10) : ಈ ವರ್ಷದ 10ನೇ ತರಗತಿಯ ಪರೀಕ್ಷೆ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದರೂ, ಅಂತಿಮವಾಗಿ ಬಹು ಆಯ್ಕೆಯ ಆಧಾರದ ಮೇಲೆ ಪರೀಕ್ಷೆ ನಡೆಸಿ, ನಿನ್ನೆ ಫಲಿತಾಂಶ ಹೊರಬಂದಿದೆ. ಫಲಿತಾಂಶ ಪಟ್ಟಿಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಾಖಲೆ ನಿರ್ಮಿಸಿದ್ದು, ವಿದ್ಯಾರ್ಥಿಗಳಾದ ಅನುಶ್ರೀ ಶೆಟ್ಟಿ, ಪ್ರಣೀತ ಹಾಗೂ ಸೃಜನ್ ಭಟ್ 625ಕ್ಕೆ 625 ಅಂಕಗಳನ್ನು ಪಡೆದು ಹೊಸ ಭಾಷ್ಯ […]