ಸಂತೋಷ ಮತ್ತು ಸಂಗೀತ ಎರಡೂ ಒಂದನ್ನು ಬಿಟ್ಟು ಮತ್ತೊಂದು ಇರಲಾರದೇನೋ ಅನ್ನುವಷ್ಟು ಜೋಡಿಯಾಗಿದೆ. ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾಧಿಸುತ್ತೇವೆ. ಆದರೆ ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ ಎಂಬ ಮಾತಿದೆ. ಸಂತೋಷದ ಹಾಡುಗಳು ಹಾಗೆಯೇ ಸ್ವಲ್ಪ ವೇಗದ ಉತ್ಸಾಹದ ದಾಟಿರುತ್ತದೆ. ದುಃಖದ ಹಾಡುಗಳು ನಿಧಾನವಾಗಿ ಸಾಗುತ್ತದೆ. ಬದುಕೇ ಒಂದು ಸಂಗೀತ ಎಂದುಕೊಂಡರೆ ಖುಷಿಯಲ್ಲಿರುವಾಗ ಕ್ಷಣಗಳು ಬೇಗಬೇಗನೆ ಸರಿದು ಹೋಗುತ್ತದೆ. ದುಃಖದ ಸನ್ನಿವೇಶಗಳು ಬೇಗನೆ ಕರಗುವುದೇ ಇಲ್ಲ .ಕಷ್ಟಗಳು ಹಾಗೂ ದುಃಖ ನಮ್ಮ ಮನಸ್ಸನ್ನು ಕರಗಿಸಿ […]
Day: October 18, 2021
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ಕರಾವಳಿ ಕಾಮಧೇನು ಪ್ರಶಸ್ತಿ ಪುರಸ್ಕಾರ
ಕುಂದಾಪುರ (ಅ,18): ಶ್ರಿ ನಾರಾಯಣ ಗುರು ಯುವಕ ಮಂಡಲ (ರಿ) ಕುಂದಾಪುರ ಆಯೋಜನೆಯ ಅದ್ದೂರಿ ಕುಂದಾಪುರ ದಸರಾ-2021 ರ ಸಂದರ್ಭದಲ್ಲಿ ಉದ್ಯಮಿ ಕೊಡುಗೈದಾನಿ ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಕರಾವಳಿ ಕಾಮಧೇನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ,ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಶ್ರಿನಾಥ ಕಡ್ಗಿಮನೆ, ನಾರಾಯಣ ಗುರು ಟ್ರಸ್ಟ್ ನ ಕಾರ್ಯದರ್ಶಿ ಭಾಸ್ಕರ ವಿಟಲವಾಡಿ,ಬಿಲ್ಲವ […]
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ:ನೂತನ ಅಧ್ಯಕ್ಷರಾಗಿ ನಾಗರಾಜ್ ಹೆಮ್ಮಾಡಿ ,ಪ್ರಧಾನ ಕಾರ್ಯದರ್ಶಿಗಳಾಗಿ ಕೃಷ್ಣಮೂರ್ತಿ ಡಿಬಿ ಆಯ್ಕೆ
ಕುಂದಾಪುರ (ಅ,17): ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗ(ರಿ) ಇದರಕುಂದಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಗೌರವಾಧ್ಯಕ್ಷರಾದ ಉದಯ ಬಳ್ಕೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇದರ ಆಂಗ್ಲ ಭಾಷಾ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ಆಯ್ಕೆಯಾಗಿದ್ದಾರೆ.