ಬೈಂದೂರು (ಏ.30): ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ್ ಗಾಣಿಗರವರು ಯಕ್ಷರಂಗದಲ್ಲಿ ಸಾಕಷ್ಟು ಮಿಂಚಿದರೂ ಅವರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇರುವುದನ್ನು ಮನಗಂಡು ಸಮಾಜ ಸೇವಕ ,ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಕಲಾವಿದನ ಬದುಕು ಎತ್ತಿಹಿಡಿಯುವ ದೃಷ್ಟಿಯಿಂದ 50,000 ರೂ ಚೆಕ್ ನೀಡಿ ಸಹಾಯ ಹಸ್ತ ಚಾಚಿದರು. ಹಾಗೆಯೇ ಭವಿಷ್ಯದ ದಿನಗಳಲ್ಲಿಯೂ ತನ್ನಿಂದಾದ ಇನ್ನಷ್ಟು ಸಹಾಯವನ್ನು ನೀಡುವುದಾಗಿ ತಿಳಿಸಿದರು.
Month: April 2022
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು: ಸಾಧಕರಿಗೆ ಸನ್ಮಾನ
ಕೋಟೇಶ್ವರ(ಏ.29): ಕೋಟೇಶ್ವರದ ಮಾರ್ಕೊಡಿನ ನಾಗಯಕ್ಷಿ ದೇವಸ್ಥಾನ ದ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ನಾಗಯಕ್ಷಿ ಯಕ್ಷಕೂಟ ಇದರ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಏ.23ರಂದು ಜರುಗಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಹಾಗೂ ಬಡಗು ತಿಟ್ಟಿನ ಪ್ರಸಿದ್ದ ಭಾಗವತರಾದ ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ
ಬ್ರಹ್ಮಾವರ( ಏ.28): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ, ಮೊಗವೀರ ಯುವಸಂಘಟನೆ (ರಿ.),ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿಮೇ 4 ರಂದು ನಡೆಯಲಿರುವ 13ನೇ ವರ್ಷದ ಉಚಿತ ಸಾಮೂಹಿಕ ಸರಳ ವಿವಾಹದ ಪೂರ್ವಭಾವಿ ವೀಳ್ಯಶಾಸ್ತ್ರ ಕಾರ್ಯಕ್ರಮ ಏ.27 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆಯಿತು. .ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಹಾಗೂ ಅವರ ಪತ್ನಿ ಶಾಲಿನಿ ಜಿ. ಶಂಕರ್, ಮಗಳು […]
ಆಮೆ ಹಬ್ಬ: ಏ.30 ಕ್ಕೆ ಮೈಸೂರು ಒಡೆಯರ್ ಕುಂದಾಪುರಕ್ಕೆ
ಕೋಡಿ(ಏ,25): ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಫ್.ಎಸ್.ಎಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಏ.30 ರಂದು ಕುಂದಾಪುರದ ಕೋಡಿ ಕಡಲ ತೀರದಲ್ಲಿ ಆಯೋಜಿಸಿರುವ ಆಮೆ ಹಬ್ಬಕ್ಕೆ ಮೈಸೂರು ಒಡೆಯರ್ ಯದುವೀರ್ ಕ್ರಷ್ಣದತ್ತ ಒಡೆಯರ್ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆಮೆ ಹಬ್ಬದಲ್ಲಿ ಬೀಚ್ ಸ್ವಚ್ಚತೆ, ಕಡಲಾಮೆಯ ರಕ್ಷಣೆಯ ಕುರಿತು ಅರಿವು, ತ್ಯಾಜ್ಯ ನಿರ್ವಹಣೆ, ಮರಳು ಕಲಾಕ್ರತಿ ರಚನೆ ಹಾಗೂ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು,ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು […]
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ಕೆ.ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿ ಪ್ರದಾನ
ಕೋಟ(ಏ,24): ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ,ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟ, ಕೋಟತಟ್ಟು ಗ್ರಾಮಪಂಚಾಯತ್ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ವತಿಯಿಂದ ಕೆ .ಸಿ ಕುಂದರ್ ಸ್ಮರಣಾರ್ಥ ನಡೆದ ಗಮನ-2022 ರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಕೆ .ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಉದ್ಯಮಿ& ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ಪ್ರದಾನ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ: ಪ್ರಥಮ ರ್ಯಾಂಕ್ ವಿಜೇತೆ ಕಾವ್ಯಾ ದೇವಾಡಿಗರಿಗೆ ಸನ್ಮಾನ
ಕುಂದಾಪುರ ( ಏ.24): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ.ಉಮೇಶ್ ಶೆಟ್ಟಿ ಹಾಗೂ ಭೋಧಕ ವರ್ಗ ಕಾವ್ಯಾರವರ ಸ್ವಗ್ರಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕಾವ್ಯಾ ಹಾಗೂ ಅವರ ತಾಯಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ […]
ಕಟ್ಟೆ ಫ್ರೆಂಡ್ಸ್ ಕಾಳಾವರ ಮಡಿಲಿಗೆ ಕಾಳಾವರ ವನದುರ್ಗಾ ಟ್ರೋಪಿ- 2022
ಕೋಟೇಶ್ವರ (ಏ,23): ವನದುರ್ಗಾ ಯುವಕ ಮಂಡಲ (ರಿ.) ಕಾಳಾವರ ಇವರ ಆಶ್ರಯದಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ವನದುರ್ಗಾ ಟ್ರೋಫಿ- 2022 ಯನ್ನು ಪಡೆದು ಜಯಭೇರಿ ಭಾರಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವನದುರ್ಗಾದೇವಿ ದೇವಸ್ಥಾನ ಕಾಳಾವರ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಕಾಳಾವರ ವಹಿಸಿದ್ದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರಾಧ್ಯ ಎಸ್.ಶೆಟ್ಟಿ ಕಾಳಾವರ ಇವರ ಅನುಪಸ್ಥಿತಿಯಲ್ಲಿ ಅವರ […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ
ಬ್ರಹ್ಮಾವರ( ಏ,23): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ,ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ.) ,ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಮೊಗವೀರ ಸಮುದಾಯದ 13 ನೇ ವರ್ಷದ ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ ಏ.23ರಂದು ಬ್ರಹ್ಮಾವರದ ಶಾಮಿಲಿ ಶನಾಯ ಸಭಾಭವನದಲ್ಲಿ ನಡೆಯಿತು. ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಇದರ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾಮೂಹ ವಿವಾಹ ಕಾರ್ಯಕ್ರಮದ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ
ಬಂಟಕಲ್(ಏ.22) : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕಶಿಬಿರವನ್ನು ಎಪ್ರಿಲ್ 18 ರಂದು ಎಸ್ವಿಎಚ್ ಪದವಿಪೂರ್ವ ಕಾಲೇಜು ಇನ್ನಂಜೆಯಲ್ಲಿ ಉದ್ಘಾಟನೆಗೊಂಡಿತು. ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕ ಆಚಾರ್ಯ ರ ವರು ಒಂದು ವಾರದ ಎನ್ಎಸ್ಎಸ್ ಶಿಬಿರವನ್ನು ದೀಪ ಬೆಳಗಿಸುವ ಮೂಲಕಉದ್ಘಾಟಿಸಿ ಶಿಬಿರದ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ತಮ್ಮ ಸಹಕಾರ ನೀಡುವುದಾಗಿ ಶಿಬಿರಾರ್ಥಿಗಳಿಗೆ ಹೇಳಿದರು. ಇನ್ನಂಜೆ ಎಸ್ವಿಎಚ್ ಪದವಿಪೂರ್ವ ಕಾಲೇಜಿನ […]
ಬಿ.ಜೆ.ಪಿ ಕುಂದಾಪುರ ಮಂಡಲ: ಕೋಟೇಶ್ವರ ಮಹಾಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಭೆ
ಕೋಟೇಶ್ವರ(ಏ,21): ಬಿ.ಜೆ.ಪಿ ಕುಂದಾಪುರ ಮಂಡಲದ ಕೋಟೇಶ್ವರ ಮಹಾಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಭೆ ಕೋಡಿ ಕಿನಾರದ ಶೆಣೈ ರೆಸಾರ್ಟ್ ನಲ್ಲಿ ಇತ್ತೀಚೆಗೆ ನಡೆಯಿತು. ಕೋಟೇಶ್ವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣ ಗೊಲ್ಲ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಮಂಡಲದ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಬೂತ್ ಮಟ್ಟದಲ್ಲಿ ಬಲಪಡಿಸಿ ಸಶಕ್ತ ಬೂತ್ ಸಧೃಡ ಭಾರತ ಎಂಬ ಪಕ್ಷದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು […]