ನಾವುಂದ( ಜೂ,27): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಸುರಕ್ಷ ಶೆಟ್ಟಿ ಅವರಿಗೆ 1995 -96ನೇ ಸಾಲಿನ ಕಾಲೇಜಿನ ವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳು ನೀಡಿದ 15000 ರೂಪಾಯಿ ಪ್ರೋತ್ಸಾಹ ಧನವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಪರವಾಗಿ ಭಾಷ್ ಟೆಕ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಹೆಬ್ಬಾರ್ […]
Month: June 2022
ಎಕ್ಸಲೆಂಟ್ ಪಿಯು ಕಾಲೇಜು & ಶಾಲೆ : ವಿಶ್ವ ಪರಿಸರ ದಿನಾಚಾರಣೆ
ಕುಂದಾಪುರ (ಜೂ ,27): ಜೂನ್ 05 ರ ವಿಶ್ವ ಪರಿಸರ ದಿನದ ಅಂಗವಾಗಿ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಶಾಲೆಯಲ್ಲಿ ವಿಶ್ವಪರಿಸರ ದಿನ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಾತಾನಾಡಿ ಪ್ರತಿಯೊಬ್ಬರು ಗಿಡ-ಮರ ನೆಟ್ಟು ಬೆಳಸಿ ಹಸಿರೇ ಉಸಿರಾಗಿರುವಂತೆ ಮತುವರ್ಜಿವಹಿಸಬೇಕೆಂದರು. ಶಾಲೆಯ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಖಜಾಂಚಿಯಾದ ಭರತ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಸಾಲುಮರದ ತಿಮ್ಮಕ್ಕನಂತೆ ಪರಿಸರ ಉಳಿಸಿ ಬೆಳೆಸುವ ಕಾಳಜಿಯನ್ನು ಮೈಗೂಡಿಕೊಳ್ಳಬೇಕೆಂದರು. ವಿಶ್ವ […]
ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು,ಕುಂದಾಪುರ: ಮಾದಕ ವಸ್ತು- ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ
ಕುಂದಾಪುರ(ಜೂ,27): ಮಾದಕವಸ್ತು ಸೇವನೆಯು ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ.ಈ ವ್ಯಸನದಿಂದ ಸಂಪೂರ್ಣ ದೂರವಿರುವ ಜೊತೆಗೆ ಮಾದಕ ವ್ಯಸನ ಸಂಬಂಧಿತ ಪ್ರಬಲ ಕಾನೂನುಗಳ ಕುರಿತು ಅರಿವು ಹೊಂದಿರಬೇಕು ಎಂದು ಕುಂದಾಪುರದ ಪೋಲಿಸ್ ಠಾಣಾಧಿಕಾರಿ ಶ್ರೀ ಸದಾಶಿವ ಗವರೋಜಿ ಹೇಳಿದರು. ಅವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಮಾದಕವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು. ಕಾರ್ಯಕ್ರಮದ […]
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ,). ಉಪ್ಪುಂದ:ಡಾ. ಗೋವಿಂದ ಬಾಬು ಪೂಜಾರಿ ನಿರ್ಮಿಸಿಕೊಡುವ 8ನೇ ಮನೆಯ ಗ್ರಹಪ್ರವೇಶ
ಉಪ್ಪುಂದ(ಜೂ,25): ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ಇದರ ಅಧ್ಯಕ್ಷರಾದ ಉದ್ಯಮಿ ,ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ನಿರ್ಮಿಸಿಕೊಡುವ 8ನೇ ಮನೆಯ ಗ್ರಹಪ್ರವೇಶ ಮತ್ತು ಫಲಾನುಭವಿಗಳಿಗೆ ಕೀ ಹಸ್ತಾಂತರ ಇದೇ ಭಾನುವಾರ 26 ರಂದು ಉಪ್ಪುಂದ ಶಾಲೆ ಬಾಗಿಲಿನಲ್ಲಿ ನಡೆಯಲಿದೆ. ಟ್ರಸ್ಟ್ ಮೂಲಕ ತೀರಾ ಅಗತ್ಯವುಳ್ಳವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುವ ಆಶ್ರಯ ನೀಡುವ ಪುಣ್ಯ ಕೆಲಸವನ್ನು ಡಾ.ಗೋವಿಂದ ಬಾಬು ಪೂಜಾರಿಯವರು ನಿರಂತರವಾಗಿ ನಡೆದುಕೊಂಡು ಬಂದಿದ್ದಾರೆ. ಉಪ್ಪುಂದ ಶಾಲೆ […]
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ (ಲಿ): ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಉಡುಪಿ (ಜೂ,24): ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. ಬ್ಯಾಂಕಿನ ಸದಸ್ಯರ ಮಕ್ಕಳು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.85, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80 ಹಾಗೂ 2021ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ. 70 ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ 65 ಅಂಕಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ […]
ಹೆಸಕುತ್ತೂರು : ಯೋಗ ದಿನಾಚರಣೆ
ಕುಂದಾಪುರ(ಜೂ,25): ಯೋಗವು ನಮ್ಮ ದೇಹ ಹಾಗೂ ಮನಸ್ಸಿನ ಜೊತೆಗೆ ನಮ್ಮ ಬದುಕಿನ ಆರೋಗ್ಯವನ್ನು ಸದಾ ಸುಸ್ಥಿತಿಯಲ್ಲಿಡುವ ವಿಧಾನವಾಗಿದೆ” ಎಂದು ಸೈಬ್ರಕಟ್ಟೆಯ ಉದ್ಯಮಿಗಳಾದ ಶ್ರೀ ಸಂಕಯ್ಯ ಶೆಟ್ಟಿ ನುಡಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಿಸಸ್ ಸಮದ್, […]
ಅಮ್ಮನ ಅಂತರಾಳ
ಆಕೆಗೆ ಸುಮಾರು ಅರವತ್ತಗಿರಬಹುದು.ಆದರೂ ತನ್ನದೇ ಆದ ಸ್ವಂತ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾಳೆ.ಆಕೆಗೆ ಏರಡು ಮಕ್ಕಳು. ಅದರಲ್ಲೊಬ್ಬ ಮಾನಸಿಕ ಅಸಮಾನತೆಗೆ ಒಳಪಟ್ಟ ಅಂಗವಿಕಲ.ಇನ್ನೊಬ್ಬ ಗಲ್ಫ್ ದೇಶದಲ್ಲಿ ಕೆಲಸದಲ್ಲಿದ್ದ. ಆತನನ್ನು ಈಕೆ ನೋಡದೆ ಎಷ್ಟೋ ವರುಷಗಳೇ ಆಗಿದ್ದವು.ಹಬ್ಬಕ್ಕೆ ಹುಣ್ಣಿಮೆಗೊಮ್ಮೆ ಪಕ್ಕದ ಶೆಟ್ಟರ ಮನೆಗೆ ಕರೆಮಾಡಿ ಆಕೆಯ ಬಳಿ ಮಾತನಾಡುತ್ತಿದ್ದ. ಪ್ರತಿ ಬಾರಿಯೂ ಕರೆ ಮಾಡಿದಾಗಲೂ ಆತ ಹೇಳುತ್ತಿದ್ದದ್ದು ಏರಡೇ ಮಾತು.ಮುಂದಿನ ತಿಂಗಳಲ್ಲಿ ಊರಿಗೆ ಬರುವೆ ಹಾಗೂ ನಾಳೆ ಶೆಟ್ಟರ ಬಳಿ ಮಾತನಾಡಿದ್ದೇನೆ ಅವರ […]
ವಿ. ಕೆ. ಆರ್. ಪ್ರೌಢ ಶಾಲೆ ಕುಂದಾಪುರ : ಶಿಕ್ಷಕ -ಪೋಷಕ ಸಭೆ
ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ನೇತೃತ್ವದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂ ,18 ರಂದು ಎಸ್. ಎಸ್. ಎಲ್. ಸಿ ಮಕ್ಕಳ ಶಿಕ್ಷಕ ಪೋಷಕ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಶುಭಾ ಕೆ. ಎನ್. ಪೋಷಕರಿಗೆ ವಾರ್ಷಿಕ ಕ್ರಿಯಾ […]
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ಯೋಗ ದಿನಾಚರಣೆ
ಗಂಗೊಳ್ಳಿ (ಜೂ,22): ಯೋಗವನ್ನು ನಾವು ಕಲಿಯುವುದರ ಜೊತೆಜೊತೆಗೆ ಮುಂದಿನ ಪೀಳಿಗೆಯವರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ […]
ಬಸ್ರೂರು: ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ
ಬಸ್ರೂರು(ಜೂ,20): ಇಲ್ಲಿನ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ “ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ಕುಂದಾಪುರ ತಾಲೂಕು ಬಸ್ರೂರು ಗ್ರಾಮ ಬಹಳ ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ವಿಜಯನಗರ,ಆಳುಪ,ಕೆಳದಿ ಸಂಸ್ಥಾನಗಳು ಆಳ್ವಿಕೆ ನಡೆಸಿದ ಸ್ಥಳ ಕೂಡಾ ಆಗಿದೆ.ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವಷ೯ಗಳ ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿರುವುದು […]