ವಂಡ್ಸೆ (ಜು, 30) : ಸುಧಿರ್ಘ 25 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜು,30 ರಂದು ಸೇವೆಯಿಂದ ನಿವ್ರತ್ತರಾದ ನೆಂಪು ಅಂಗನವಾಡಿ ಶಿಕ್ಷಕಿ ಭಾರತಿ ಶೆಟ್ಟಿಯವರನ್ನು ಶ್ರೀ ವಿನಾಯಕ ಯುವಕ ಸಂಘ (ರಿ) ನೆಂಪು ಹಾಗೂ ನೆಂಪು ಗ್ರಾಮಸ್ಥರ ವತಿಯಿಂದ ಅವರ ಸೇವೆಯನ್ನು ಗುರುತಿಸಿ ಬೀಳ್ಕೊಡುಗೆಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ನೆಂಪುವಹಿಸಿದ್ದರು. […]
Month: July 2022
ಕಾಮನವೆಲ್ತ್ ಕ್ರೀಡಾಕೂಟ : ಕುಂದಾಪುರದ ಗುರುರಾಜ್ ಪೂಜಾರಿಗೆ ಕಂಚಿನ ಪದಕ
ಕುಂದಾಪುರ (ಜು, 30) : ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದ 61 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಮೂಲದ ಗುರುರಾಜ್ ಪೂಜಾರಿ ಜೆಡ್ಡು ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.ಒಟ್ಟು 269 ಕೆಜಿ ಎತ್ತಿರುವ ಗುರುರಾಜ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸಿ.ಇ.ಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜು ಪ್ರಥಮ ವರ್ಷದಲ್ಲಿಯೇ ಅಮೋಘ ಸಾಧನೆ
ಕಾರ್ಕಳ (ಜು, 30) : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ. ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪಾಸನ ಬಿ ಪಿ ರಾಜ್ಯಕ್ಕೆ 42 ನೇ ರ್ಯಾಂಕ್ ಹಾಗೂ ಪಶುವೈದ್ಯಕೀಯ […]
ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಕಾರ್ಗಿಲ್ ವಿಜಯ ದಿವಸ್ ಆಚರಣೆ
ಕುಂದಾಪುರ(ಜು,27): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸ್ರೂರಿನ ಶ್ರೀ ದೀಪಕ್ ಕುಮಾರ್ರವರು ವಿದ್ಯಾರ್ಥಿಗಳಿಗೆ ಸೈನ್ಯದ ಸೇವೆಯ ಕುರಿತು ತಿಳಿಸುವುದರ ಜೊತೆಗೆ ಸೈನ್ಯಕ್ಕೆ ಸೇರಲು ಬೇಕಾದ ಸಲಹೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಅಧ್ಯಕ್ಷರಾಗಿ ಉಪಸ್ಥಿತರಿದ್ದರು,.ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಪ್ರಾಸ್ತಾವಿಕ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ರಕ್ಷಕ -ಶಿಕ್ಷಕ ಸಭೆ
ಕುಂದಾಪುರ(ಜು,27): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರಕ್ಷಕ – ಶಿಕ್ಷಕ ಸಂಘದ ಸದಸ್ಯರಿಗೆ ನ್ಯಾಕ್ ಪೂರ್ವಭಾವಿ ಸಭೆ ಜು,26 ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ‘ ಈ ಕಾರ್ಯಕ್ರಮದಲ್ಲಿ ನ್ಯಾಕ್ ಟೀಮ್ ಭೇಟಿಯ ಕುರಿತು ಚರ್ಚಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಕೆ. ಉಮೇಶ್ ಶೆಟ್ಟಿ ಮಾತನಾಡಿ, ಶೀಘ್ರವೇ ಕಾಲೇಜಿಗೆ ನ್ಯಾಕ್ ಟೀಮ್ ಭೇಟಿ ನೀಡಲಿದ್ದು .ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಗದ್ದೆ ನಾಟಿ ಪ್ರಾತ್ಯಕ್ಷಿಕೆ
ಕುಂದಾಪುರ : ಜುಲೈ (27): : ಕಾಲೇಜಿನ ವಾಣಿಜ್ಯ ವಿಭಾಗ, ಸಮುದಾಯ ಸೇವಾ ಕೇಂದ್ರ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಗದ್ದೆ ನಾಟಿ ಕಾರ್ಯಕ್ರಮವನ್ನು ಜು,24 ರ ಭಾನುವಾರದಂದು ಹಮ್ಮಿಕೊಳ್ಳಲಾಯಿತು. ಶ್ರೀ ಶಂಕರ ಪೂಜಾರಿ ಆನಗಳ್ಳಿ ಇವರ ಮಾರ್ಗದರ್ಶನದಲ್ಲಿ ಆನಗಳ್ಳಿಯ ಗುಮ್ಮನಕಟ್ಟೆ ದೇವಸ್ಥಾನದ ಸಮೀಪದ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ […]
ಭಾರತ ಸೇನೆಯಲ್ಲಿ ಯುವಕರಿಗೆ ವಿಪುಲ ಅವಕಾಶ -ಡಾ.ಹೆರಾಲ್ಡ್ ಐವನ್ ಮೋನಿಸ್
ಶಿರ್ವ(ಜು,27): ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 23ನೇ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ನಮ್ಮ ಭಾರತಾಂಬೆಯ ರಕ್ಷಕರು ವೀರಯೋಧರರು. ಆಂತರಿಕ ಮತ್ತು ಬಾಹ್ಯ ರಾಷ್ಟ್ರ ಭದ್ರತೆಯನ್ನು ಯಶಸ್ವಿಯಾಗಿ ಕಾಪಾಡಲು ಸೇನಾ ತನ ನೆಲೆಯಲ್ಲಿ ತನ್ನ ಹದ್ದಿನ ಕಣ್ಣಿನ ಹಾಗೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಸೈನಿಕರ ಸಾಹಸ […]
ಹೆಮ್ಮಾಡಿ: ಜನತಾ ಸ್ವತಂತ್ರ ಪಿ.ಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
ಹೆಮ್ಮಾಡಿ(ಜು,27): ಇಲ್ಲಿನ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಜು,26 ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ನಿವೃತ್ತ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಜೋಷಿ ಪಿ.ಪಿ. ಆಗಮಿಸಿ ತಾವು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನೆನಪುಗಳೊಂದಿಗೆ ಯುದ್ಧದ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರ ವಹಿಸಿದ್ದರು.ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರು […]
ಡಾ. ಬಿ.ಬಿ. ಹೆಗ್ಡೆ ಕಾಲೇಜು : ಫುಡ್ ಆರ್ಟ್ -2K22
ಕುಂದಾಪುರ (ಜು,25): ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಗಮನ ಸೆಳೆದಿದೆ. ಈ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿರುವುದು ಹಾಗೂ 4೦೦ ಕ್ಕೂ ಮಿಕ್ಕಿ ವಿವಿಧ ಬಗೆಯ ಖಾದ್ಯಗಳನ್ನು ವಿದ್ಯಾರ್ಥಿಗಳು ಸೀಮಿತ ಅವಧಿಯಲ್ಲಿ ತಯಾರಿಸಿರುವುದು ಶ್ಲಾಘನೀಯ ಎಂದು ಬಸ್ರೂರಿನ ಪ್ರತಿಭಾ ಟುಟೋರಿಯಲ್ ನ ಸಂಚಾಲಕ ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಆಗಸ್ಟ್ 03 ರಂದು ಕ್ಯಾಂಪಸ್ ಸಂದರ್ಶನ
ಶಿರ್ವ(ಜು ,23): ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಆಗಸ್ಟ್ 03 ರಂದು ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆ( ದಿಯಾ ಸಿಸ್ಟಮ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ. ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ.ಎಸ್),ಎಂಎಸ್ಸಿ, ಎಂಸಿಎ, ಬಿಇ,ಬಿಟೆಕ್ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಆಧಾರ್ […]