ಕುಂದಾಪುರ (ನ,15): ಇವತ್ತಿನ ನಮ್ಮ ದೈನಂದಿನ ಜೀವನದಲ್ಲಿ ದೇಹದಂಡನೆ ಕಡಿಮೆಯಾಗಿರುವುದರಿಂದ ವ್ಯವಸ್ಥಿತವಾದ ತರಬೇತಿ ಆಧರಿತ ಕ್ರೀಡೆಯ ಅಗತ್ಯವಿದೆ. ದಿನ ನಿತ್ಯವೂ ಅಲ್ಪ ಸಮಯವನ್ನಾದರೂ ನಾವು ದೇಹಬಲವನ್ನು ಹೆಚ್ಚಿಸುವಂಥ ಕಾರ್ಯಗಳಿಗೆ ನೀಡಬೇಕು” ಎಂದು ಕುಂದಾಪುರ ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ಹೇಳಿದರು . ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ […]
Month: November 2022
ಸೇವಾ ಚೇತನ ಟ್ರಸ್ಟ್ ಮೂಡುಬಗೆ: ಮನೆ ಹಸ್ತಾಂತರ ಕಾರ್ಯಕ್ರಮ
ಅoಪಾರು( ನ,15): ಬಡ ಕುಟುಂಬದ ವನಜ ಪೂಜಾರಿ ಇವರು ಮನೆಯನ್ನು ಕಟ್ಟಬೇಕು ಎಂದು ನಿರ್ಧರಿಸಿದ ಆ ಸಮಯದಲ್ಲಿ ತನ್ನ ಗಂಡನನ್ನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಕಳೆದುಕೊಂಡಾಗ ಅವರೊಂದಿಗೆ ಇದ್ದಿದ್ದು ಎಂಡೋಸಲ್ಫನ್ ಪೀಡಿತ ಬುದ್ಧಿಮಾಂದ್ಯ ಮಗ. ಮಗನನ್ನು ಬಿಟ್ಟು ಕೂಲಿಗೂ ಹೋಗಲಾಗದ ಪರಿಸ್ಥಿತಿ. ಇವರ ಮನೆ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಬೇಕೆಂದು ಅನೇಕರು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗದಿದ್ದಾಗ ಇವರು ಸಂಪರ್ಕಿಸಿದ್ದು ಸೇವಾ ಚೇತನ ಟ್ರಸ್ಟ್ . ಅವರ ಕಷ್ಟವನ್ನು […]
ಬದುಕು ಬದಲಿಸಬಹುದು ಖ್ಯಾತಿಯ ನೇಮಿಚಂದ್ರ – ಕುಂದಾಪುರದ ಎಚ್.ಎಮ್.ಎಮ್.ವಿ.ಕೆ.ಆರ್. ಶಾಲೆಗೆ ಭೇಟಿ
ಕುಂದಾಪುರ ( ನ.14): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ನ.12 ರಂದು ಸಿದ್ಧ ವಿಜ್ಞಾನಿ, ಕಥೆಗಾರ್ತಿ, ಮಾನವತಾವಾದಿ, ಲೇಖಕಿ “ಬದುಕು ಬದಲಿಸಬಹುದು” ಖ್ಯಾತಿಯ ನೇಮಿಚಂದ್ರ ರವರು ಆಗಮಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಸಾಧಕಿಯರನ್ನು ಶಾಲೆಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸುವ ಸದುದ್ದೇಶದೊಂದಿಗೆ ”ವಿಜ್ಞಾನಿಯೊಂದಿಗೆ ಸಂವಾದ “ ಎನ್ನುವ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ಕನಕದಾಸ ಜಯಂತಿ
ಕುಂದಾಪುರ(ನ,14): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅವರ ಕೀರ್ತನೆಗಳನ್ನು ಭಜಿಸಿ ಕನಕದಾಸ ಜಯಂತಿಯನ್ನು ನ.11 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾದ ವಿ. ಕೆ. ಆರ್. ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಪ್ರಕಾಶ ಬಿಲ್ಲವರವರು ಕನಕದಾಸರು ತಮ್ಮ ಕೀರ್ತನೆಗಳ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ: ಡಾ| ಬಿ. ಬಿ. ಹೆಗ್ಡೆಯವರ ಸಂಸ್ಮರಣೆ ಕಾರ್ಯಕ್ರಮ
ಕುಂದಾಪುರ (ನ.14): ಕುಂದಾಪುರದಲ್ಲಿ ವೈದ್ಯಕೀಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಪ್ರಮುಖರಲ್ಲಿ ಡಾ| ಬಿ.ಬಿ. ಹೆಗ್ಡೆ ಅವರು ಅಗ್ರಪಂಕ್ತಿ ಯಲ್ಲಿ ಗುರುತಿಸಿ ಕೊಂಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡುವುದರ ಜೊತೆಗೆ ನೂರಾರು ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಡಾ| ಬಿ.ಬಿ. ಹೆಗ್ಡೆಯವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯಲ್ಲಿ ಡಾ| ಬಿ. ಬಿ. ಹೆಗ್ಡೆಯವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ ಶೆಟ್ಟಿ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಎನ್.ಎಸ್.ಎಸ್ ಘಟಕದ ವತಿಯಿಂದ ಕ್ಯಾಂಪಸ್ ಕ್ಲೀನ್
ಕುಂದಾಪುರ (ನ.14): ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕ್ಯಾಂಪಸ್ ಸ್ವಚ್ಛತೆ ಅಭಿಯಾನ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ಕಾಲೇಜಿನ ಭದ್ರತಾ ಸಿಬ್ಬಂದಿ ರೇಮಂಡ್ ನಜರತ್ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.
ಕರಾಟೆ – ವಿ. ಕೆ. ಆರ್. ಪ್ರೌಢ ಶಾಲಾ ವಿದ್ಯಾರ್ಥಿನಿ ನವಮಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ( ನ.14): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿನಿ ನವಮಿ ಎಸ್. ಶೆಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡ “ರಾಜ್ಯ ಮಟ್ಟದ ಶಾಲಾ […]
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಎನ್ಸಿಸಿಯ ಸ್ವಚ್ಛತಾ ಶ್ರಮದಾನ- ಜನಾಂದೋಲನ
ಶಿರ್ವ(ನ,13): ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಚ್ಛತಾ ಶ್ರಮದಾನ- ಜನಾಂದೋಲನ ಕಾರ್ಯಕ್ರಮ ನ .12 ರಂದು ನಡೆಯಿತು. ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮಿಣ–2022’ ಜನಾಂದೋಲನ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ […]
ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವಿಚಾರಗೋಷ್ಠಿ
ಹೆಮ್ಮಾಡಿ( ನ.13): ಇಲ್ಲಿನ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿ ನಲ್ಲಿ “ಕನ್ನಡ ನಾಡು-ನುಡಿ-ಸಂಸ್ಕೃತಿ” ವಿಷಯದ ಕುರಿತು ವಿದ್ಯಾರ್ಥಿ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಶ್ರೀ ಗಣೇಶ ಮೊಗವೀರರವರು ವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರಿನ ಅತಿಥಿ ಉಪನ್ಯಾಸಕರಾದ ಎಸ್, ಮಣಿಕಂಠರವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕನ್ನಡ ನಾಡು-ನುಡಿಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನಮ್ಮ ನೆಲ,ಜಲ, ಸಂಸ್ಕೃತಿ,ಸಂಪ್ರದಾಯವನ್ನು ಗೌರವಿಸುವಂತೆ ಕರೆ ನೀಡಿದರು. ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ […]
ಕೋಟೇಶ್ವರ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಂಧದಗುಡಿ ಸಿನೆಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಸಾಫ್ಟವೇರ್ ಕಂಪೆನಿಯ ಉದ್ಯೋಗಿ
ಕೋಟೇಶ್ವರ( ನ.13): ಬೆಂಗಳೂರು ಖಾಸಗಿ ಸಾಫ್ಟವೇರ್ ಕಂಪೆನಿಯ ಉದ್ಯೋಗಿ, ಗೋಪಾಡಿ ನಿವಾಸಿ ಸುಶ್ಮಿತಾ ಮೆಂಡನ್ ರವರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ , ವನ್ಯಜೀವಿ ಸಂಕುಲ,ಪ್ರಾಕೃತಿಕ ವೈಶಿಷ್ಟ್ಯದ ಕುರಿತು ತಿಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಸಂದೇಶ ಸಾರುವ ಗಂಧದ ಗುಡಿ ಚಲನಚಿತ್ರ ವೀಕ್ಷಣೆಯನ್ನು ಪಡು ಗೋಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೇಶ್ವರದ ಭಾರತ್ ಸಿನೆಮಾಸ್ ಚಿತ್ರಮಂದಿರದಲ್ಲಿ […]