ಬೆಂಗಳೂರು( ಡಿ,24): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಿಂದ ಸಿರಿಕಲಾ ಮೇಳದ ಕಲಾವಿದರಿಂದ ಬೆಂಗಳೂರಿನ ಚಾಮರಾಜ ಪೇಟೆಯ ಉದಯಭಾನು ಕಲಾಸಂಘದಲ್ಲಿ “ಮೋಕ್ಷ ಸಂಗ್ರಾಮ” ಎಂಬ ಯಕ್ಷಗಾನ ಇತ್ತೀಚೆಗೆ ಪ್ರದರ್ಶನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್ ಚಂದ್ರಶೇಖರ್,ಉದ್ಯಮಿಗಳಾದ ಚಂದ್ರಶೇಖರ್ ಹೆಬ್ಬಾರ್ , ರಾಘವೇಂದ್ರ ಹತ್ವಾರ್ ಮತ್ತು ಕರುಣಾಳು ಟ್ರಸ್ಟ್ ನ ಆನಗಳ್ಳಿ ಕರುಣಾಕರ ಹೆಗಡೆ ಭಾಗವಹಿಸಿ ಯಕ್ಷಗಾನಕ್ಕೆ ಶುಭ ಹಾರೈಸಿದರು. […]
Day: December 24, 2022
ಡಾ|ಬಿ. ಬಿ. ಹೆಗ್ಡೆ ಕಾಲೇಜು: ರೋವರ್ಸ ಮತ್ತು ರೇಂಜರ್ಸ್ ವಾರ್ಷಿಕ ಚಟುವಟಿಕೆ ಉದ್ಘಾಟನೆ
ಕುಂದಾಪುರ(ಡಿ,23): ರೋವರ್ಸ ಮತ್ತು ರೇಂಜರ್ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್ಸ ಮತ್ತು ರೇಂಜರ್ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್ಸ […]
ಹೆಮ್ಮಾಡಿ ಜನತಾ ಸ್ವತಂತ್ರ ಪಿ ಯು ಕಾಲೇಜಿನ ವರ್ಷಾ ರವಿಶಂಕರ್ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಡಿ,24); ಜಿಲ್ಲಾ ಸಹಕಾರ ಮಹಾಮಂಡಲ ಜಿಲ್ಲೆಯ ಪದವಿ ಪೂರ್ವ ಕಾಲೇಜುವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಸಮೃದ್ದ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲುದು’ ಎಂಬ ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪಥಮ ಪಿ.ಯು.ಸಿ ವಿದ್ಯಾರ್ಥಿನಿ ವರ್ಷಾ ರವಿಶಂಕರ್ ಪ್ರಥಮ ಸ್ಥಾನ ಪಡೆದು ಕರ್ನಾಟಕ ಸಹಕಾರ ಮಹಾಮಂಡಲ ನಡೆಸುವ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ […]
ಹುಸೈನ್ ಹೈಕಾಡಿಯವರಿಗೆ ಸಮ್ಮಾನ
ಕುಂದಾಪುರ(ಡಿ,24): ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲರ ಕಷ್ಟಕ್ಕೆ ಸ್ಪಂದಿಸಿದ ಕುಂದಾಪುರ ಸಿಟಿ ಜೇಸಿಸ್ ಸ್ಥಾಪಕಾ ಅಧ್ಯಕ್ಷ ನಮ್ಮ ನಾಡ ಒಕ್ಕೂಟ (ರಿ ) ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ ಅವರನ್ನು ಬುಧವಾರ ಕುಂದಾಪುರದ ಆರ್..ಎನ್..ಶೆಟ್ಟಿ ಸಭಾಂಗಣದಲ್ಲಿ ನಡೆದ ಹಂಗಳೂರು ಸ್ಟೆಪ್ ಆನ್ ಸ್ಟೆಪ್ ಡಾನ್ಸ್ ಅಕಾಡೆಮಿಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕುಂದಾಪುರ ಪರಿಸರದಲ್ಲಿ ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸುಮಾರು 15ಸಾವಿರ […]