ಶಿರ್ವ(ನ,13): ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಚ್ಛತಾ ಶ್ರಮದಾನ- ಜನಾಂದೋಲನ ಕಾರ್ಯಕ್ರಮ ನ .12 ರಂದು ನಡೆಯಿತು. ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮಿಣ–2022’ ಜನಾಂದೋಲನ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ […]
Year: 2022
ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವಿಚಾರಗೋಷ್ಠಿ
ಹೆಮ್ಮಾಡಿ( ನ.13): ಇಲ್ಲಿನ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿ ನಲ್ಲಿ “ಕನ್ನಡ ನಾಡು-ನುಡಿ-ಸಂಸ್ಕೃತಿ” ವಿಷಯದ ಕುರಿತು ವಿದ್ಯಾರ್ಥಿ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಶ್ರೀ ಗಣೇಶ ಮೊಗವೀರರವರು ವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರಿನ ಅತಿಥಿ ಉಪನ್ಯಾಸಕರಾದ ಎಸ್, ಮಣಿಕಂಠರವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕನ್ನಡ ನಾಡು-ನುಡಿಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನಮ್ಮ ನೆಲ,ಜಲ, ಸಂಸ್ಕೃತಿ,ಸಂಪ್ರದಾಯವನ್ನು ಗೌರವಿಸುವಂತೆ ಕರೆ ನೀಡಿದರು. ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ […]
ಕೋಟೇಶ್ವರ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಂಧದಗುಡಿ ಸಿನೆಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಸಾಫ್ಟವೇರ್ ಕಂಪೆನಿಯ ಉದ್ಯೋಗಿ
ಕೋಟೇಶ್ವರ( ನ.13): ಬೆಂಗಳೂರು ಖಾಸಗಿ ಸಾಫ್ಟವೇರ್ ಕಂಪೆನಿಯ ಉದ್ಯೋಗಿ, ಗೋಪಾಡಿ ನಿವಾಸಿ ಸುಶ್ಮಿತಾ ಮೆಂಡನ್ ರವರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ , ವನ್ಯಜೀವಿ ಸಂಕುಲ,ಪ್ರಾಕೃತಿಕ ವೈಶಿಷ್ಟ್ಯದ ಕುರಿತು ತಿಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಸಂದೇಶ ಸಾರುವ ಗಂಧದ ಗುಡಿ ಚಲನಚಿತ್ರ ವೀಕ್ಷಣೆಯನ್ನು ಪಡು ಗೋಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಟೇಶ್ವರದ ಭಾರತ್ ಸಿನೆಮಾಸ್ ಚಿತ್ರಮಂದಿರದಲ್ಲಿ […]
ಕುಂದಾಪುರದ ಎಕ್ಸಲೆಂಟ್ ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ಕುಂದಾಪುರ( ನ,10): ಇಲ್ಲಿನ ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷಾ ಸಿದ್ಧತೆಯ ಉಪನ್ಯಾಸ ಕಾರ್ಯಾಗಾರ ನವೆಂಬರ್ 8 ರಂದು ನಡೆಯಿತು. ಕಾರ್ಯಗಾರದಲ್ಲಿ ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಸತೀಶ ಆರ್ ಮೈಸೂರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಇಂದಿನ ಯುವಕರೇ ನಾಳೆಯ ನೇತಾರರು”, ನೀವು ಈ ದೇಶವನ್ನು ಮುನ್ನೆಡೆಸಿ ರಕ್ಷಿಸುವವರು ಎಂದು ಹೇಳುತ್ತಾ, […]
ಓದಿನೊಂದಿಗೆ ಜೀವನ ಕೌಶಲ್ಯ ಬೆಳೆಸಿಕೊಳ್ಳಿ: ಡಾ.ಶ್ರೀಕಾಂತ್ ರಾವ್ ಸಿದ್ದಾಪುರ
ಕುಂದಾಪುರ (ನ,10): ಶಿಕ್ಷಣವೆoದರೆ ಕೇವಲ ಓದು, ಪರೀಕ್ಷೆ, ಅಂಕಗಳಿಕೆ ಮಾತ್ರವಲ್ಲ ಅದು ಕಲಿಕೆಯೊಂದಿಗೆ ಜೀವನ ಕೌಶಲ್ಯವನ್ನು ಬೆಳೆಸಿಕೊಳ್ಳವ ಕಲೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್ ರಾವ್ ಸಿದ್ದಾಪುರ ಅಭಿಪ್ರಾಯಪಟ್ಟರು. ಅವರು ಡಾIಬಿ.ಬಿ.ಹೆಗ್ಡೆ ಕಾಲೇಜಿನ 2022-23 ನೇ ಸಾಲಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಲು ಇರುವ […]
ತ್ರಿಶಾ ಪಿಯು ಕಾಲೇಜು ಕಲ್ಯಾಣಪುರ: ಕಾನೂನಿನ ಅರಿವು ಕಾರ್ಯಕ್ರಮ
ಕಲ್ಯಾಣಪುರ (ನ,9): ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಕಾರ್ಕಳ ಪ್ರವರ್ತಿತ ಕಲ್ಯಾಣಪುರದ ತ್ರಿಶಾ ಪಿಯು ಕಾಲೇಜಿನಲ್ಲಿ ನ.08 ರಂದು ಕಾನೂನು ಕಾನೂನಿನ ಅರಿವು ಹಾಗೂ ನೆರವಿನ ಮೂಲಕ ನಾಗರೀಕರ ಸಬಲೀಕರಣ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿದ ಮಿಲಾಗ್ರಿಸ್ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಶ್ರೀ ಜಯರಾಮ್ ಶೆಟ್ಟಿಗಾರ್ ಮಾತನಾಡಿ ಕಾನೂನಿನ ತಿಳುವಳಿಕೆ ಎಲ್ಲರಿಗೂ ಅನಿವಾರ್ಯ ಅದರಂತೆಯೇ ಸಾಮಾನ್ಯ ಜ್ಞಾನವು ಬಹಳ ಮುಖ್ಯ […]
ಎಂ.ಜಿ.ಎಂ ಕಾಲೇಜು: ಕನ್ನಡ ರಾಜ್ಯೋತ್ಸವ ವಿಶೇಷ ಉಪನ್ಯಾಸ
ಉಡುಪಿ(ನ,8): ಆಗಸ್ಟ್ 15ರಂದು ದೇಶಾಭಿಮಾನ, ನವೆಂಬರ್ 1ರಂದು ಭಾಷಾಭಿಮಾನಗಳು ಜಾಗೃತವಾಗುತ್ತವೆ. ದಿನನಿತ್ಯ ಕನ್ನಡವನ್ನು ಆಡಿದ ಅಥವಾ ಓದಿದ ಮಾತ್ರಕ್ಕೆ ಕನ್ನಡ ಬೆಳೆಯುವುದಿಲ್ಲ. ಭಾಷೆಯನ್ನು ಪ್ರೀತಿಸದೆ, ಗೌರವಿಸದೆ, ಮಮಕಾರವಿಲ್ಲದೆ ಭಾಷೆಯನ್ನು ಬೆಳೆಸುವುದಕ್ಕೆ ಅಥವಾ ಉಳಿಸುವುದಕ್ಕೆ ಸಾಧ್ಯವಿಲ್ಲ. ತಮಿಳರಿಗೆ, ಮಲಯಾಳಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಭಾಷಾಭಿಮಾನದ ಕೊರತೆ ಎದ್ದುಕಾಣುತ್ತದೆ. ನಾವು ಅವರಿಂದ ಭಾಷಾಭಿಮಾನ, ಭಾಷಿಕ ಪ್ರೀತಿ, ಗೌರವಗಳನ್ನು ಕಲಿಯಬೇಕಾಗಿದೆ. ಭಾಷೆ ಎಂಬುದು ಕೇವಲ ಸಂವಹನ ಸಾಧನ ಮಾತ್ರವಲ್ಲ, ಅದೊಂದು ಸಂಸ್ಕೃತಿಯೂ ಹೌದು, ಅದೊಂದು ಪರಂಪರೆಯೂ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಕುರಿತು ಮಾಹಿತಿ ಕಾರ್ಯಕ್ರಮ
ಕುಂದಾಪುರ( ನ,8) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ತರಬೇತಿ ವಿಭಾಗದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐಎಎಸ್ & ಕೆಎ ಎಸ್ ಮತ್ತು ಇತರೆ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಯುನಿವರ್ಸಲ್ ಕೋಚಿಂಗ್ ಸೆಂಟರ್ನ ತರಬೇತುದಾರರಾದ ಶ್ರೀ ಅಖಿಲೇಶ್ ಶೆಟ್ಟಿ ಮಾತನಾಡಿ, ಸರ್ಕಾರಿ […]
ಕುಂದಾಪುರದ ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕುಂದಾಪುರ( ನ,8): ಎಕ್ಸಲೆಂಟ್ ಪಿ. ಯು ಕಾಲೇಜು, ಸುಣ್ಣಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ , ವಕೀಲರ ಸಂಘ (ರಿ) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಎಕ್ಸಲೆಂಟ್ ಪಿ ಯು ಕಾಲೇಜಿನಲ್ಲಿ ನವೆಂಬರ್ 7 ರಂದು “ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರೀಕರ ಸಬಲೀಕರಣ” ಎನ್ನುವ ವಿಷಯದ ಕುರಿತು ಕಾರ್ಯಕ್ರಮ ಜರುಗಿತು. ಕಾನೂನು ಅರಿವು ಕಾರ್ಯಕ್ರಮವನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ […]
ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಮಾಲೀಕ ಶ್ರೀ ರಾಮ ದೇವಾಡಿಗ ನಿಧನ
ಕುಂದಾಪುರ( ನ,7): ಇಲ್ಲಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿ 1987 ರಿಂದ ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಎನ್ನುವ ಲೈಬ್ರರಿ ನಡೆಸುತ್ತಾ , ನೂರಾರು ಜನರಿಗೆ ಪುಸ್ತಕದ ರುಚಿ ಹತ್ತಿಸಿದ, ಅದರ ಮಾಲೀಕರಾದ ಶ್ರೀ ರಾಮ ದೇವಾಡಿಗರು (58) ನ.07 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮಾಸ್ತಿಕಟ್ಟೆ ಹತ್ತಿರ “ರಾಧಿಕಾ ಡ್ರೆಸ್ ಸೆಂಟರ್” ಅನ್ನುವ ಬಟ್ಟೆ ಅಂಗಡಿ ನಡೆಸಿ ಪ್ರಸಿದ್ಧರಾಗಿದ್ದ ಇವರು ಇತ್ತೀಚೆಗೆ ಹೊಸ ಅಂಗಡಿಗೆ ಸ್ಥಳಾಂತರಗೊಂಡಿದ್ದರು. ಕ್ರೀಡಾಪಟುವೂ ಆಗಿದ್ದ ರಾಮ ದೇವಾಡಿಗರು […]